Minister Jameer Hahamad said First I am Hindustani, next Kannadiga later Muslim || ನಾನು‌ಮೊದಲು ಹಿಂದೂಸ್ಥಾನಿ, ನಂತರ ಕನ್ನಡಿಗ ತದನಂತರ ಮುಸ್ಲೀಂ-ಜಮೀರ್ ಅಹ್ಮದ್

 

ನಾನು ಮೊದಲು ಹಿಂದೂಸ್ಥಾನಿ, ನಂತರ ಕನ್ನಡಿಗ ತದನಂತ ಮುಸ್ಲೀಂ ಎಂದು ವಸತಿ ಸಚಿವ ಜಮೀರ್ ಹೇಳಿದ್ದಾರೆ. 


ನಗರದ ಗೋವಿಂದಾ‌ಪುರ ಬಡಾವಣೆಯಲ್ಲಿ 652 ಮನೆಗಳ ಹಂಚಿಕೆ ಮಾಡುವ ಮೊದಲು ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ ಜಾತಿ ಇಟ್ಟುಕೊಂಡು ನಾನು ರಾಜಕಾರಣ ಮಾಡಿದವನಲ್ಲ.‌ಬದಲಿಗೆ ಯಾರು ಉತ್ತಮ ಕೆಲಸ ನಾಡಿದ್ದಾರೆ ಅದರ ಬಗ್ಗೆ ಮಾತನಾಡುವನು. ಬಿಎಸ್ ವೈ ಮತ್ತು ಬೊಮ್ಮಾಯಿ ಅವರಿಗೆ ಬಡವರ ಪರ ಕೆಲಸ ನಾಡಬಹುದಿತ್ತು. ಆದರೆ ಅದನ್ನ ಅವರು ಮಾಡಲಿಲ್ಲ. ಈಗಿನ ಸಿದ್ದರಾಮಯ್ಯ ಆ ಕೆಲಸ ನಾಡ್ತಾ ಇದ್ದಾರೆ ಎಂದು ಹೇಳಿದರು. 


ಇಲ್ಲಿನ 3000 ಮನೆಗಳನ್ನ ಮೂರು ಹಂತದಲ್ಲಿ 624 ಮನೆಗಳು ಹಂಚಿಕೆಯಾಗಿವೆ. ಬ್ಯಾಂಕ್ ಗೆ ಹಣಕಟ್ಟಿ ಸಾಲ ತಂದಿದ್ದಾರೆ. ಈಗ 650 ಜನ ಬ್ಯಾಂಕ್ ಸಾಲ ಪಡೆದು ಹಣಕಟ್ಟಿದ್ದಾರೆ. ಇವರಿಗೆ 1½ ಮನೆಗಳಲ್ಲಿ ಹಣ ವಾಪಾಸ್ ಕೊಡುವುದಾಗಿ ಭರವಸೆ ನೀಡಿದರು. 


ಬರುವ ತಿಂಗಳಲ್ಲಿ ರಾಜೀವ್ ಗಾಂಧಿ ವಸತಿ 4800 ಮನೆಗಳಲ್ಲಿ ಹಂಚಲಾಗುತ್ತದೆ. ಆಶ್ರಯ ಮನೆ ಹಂಚಿದ್ದು ಬಂಗಾರಪ್ಪ ಸಾಹೇಬರು. 1995 ರಿಂದ 2000 ರ ಇಸವಿ ವರೆಗೆ ಮನೆಗಳ ಹಂಚಿಕೆಗೆ ಭ್ರಷ್ಠಾಚಾರ ಇರಲಿಲ್ಲ. ಈಗ ಹೆಚ್ಚಾಗಿದೆ ಎಂದು ಪರೋಕ್ಷವಾಗಿ ಕಳಕಳಿ ವ್ಯಕ್ತಪಡಿಸಿದರು.


ಬೆಂಗಳೂರಿನಲ್ಲಿ ಸ್ಲಂ ಏರಿಯಾದಲ್ಲಿ ಎರಡು ಲಕ್ಷ ಅಡ್ವಾನ್ಸ್ ಮತ್ತು 5-6 ಸಾವಿರ ಮನೆ ಬಾಡಿಗೆ ಸಿಗುತ್ತದೆ. ಇದನ್ನ ಗಮನಿಸಿ ಸರ್ಕಾರಗಳು ಬಡವರಿಗೆ ಮನೆ ಹಂಚಲಾಯಿತು.‌ ಬೊಮ್ಮಾಯಿ ಅವರು ಮನೆಹಂಚಿದರು. ಬೆಂಗಳೂರಿನಲ್ಲಿ ಬಹಳ ಜನ ಬಿಜೆಪಿ ಶಾಸಕರಿದ್ದಾರೆ 28ವರಲ್ಲಿ 9 ಜನ ಕಾಂಗ್ರೆಸ್ ಶಾಸಕರಿದ್ದಾರೆ ಉಳಿದವರು ಬಿಜೆಪಿಯರಿದ್ದಾರೆ. ಅವರೆಲ್ಲಾ ಸಿಎಂ ಸಿದ್ದರಾಮಯ್ಯನವರಿಗೆ ಭೇಟಿಯಾಗಿ ಮನೆ ಹಂಚಲು ಕೋರಿದರು. 


ಈಗ ಸಿದ್ದರಾಮಯ್ಯ 4% ಹಣ ಕಟ್ಟಬೇಕು ನಾವು ಲೋನ್ ಮಾಡಿ ಬಡವರಿಗೆ ಮನೆ ಕಟ್ಟಿಕೊಡಾಗುತ್ತದೆ. ನಾನು ಪಕ್ಷವನ್ನ ನೋಡಲ್ಲ. ಬಿಎಸ್ ವೈ ಬೊಮ್ಮಾಯಿ ಒಳ್ಳೆ ಕೆಲಸ ಮಾಡಿದ್ದರೆ ಮೆಚ್ಚಿಕೊಳ್ಳುತ್ತೇವೆ. ಬಡವರ ಬಗ್ಗೆ ಕಾಳಜಿ ಇದ್ದಿದ್ದರೆ ಸಿದ್ದರಾಮಯ್ಯ ನವರ ರೀತಿ ಬಿಎಸ್ ವೈ ಮತ್ತು ಬೊಮ್ಮಾಯಿ ಸಿದ್ದರಾಮಯ್ಯನವರ ಬಡವರ ರೀತಿ ಕೆಲಸ ಮಾಡಬೇಕಿತ್ತು ಎಂದು ಟಾಂಗ್ ನೀಡಿದರು. 


ನಾನು ಮೊದಲು ಹಿಂದೂಸ್ಥಾನಿ ನಂತರ ಕನ್ನಡಿಗ ಆಮೇಲೆ ಮುಸ್ಲೀಂ ನಾನು. ಜಾತಿ ನಾಡಿವುದಾದರೆ. ಸ್ಲಂ ಬೋರ್ಡ್ ನ 1 ಲಕ್ಷ್ಕೂ ಮನೆಗಳು ಹಂಚಿಕೆ ಸಮಸ್ಯೆಯಾಗಿವೆ. ಅವುಗಳನ್ನ ನಿವಾರಿಸಿ ಹಂಚಲಾಗುತ್ತಿದೆ. 41 ಸಾವಿರ ಮನೆಯಲ್ಲಿ ಬೆನಿಫಿಷರಿಇದ್ದಾರೆ ಎಂದರು. 


ಗೋಪಿಶೆಟ್ಟಿ ಮತ್ತು ಗೋವಿಂದಾಪುರ ಆಶ್ರಯದಲ್ಲಿ ಉಳಿದ 1455 ಮನೆಗಳನ್ನ ಮುಂದಿನ ಮನೆಗಳಲ್ಲಿ ಹಂಚಲಾಗುತ್ತದೆ. ಬಸವ ಮತ್ತು ಅಙಬೇಡ್ಕರ್ ಮತ್ತು ವಾಚಪೇಯಿಯಲ್ಲಿ ಪ್ರತಿ ವರ್ಷ 3 ಲಕ್ಷ ಮನೆಗಳನ್ನ ಹಂಚಲಾಗುವ ಗುರಿಹೊಂದಲಾಗಿದೆ. ಈ ಬಜೆಟ್ ನಲ್ಲಿ ಸಿಎಂ ಹಷಕೊಡುವ ಭರವಸೆ ಇದೆ. 5 ವರ್ಷದಿಂದ ಸ್ಲಂ ಬೋರ್ಡ್ನಿಂದ ಮನೆ ಹಂಚಿಲ್ಲ ಈ ಬಾರಿ ಅದನ್ನ 3 ಲಕ್ಷಕ್ಕೆ ಹೆಚ್ಚಿಸಿ ಎಂದರು.


ನನ್ನ ಇಲಾಖೆಯಲ್ಲಿ ಏನು ಕೆಲಸ ಇದೆ. ಅದನ್ನ ಮಾಡಿಕೊಡುವೆ ಎರಡು ಬಾರಿ ಮನೆ ಹಂಚಿಕೆ ಮುಂದೂಡಲ್ಪಟ್ಟಿತ್ತು. ರಸ್ತೆಗಳು ಆಗಲು ಕಾಯ್ತಾ ಇದ್ದೆ ಆಗಿದೆ ಬಂದಿದ್ದೇನೆ. ಹೆಚ್ಚಿನ ಸೇವೆಗೆ ಕೆಲಸ ಮಾಡುವೆ‌. 


ನಂತರ ಜಮೀರ್ ಅವರು 652 ಮನೆಗಳನ್ನ ಲಾಟರಿ ಮೂಲಕ ಫಲಾನುಭಾವಿಗಳ ಹೆಸರನ್ನ ಎತ್ತಲಾಯಿತು. ಮೊದಲು ಶ್ರೀಮತಿ ವೇದಾವತಿ ಸುಂದರಾಜ್ ನಾಯ್ಡು ಆಯ್ಕೆಯಾದರು. ಬಿ 33 ಜಿ2 ಮನೆ ಎರಡನೇಯವರ ಹೆಸರನ್ನ ಬಿ12 ಜಿ8 ಮನೆಯನ್ನ ಗುರುಮೂರ್ತಿಯವರನ್ನ ಶಾಸಕ ಚೆನ್ನಿಯವರ ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿದರು. ಶ್ರೀಮತಿ ರೂಪ ಕೆ ಬಿ22 ಜಿ 8 ಅವರನ್ನ ಎಂಎಲ್ಸಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು ಹೀಗೆ ಮೊದಲ 10 ಜನರನ್ನ ಈ ವೇಳೆ ಲಾಟರಿ ಮೂಲಕ ಎತ್ತಲಾಯಿತು. 

Post a Comment

Previous Post Next Post