ರಾಜ್ಯ ಸರ್ಕಾರ ನಿವೃತ್ತ ಸರ್ಕಾರ ನೌಕರರಿಗೆ 7 ನೇ ವೇತನದಲ್ಲಿ ಲೋಪವಾಗಿದೆ. ಈ ಬೇಡಿಕೆಯನ್ನ ಈಡೇರಿಸುವಂತೆ ಆಗ್ರಹಿಸಿ ಫೆ.28 ರಂದು ಪ್ರತಿಭಟಿಸಲಾಗುತ್ತಿದೆ ಎಂದು ಜಿಲ್ಲಾ ಸಂಚಾಲಕ ಪರಮೇಶ್ವರಪ್ಪ ದೂರಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 7 ನೇ ವೇತನದಲ್ಲಿ ಆಗಿರುವ ಆರ್ಥಿಕನಷ್ಠವನ್ನ ಸರಿಪಡಿಸಿ ಎಂದು ಆಗ್ರಹಿಸಿ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಎಂಎಲ್ ಎ, ಎಂಎಲ್ಸಿ ಹಾಗೂ ಜನಪ್ರತಿನಿಧಿಗಳ ಮೂಲಕ ಪ್ರತಿಭಟನೆ ನಡೆಸಲಾಗಿದೆ. 17 ಬಾರಿ ಸಿಎಂನ್ನ ಭೇಟಿಯಾಗಿದ್ದೇವೆ ಯಾವುದೇ ಪ್ರಯೋಜನವಾಗಿರಲಿಲ್ಲ. ನೋಡೋಣ ಎಂದು ಮುಂದೂಡಿದ್ದಾರೆ.
ಬೆಳಗಾವಿಯಲ್ಲಿ ಸಿಎಂನ್ನ ಭೇಟಿಯಾದಾಗ ಪ್ರಧಾನ ಕಾರ್ಯದರ್ಶಿಗಳು ಭೇಟಿ ಮಾಡಿ ಸುವರ್ಣ ಸೌಧದಲ್ಲಿ ಸಿಎಂ ಭೇಟಿಯಾದಾಗ ಆರ್ಥಿಕ ವ್ಯವಸ್ಥೆ ಸರಿಪಡಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಬೇಡಿಕೆ ಬಗ್ಗೆ ಸರ್ಕಾರ ಮಾತನಾಡುತ್ತಿಲ್ಲ. ಹಾಗಾಗಿ
28/2/2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟಿಸಲಾಗುತ್ತಿದೆ. ಐಆರ್ ನ್ನ 2023 ರಲ್ಲಿ ನೀಡಲಾಗಿದೆ. 7 ನೇ ವೇತನದಲ್ಲಿ ಬೇಸಿಕ್ ನೀಡಲಾಗಿದೆ ಅರಿಯರ್ಸ್ ನೀಡಲಾಗಿಲ್ಲ. ಹಾಗಾಗಿ ಪ್ರತಿಭಟಿಸಲಾಗಿದೆ.
26 ಸಾವಿರ ನೌಕರರು ನಿವೃತ್ತರಿದ್ದಾರೆ. ಇವರಿಗೆ ಆರ್ಥಿಕ ಸವಲತ್ತು ನೀಡಬೇಕು. 2022 ರಿಂದ 2024 ರ ವರೆಗಿನ 25 ತಿಂಗಳಲ್ಲಿ ನಿವೃತ್ತರಾದವರು 26 ಸಾವಿರ ನೌಕರರಿಗೆ 7 ನೇ ವೇತನದಲ್ಲಿ ಆರ್ಥಿಕ ತೊಂದರೆ ಉಂಟಾಗಿದೆ. 8-25 ಲಕ್ಷದವರೆಗೆ ವ್ಯತ್ಯಾಸವಾಗುತ್ತಿದೆ. ಒಟ್ಟು ಸುಮಾರು 1900 ಕೋಟಿ ಹಣ ಬರಬೇಕಿದೆ ಎಂದರು.
Conclusion-Indefnite Protest, Retired servant
Post a Comment