New TATA Motors show room inauguration || ನೂತನ ಟಾಟಾ ಹಿಟಚಿ ಶೋರೂಮ್ ಉದ್ಘಾಟನೆ


 ನಗರದ ಊರಗಡೂರು ಬೈಪಾಸ್ ರಸ್ತೆಯಲ್ಲಿ ಟಾಟಾ ಹಿಟಾಚಿಯವರ ಪವನ್ ಮೋಟಾರ್ಸ್ ಶೋರೂಮ್ ನ ಉದ್ಘಾಟನಾ ಸಮಾರಂಭ ನಡೆದಿದೆ. ಉದ್ಘಾಟನೆಯನ್ನ‌ ಟಾಟಾ ಹಿಟಾಚಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಉದ್ಘಾಟಿಸಿದರು. 


ಶೋರೂಮಿನಲ್ಲಿ, 25 ಲಕ್ಷದಿಂದ 1.25 ಕೋಟಿ ಹಿಟಾಚಿಗಳು ಲಭ್ಯವಿದೆ. 7 ಟನ್ ಒಳಗಿನ ಮಿನಿ ಎಸ್ಕಾವೇಟರ್ ನಲ್ಲಿ 8 ಮಾದರಿಗಳು, 8 ಟನ್ ಮೇಲಿನ ಮಾದರಿ ಬೇಕೆಂದರೆ ಶಿನ್ ರಾಯ್ ಫೈಮ್ ಹಿಟಾಚಿಗಳು ಎರಡ ಮಾದರಿಗಳಲ್ಲಿ ಲಭ್ಯವಾಗಲಿದೆ, 10 ಟನ್ ಗಳಲ್ಲಿ ಎರಡು ಮಾದರಿ, 20 ಟನ್ ಮಾದರಿಯ ಹಿಟಾಚಿಯಲ್ಲಿ 4 ಮಾದರಿಗಳು ಲಭ್ಯವಿದೆ. 



ಶೋರೂಮ್ ನಲ್ಲಿ, ರಿಸೆಪ್ಷನ್, ಮಾದರಿ ಹಿಟಾಚಿ ಸೆಲ್ಲಿಂಗ್ ಪಾಯಿಂಟ್ ಹಾಲ್, ಕ್ಯಾಶ ಕೌಂಟರ್, ಹಿಂಬದಿಯಲ್ಲಿ ಎರಡು ರಿಪೇರಿ ಬೇ, ಫ್ಯಾಬ್ರಿಕೇಷನ್ ಬೇ ಗಳನ್ನ ನಿರ್ಮಿಸಲಾಗಿದೆ. 


ಟಾಟಾ ಹಿಟಾಚಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್ ಮಾತನಾಡಿ, ಸಿಬ್ಬಂದಿಗಳಿಗೆ ಮತ್ತು ಗ್ರಾಹಕರಿಗೆ ಈ ಶೋರೂಮ್ ಅರ್ಪಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ಸೇವೆ ಮೂಲಕ ಗ್ರಾಹಕರ ಮನಸ್ಸನ್ನ‌ ಗೆಲ್ಲಬೇಕಿದೆ. ಖಡಕ್ ಪುರ್ ಮತ್ತು ಧಾರವಾಡದಲ್ಲಿ ಎಸ್ಕವೇಟರ್ ಮಾಡಲಾಗುತ್ತಿದೆ. ಜಪಾನ್ ಮೂಲಕ ಸಾಮಾಗ್ರಿಗಳನ್ನ ಆಮದು ಮಾಡಿಸಿಕೊಂಡು ಉತ್ತಮ ಗುಣಮಟ್ಟದ ಹಿಟಾಚಿ ನೀಡಲಾಗುತ್ತಿದೆ ಎಂದರು.

ಗ್ರಾಹಕರ ಅಗತ್ಯಗಳನ್ನ ಪೂರೈಸುವುದೇ ನಮ್ಮ ಕರ್ತವ್ಯ ಇದು ಅನಿವಾರ್ಯವಾಗಿದೆ. ಉತ್ತಮ ವಾತಾವರಣವನ್ನ ನಿರ್ಮಿಸಲಾಗಿದೆ/ 600 ಹಿಟಾಚಿಗಳನ್ನ ಕಳೆದ ನಾಲ್ಕುವರ್ಣದಲ್ಲಿ ಮಾರಲಾಗಿದೆ. ಟಾಟಾ ಹಿಟಾಚಿಯು ನಿಮ್ಮ ಶೋರೂಮ್ ಗೆ ಸಹಾಯಕವಾಗಲಿದೆ ಎಂದರು. 

ಶ್ರೀನಿವಾಸ್ ಅಕಿತ್,ಜೋನಲ್ ಮೊಹಮದ್ ಯೂಸಫ್ ಉಲ್ಲಾ, ರಾಘವೇಂದ್ರ ಅನಲ್ ಪಾಟಕ್, ಪಿನಾಕಿ ಮೊದಲಾದವರು ಉಪಸ್ಥಿತಿದ್ದರು. 


Post a Comment

Previous Post Next Post