ಹೊಳೆಹೊನ್ನೂರು ಜಂಕ್ಷನ್ ಬಳಿ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಬೈಕ್ ಸವಾರ ಸಾವುಕಂಡಿದ್ದಾನೆ. ಹಿಂಬದಿ ಕುಳಿತಿದ್ದ ಮಹಿಳೆಗೆ ತೀವ್ರ ಗಾಯಗಳಾಗಿದೆ. ಅಪಘಾತಕ್ಕೆ ಜಂಕ್ಷನ್ ಸರಿಪಡಿಸದ ಕಾರಣ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟಿಸಿದ್ದಾರೆ.
ಹೊಳೆಹೊನ್ನೂರಿನಿಂದ ಶಿವಮೊಗ್ಗದ ನೂತನ ರಸ್ತೆಯಲ್ಲಿ ಟಾಟಾ ಏಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಚಂದ್ರಪ್ಪ ಎಂಬಾತ ಸ್ಥಳದಲ್ಲೇ ಸಾವುಕಂಡಿದ್ದಾರೆ.
ಹೊಳೆಹೊನ್ನೂರಿನಿಂದ ಬೈಪಾಸ್ ಜಂಕ್ಷನ್ ಬಳಿ ಸೇರುವ ಜಾಗದಲ್ಲಿ ಟಾಟಾ ಏಸ್ ಬಂದು ಗುದ್ದಿದೆ. ಚಂದ್ರಪ್ಪ ಅತ್ತಿಗೆಯನ್ನ ಕೂರಿಸಿಕೊಂಡು ಬೈಕ್ ನಲ್ಲಿ ಸಾಗುವಾಗ ಈ ಘಟನೆ ಸಂಭವಿಸಿದೆ. ಘಟನೆಯನ್ನ ಖಂಡಿಸಿ ಹಾಗೂ ಜಂಕ್ಷನ್ ರಸ್ತೆಯ ಕಾಮಗಾರಿಯನ್ನ ಖಂಡಿಸಿ ಸ್ಥಳೀಯರು ಪ್ರತಿಭಟಿಸಿದ್ದಾರೆ.
Post a Comment