Home for the homeless || ವಸತಿ ರಹಿತರಿಗೆ ವಸತಿ, ನಿವೇಶನ ರಹಿತರಿಗೆ ನಿವೇಶನ, ಮಾ.31 ರೊಳಗೆ ಸಮೀಕ್ಷೆಯಲ್ಲಿ ಭಾಗಿಯಾಗಿ

 

ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಯನ್ನು 2024-25 ರಿಂದ 2028-29 ರ ಅವಧಿಗೆ ಅಂದರೆ ಮುಂದಿನ 5 ವರ್ಷಗಳವರೆಗೆ ವಿಸ್ತರಿಸಿದ್ದು, 2 ಕೋಟಿ ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನೆಯ ಮುಂದುವರೆದ ಭಾಗವಾಗಿ ಅರ್ಹ ವಸತಿ ರಹಿತ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು ಕೇಂದ್ರ ಸರ್ಕಾರವು ನಿರ್ಧರಿಸಿದೆ.


ಅರ್ಹ ವಸತಿ ರಹಿತ ಹಾಗೂ ನಿವೇಶನ ರಹಿತರ ಸಮೀಕ್ಷೆ ನಡೆಸಲು Awas+mobile app deploy , app ಬಳಸಿ ದಿನಾಂಕ: 31.03.2025 ರೊಳಗೆ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿರುತ್ತದೆ.


2024-25 ನೇ ಸಾಲಿನಲ್ಲಿ ದೇಶದಲ್ಲಿ 84,15,139 ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಕರ್ನಾಟಕ ರಾಜ್ಯದಲ್ಲಿ 7,20,731 ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಿದೆ. ಅದರಂತೆ ಶಿವಮೊಗ್ಗ ಜಿಲ್ಲೆಯಲ್ಲಿ 11,143 ಮನೆಗಳನ್ನು ನಿರ್ಮಾಣ ಮಾಡಲು ಗುರಿಯನ್ನು ನಿಗಧಿಪಡಿಸಿದೆ. 7 ತಾಲೂಕಿನಿಂದ 1799 ಪ.ಜಾ ಮತ್ತು ಪಂಗಡದವರಿಗೆ, ಸಾಮಾನ್ಯದವರಿಗೆ 9344 ಮನೆಗಳ ಗುರಿಯನ್ನ ಹೊಂದಲಾಗಿದೆ.


ಕೇಂದ್ರ ಸರ್ಕಾರವು ತಿಳಿಸಿರುವಂತೆ ಪ್ರಧಾನ ಮಂತ್ರಿ ಆವಾಸ್ ಯೋಜನೆ (ಗ್ರಾಮಿಣ) ಅಡಿ ಅರ್ಹ ವಸತಿ ರಹಿತರ ಹಾಗೂ ನಿವೇಶನ ರಹಿತರ ಸಮೀಕ್ಷೆಯನ್ನು ಈಗಾಗಲೇ ನೇಮಕ ಮಾಡಲಾದ ಸರ್ವೇಯರ್ ಗಳು "AwasPlus 2024" ಮೊಬೈಲ್ ಅಪ್ಲಿಕೇಷನ್ ನಲ್ಲಿ 'Assisted Survey" ಆಯ್ಕೆ ಮೂಲಕ ಹಾಗೂ ಯಾವುದೇ ವಸತಿ/ನಿವೇಶನ ರಹಿತರು ಸಮೀಕ್ಷೆಯಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸ್ವತಃ ಫಲಾನುಭವಿ ಮಾಡುವುದಾದಲ್ಲಿ "Self Survey" ಆಯ್ಕೆ ಮೂಲಕ ಸಮೀಕ್ಷೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. "Self Survey" ಕುರಿತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತಿಳುವಳಿಕೆ ನೀಡಲು IEC ಚಟುವಟಿಕೆಗಳನ್ನು ಕೈಗೊಂಡು ವಸತಿ/ನಿವೇಶನ ರಹಿತರ ಸಮೀಕ್ಷೆಯಿಂದ ವಂಚಿತರಾಗದಂತೆ ಕ್ರಮ ವಹಿಸಬೇಕೆಂದು ಹಾಗೂ ವಸತಿ/ನಿವೇಶನ ರಹಿತರು ಇದರ ಪ್ರಯೋಜನವನ್ನು ಪಡೆಯಬೇಕೆಂದು ಸಂಸದರಾದ ಶ್ರೀ ಬಿ.ವ್ಯ ರಾಘವೇಂದ್ರರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ವಸತಿ ರಹಿತ ಹಾಗೂ ನಿವೇಶನ ರಹಿತರಿಗೆ ಮನೆಗಳನ್ನು ನಿರ್ಮಿಸಿ ಕೊಡಲು ದಿಟ್ಟ ಕ್ರಮ ಕೈಗೊಂಡ ದೇಶದ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿಯವರಿಗೆ ಹಾಗೂ ಕೇಂದ್ರದ ವಸತಿ ಸಚಿವರಾದ ಶ್ರೀ ಮನೋಹರ್ ಲಾಲ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

Post a Comment

Previous Post Next Post