ಸರ್ಕಾರಕ್ಕೆ ಇಂದಿನ ಸಭೆಯ ಬಗ್ಗೆ ಮಾಹಿತಿ ನೀಡಲು ತಮ್ಮ ಮೇಲಾಧಿಕಾರಿಗಳ ಬಳಿ ಚರ್ಚಿಸಿ ಮಾಹಿತಿಯನ್ನು ನೀಡುವುದಾಗಿ ವಲಯ ಅರಣ್ಯಾಧಿಕಾರಿ ಆಶಿಶ್ ರೆಡ್ಡಿ ತಿಳಿಸಿದರು
ಬಗರ್ ಹುಕುಂ ಸಾಗುವಳಿದಾರರಿಗೆ ಅರಣ್ಯ ಇಲಾಖೆ ನೀಡಿರುವ ತಿಳುವಳಿಕೆ ಪತ್ರದ ಸಂಬಂಧ ಶಾಸಕರು ತಮ್ಮ ಗೃಹ ಕಚೇರಿಯಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ತಿಳಿಸಿದರು
ಅರಣ್ಯ ಇಲಾಖೆಯ ಹೊಸದ ರೈತರೊಂದಿಗೆ ಇರುವುದು ರೈತರಿಗೆ ವ್ಯತಿವೃತ್ತವಾಗಿ ನಡೆದುಕೊಂಡಿಲ್ಲ ಎಂದರು ಸಮಸ್ಯೆ ಉಂಟಾಗಿದೆ ಅದನ್ನು ಪರಿಹರಿಸಲು ಮಾರ್ಗವನ್ನು ಕಂಡುಕೊಳ್ಳಲು ರೈತರು ಮತ್ತು ಇಲಾಖೆ ಶಾಂತಿಯಿಂದ ವರ್ತಿಸೋಣ ಎಂದು ಸಲಹೆ ನೀಡಿದರು ಕೆಲಸ ರೈತರಿಗೆ ಮಾತ್ರ ಇಲಾಖೆ ತಿಳುವಳಿಕೆ ಪತ್ರ ನೀಡಿದೆ ಆದರೆ ಅದನ್ನು ಗಂಭೀರವಾಗಿ ಪರಿಗಣಿಸುವುದು ಬೇಡ ಎಂದು ರೈತರಿಗೆ ಕಿವಿ ಮಾತು ಹೇಳಿದರು ಕೆಲವರಿಗೆ ತಿಳುವಳಿಕೆ ಪತ್ರ ತಲುಪಿಲ್ಲ. ಹಾಗೆಂದು ಅವರ ವಿರುದ್ಧವಾಗಿ ಕೆಲವರಿಗೆ ಮಾತ್ರ ತಿಳುವಳಿಕೆ ಪತ್ರ ನೀಡಿದ್ದೇವೆ ಎಂದು ಆರೋಪಿಸುವುದು ಸರಿಯಲ್ಲ ಎಂದರು ಮೂರು ಎಕರೆಗಿಂತ ಕಡಿಮೆ ಇರುವ ರೈತರನ್ನು ಒಕ್ಕಲಿಬ್ಬಿಸಿದಂತೆ ಸರ್ಕಾರ ಕಾನೂನನ್ನು ರಚಿಸಿದೆ ಅದರ ಅಡಿಯಲ್ಲಿ ಬರುವ ರೈತರು ಭಯಪಡಬೇಕಾಗಿಲ್ಲ ಎಂದು ತಿಳಿಸಿದರು ತಾವು ಸಹ ಸರ್ಕಾರ ಅಧೀನದಲ್ಲಿ ಬರುವ ಅಧಿಕಾರಿ ಸರ್ಕಾರ ತಿಳಿಸುವ ಕಾರ್ಯವನ್ನು ಚಾಚು ತಪ್ಪದೆ ಮಾಡುವುದು ತಮ್ಮ ಕರ್ತವ್ಯ ಎಂದರು ಯಾವುದೇ ಮುಳುಗಡೆ ಪ್ರದೇಶ ಅಥವಾ ಸರ್ಕಾರ ರಸ್ತೆ ಕೆರೆ ಚರಂಡಿ ನಿರ್ಮಾಣ ಮಾಡಲು ರೈತರ ಜಮೀನನ್ನು ಪಡೆದುಕೊಂಡಿದ್ದಲ್ಲಿ ಅವರಿಗೆ ನ್ಯಾಯಯುತವಾದ ಪರಿಹಾರ ಅಥವಾ ಬೇರೆಡೆ ಜಮೀನು ದೊರಕುವುದು ನಿಸ್ಸಂದೇಹ ಎಂದರು.
ತಮ್ಮ ಇಲಾಖೆ ಸುಪ್ರೀಂ ಕೋರ್ಟಿನ ಆದೇಶವನ್ನು ಪಾಲಿಸುತ್ತಿದೆ ಹೊರತು ದುರುದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು. ತಿಳುವಳಿಕೆ ಪತ್ರ ಬಂದಿರುವ ರೈತರು ಸೂಕ್ತ ದಾಖಲೆಗಳನ್ನು ಕಂದಾಯ ಇಲಾಖೆಗೆ ಸಲ್ಲಿಸುವಂತೆ ಮನವಿ ಮಾಡಿದರು ಅರಣ್ಯ ಇಲಾಖೆಯಿಂದ ರೈತರಿಗೆ ಬೇಕಾಗುವ ಸಹಾಯವನ್ನು ಇಲಾಖೆ ಮಾಡಲು ಯಾವುದೇ ಹಿಂಜರಿಕೆಯಲ್ಲ ಎಂದು ತಿಳಿಸಿದರು.
ಕೆಆರ್ ಡಿಎಲ್ ಅಧ್ಯಕ್ಷ ಹಾಗೂ ಶಾಸಕ ಬಿಕೆ ಸಂಗಮೇಶ್ವರವರು ಮಾತನಾಡಿ ಪ್ರಾಣಹೋದರು ಹೋರಾಟವನ್ನು ಹತ್ತಿಕ್ಕಲಾಗುವುದಿಲ್ಲ ತಾವು ಎಂದಿಗೂ ರೈತರ ಪರ ಎಂದು ಘೋಷಿಸಿ ಈ ಸಂಬಂಧ ಸಚಿವ ಈಶ್ವರ ಕಂಡ್ರೆಯವರ ಬಳಿ ಮಾತನಾಡುವುದಾಗಿ ಅಲ್ಲದೆ ವಿಧಾನಸಭೆಯಲ್ಲಿ ಈ ವಿಚಾರವನ್ನು ಮಂಡಿಸುವುದಾಗಿ ಆಶ್ವಾಸನೆ ನೀಡಿದರು ನ್ಯಾಯಾಲಯದಲ್ಲಿ ರೈತರ ಪರ ದಾವೇ ಹೂಡಲು ಅದಕ್ಕೆ ತಗಲುವ ವೆಚ್ಚವನ್ನು ತಾವು ಬರಿಸುವುದಾಗಿ ತಿಳಿಸಿದರು
ಉಪ ವಿಭಾಗಾಧಿಕಾರಿ ಸತ್ಯನಾರಾಯಣ ರವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಶಾಸಕರು ತಮ್ಮ ಗಟ್ಟಿ ನಿರ್ಧಾರವನ್ನು ಸಭೆಗೆ ತಿಳಿಸಿದ್ದಾರೆ ತಾವು ಸಹ ನ್ಯಾಯದ ಪರವಾಗಿ ಇರುವುದಾಗಿ ತಿಳಿಸಿ ವಿನಾಕಾರಣ ಕಂದಾಯ ಇಲಾಖೆಯಾಗಲಿ ಅಥವಾ ಅರಣ್ಯ ಇಲಾಖೆಯಾಗಲಿ ತಿಳುವಳಿಕೆ ಪತ್ರವನ್ನು ನೀಡಿಲ್ಲ ರೈತರನ್ನು ಒಕ್ಕಲಿಪಿಸುವುದು ತಮ್ಮ ಉದ್ದೇಶವಲ್ಲ ಅಥವಾ ತಮ್ಮ ಇಲಾಖೆಯ ಉದ್ದೇಶವು ಅಲ್ಲ ಎಂದು ಸ್ಪಷ್ಟಪಡಿಸಿದರು ತಿಳುವಳಿಕೆ ಪತ್ರ ಪಡೆದ ರೈತರು ಚಿಂತಿಸಬೇಕಿಲ್ಲ ಅವರಿಗೆ ಸಾಕಷ್ಟು ಕಾಲಾವಕಾಶ ಇರುವುದು ಆ ಕಾಲಾವಕಾಶವನ್ನು ಉಪಯೋಗಿಸಿಕೊಂಡು ರೈತರು ತಮ್ಮ ಮುಂದಿನ ನಡೆಯನ್ನು ರೂಪಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು ಶಾಸಕರ ಬಳಿ ಈ ಸಂಬಂಧ ಮತ್ತು ಸರ್ಕಾರದಿಂದ ಬರುವ ಯಾವುದೇ ವಿಚಾರವನ್ನು ಚರ್ಚಿಸಿ ಮುಂದುವರೆಯವಲಾಗುವುದು ಎಂದು ತಿಳಿಸಿದರು
ನಗರಸಭಾ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಬೇಕೆ ಮೋಹನ್ ಮಾತನಾಡಿ ತಿಳುವಳಿಕೆ ಪತ್ರ ಪಡೆದ ರೈತರು ನಿದ್ದೆಗೆಟ್ಟು ಚಿಂತೆಗೆ ಒಳಗಾಗಿದ್ದಾರೆ ಯಾವ ಆಧಾರದ ಮೇಲೆ ಅರಣ್ಯ ಇಲಾಖೆ ಅಥವಾ ಕಂದಾಯ ಇಲಾಖೆ ರೈತರಿಗೆ ಪತ್ರ ನೀಡಿದೆ ಎಂದು ಸ್ಪಷ್ಟಪಡಿಸಬೇಕು ಎಂದು ವಲಯ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂಬಂಧ ಉತ್ತರ ನೀಡಿದ ವಲಯ ಅರಣ್ಯಾಧಿಕಾರಿಗಳು ಸರ್ಕಾರ ಆದೇಶಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವೇ ಕಾರಣವಾಗಿದೆ ತಮಗೆ ನ್ಯಾಯಾಲಯದ ಆದೇಶವನ್ನು ಮೀರಲು ಆಗುವುದಿಲ್ಲ ಆದ್ದರಿಂದ ತಮ್ಮ ಇಲಾಖೆ ಸಂಬಂಧಪಟ್ಟ ರೈತರಿಗೆ ತಿಳುವಳಿಕೆ ಪತ್ರ ನೀಡಿದೆ ಎಂದು ತಿಳಿಸಿದರು
ತಮ್ಮ ಗಮನಕ್ಕೆ ಬಂದಂತೆ ನ್ಯಾಯಾಲಯ ರೈತರಿಗೆ ತಿಳುವಳಿಕೆ ಪತ್ರ ನೀಡಬೇಕೆಂಬ ಆದೇಶವನ್ನು ಹೊರಡಿಸಿಲ್ಲ ಅಂತಹ ಆದೇಶವೇನಾದರೂ ಸರ್ಕಾರದ ಬಳಿ ಅಥವಾ ತಮ್ಮ ಇಲಾಖೆಯ ಬಳಿ ಇದ್ದಲ್ಲಿ ಸಭೆಯ ಮುಂದೆ ಹಾಜರ್ ಪಡಿಸಿ ಎಂದು ವಲಯ ಅರಣ್ಯ ಅಧಿಕಾರಿಗಳನ್ನು ಒತ್ತಾಯಿಸಿದರು ಇಂತಹ ಪ್ರಕರಣಗಳಿಂದಾಗಿಯೇ ಮತ್ತು ಮೈಕ್ರೋ ಫೈನಾನ್ಸ್ ಗಳಿಂದಾಗಿಯೇ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ ಇದನ್ನು ಕೂಡಲೇ ತಡೆಗಟ್ಟಬೇಕು ಇದಕ್ಕೆ ಶಾಸಕರು ಸಹ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು. ಕೆಲ ಜಿಲ್ಲೆಗಳಲ್ಲಿ ಅಥವಾ ತಾಲೂಕುಗಳಲ್ಲಿ ಸಾವಿರಾರು ಎಕರೆ ಭೂಮಿಯನ್ನು ಶ್ರೀಮಂತ ವರ್ಗ ವಶಪಡಿಸಿಕೊಂಡು ತನಗೆ ಬೇಕಾದ ಬೆಳೆ ಬೆಳೆದುಕೊಳ್ಳುತ್ತಿದ್ದಾರೆ ಅಂತವರಿಗೆ ಸರ್ಕಾರ ತಿಳುವಳಿಕೆ ಪತ್ರ ನೀಡುವ ಮೂಲಕ ಸರ್ಕಾರದ ಜಮೀನನ್ನು ವಶಪಡಿಸಿಕೊಳ್ಳಲಿ ಎಂದು ಆಗ್ರಹಿಸಿದರು ಪ್ರಸ್ತುತ ಕೇವಲ ಒಂದು ಎರಡು ಎಕರೆ ಮೂರು ಅಥವಾ ನಾಲ್ಕು ಎಕರೆ ಭೂಮಿಯನ್ನು ಹೊಂದಿರುವ ಬಡ ರೈತನಿಗೆ ತೊಂದರೆಯನ್ನು ನೀಡಬಹುದು ಬೇಡ ಆತನ ಜೀವನ ಆ ಒಂದು ಭೂಮಿಯಲ್ಲಿ ಇರುವುದು ಅವನಿಂದ ಜಮೀನನ್ನು ಕಿತ್ತುಕೊಂಡರೆ ಅಥವಾ ಬದುಕುಳಿಯುವುದು ಕಷ್ಟಕರ ಎಂದು ತಿಳಿಸಿದರು
ಇದಕ್ಕೆ ಪ್ರತ್ಯುತ್ತರ ನೀಡಿದ ವಲಯ ಅರಣ್ಯಾಧಿಕಾರಿಗಳು ಮತ್ತು ಕಂದಾಯ ಅಧಿಕಾರಿಗಳು ರೈತರನ್ನು ಒಕ್ಕಲಿಬ್ಬಿಸುವುದು ತಮ್ಮ ಇಲಾಖೆಯ ಉದ್ದೇಶವಲ್ಲ ಹೈಕೋರ್ಟ್ ನಿಂದ ಬಂದ ಆದೇಶದ ಮೇರೆಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಸರ್ಕಾರದ ಸುತ್ತೋಲೆಗಳನ್ನು ಪಡೆದು ಕಾಯ್ದೆ 108 ರ ಅಡಿ ರೈತರಿಗೆ ತಿಳುವಳಿಕೆ ಪತ್ರವನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು
ತಹಶೀಲ್ದಾರ್ ಪರಸಪ್ಪ ಕುರುಬ ರೇಂಜರ್ ದುಗ್ಗಪ್ಪ ಪಂಚ ಗ್ಯಾರಂಟಿಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಣಿ ಶೇಖರ್ ನಗರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ರಿಯಾಜ್, ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಸ್ ಕುಮಾರ್ ಗ್ರಾಮಾಂತರ ಅಧ್ಯಕ್ಷ ಹೆಚ್ ಎಲ್ ಷಡಾಕ್ಷರಿ ಸೇರಿದಂತೆ ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
Post a Comment