ಭದ್ರಾವತಿಯಲ್ಲಿ ಮೂರು ದಿನಗಳ ಅಂತರದಲ್ಲಿ ಮತ್ತೋರ್ವ ರೌಡಿಶೀಟರ್ ಕಾಲಿಗೆ ಗುಂಡೇಟು ಬಿದ್ದಿದೆ. ರೌಡಿಶೀಟರ್ ಗಳ ಹುಟ್ಟಡಗಿಸಲು ಎಸ್ಪಿ ಮಿಥುನ್ ಕುಮಾರ್ ದಿಟ್ಟ ನಿರ್ಧಾರ ಕೈಗೊಂಡಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶುಕ್ರವಾರ ರೌಡಿ ಶೀಟರ್ ಗುಂಡ ಯಾನೆ ರವಿ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಮೂರು ದಿನದಲ್ಲಿ ಭದ್ರಾವತಿಯಲ್ಲಿ ಮತ್ತೊಬ್ಬ ರೌಡಿ ಶೀಟರ್ ಕಾಲಿಗೆ ಪಿಐ ನಾಗಮ್ಮ ರಿಂದ ಗುಂಡು ಹಾರಿಸಲಾಗಿದೆ. ಭದ್ರಾವತಿಯಲ್ಲಿ ಎಸ್ಪಿ ಮಿಥುನ್ ಕುಮಾರ್ ವಾಶ್ ಔಟ್ ಕಾರ್ಯಕ್ರಮ ಕೈಗೊಂಡಂತೆ ಕಂಡು ಬರುತ್ತಿದೆ. ಹದಗೆಟ್ಟ ಭದ್ರಾವತಿಯಲ್ಲಿ ಎಸ್ಪಿ ಅವರು ಸ್ವಚ್ಛ ಕಾರ್ಯಕ್ಕೆ ಕಯಹಾಕಿದ್ದಾರೆ.
ಶಹೀದ್ ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ. ಆತ ರೌಡಿ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ, ಈತನ ವಿರುದ್ಧ 12 ಪ್ರಕರಣಗಳಿದ್ದವು. ಪೊಲೀಸರ ಮೇಲಿನ ಹಲ್ಲೆ ಸೇರಿದಂತೆ 12 ಪ್ರಕರಣಗಳಿಗೆ ಬೇಕಿದ್ದ ಶಹೀದ್ ನ್ಯಾಯಾಲಯದ ಕಲಾಗಳಿಂದ ತಪ್ಪಿಸಿಕೊಂಡಿದ್ದ.
ಇಂದು ಭದೃಅವತಿ ನಾಗಮ್ಮ, ಪಿಸಿ ನಾಗರಾಜ್ ಹಿಡಿಯಲು ಹೋದಾಗ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಶಹೀದ್ ಪಿಸಿ ನಸಗರಾಜ್ ಮೇಲೆ ದಾಳಿ ನಡೆಸಿದ್ದ ನಾಗಮ್ಮನವರ ಎಚ್ಚರಿಕೆಯ ನಡುವೆಯೂ ನಾಗರಾಜ್ ಮೇಲೆ ಹಲ್ಲೆ ಮಾಡಿದ್ದ. ಪಿಐ ನಾಗಮ್ಮ ಆತನ ಕಾಲು ಸೀಳಿದ್ದಾರೆ.
ಶಹೀದ್ 2024 ರಲ್ಲಿ ಶಿವಮೊಗ್ಗದಲ್ಲಿ ನಡೆದ ಡಬ್ಬಲ್ ಮರ್ಡರ್ ಕೇಸ್ ನಲ್ಲಿ ಆರೋಪಿಯಾಗಿದ್ದ. ಯಾಸಿನ್ ಖುರೇಷಿಯ ಆಪ್ತ ಹಾಗೂ ಆದಿಲ್ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ ಈತ ಬೇಲ್ ಪಡೆದು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಳ್ಳಲು ಯತ್ನಿಸುತ್ತಿದ್ದ ಎಂಬ ಆರೋಪವಿದೆ.
ಮೊನ್ನೆ ಶನಿವಾರ ಭದ್ರಾವತಿಯಲ್ಲಿ ಯಾಸಿನ್ ಖುರೇಶಿಯ ಎದುರಾಳಿಯ ಮಾಹಿತಿಯನ್ನ ಎದುರಾಳಿಗೆ ಕೊಟ್ಟವನು ಭದ್ರಾವತಿಯಲ್ಲಿ ಇದ್ದಾನೆ ಎಂಬ ಮಾಹಿತಿ ಹಿನ್ನಲೆಯಲ್ಲಿ ಶಹೀದ್ ನಾಲ್ಕೈದು ಜನರನ್ನ ಕರೆದುಕೊಂಡು ಹೊಡೆಯಲು ತಲವಾರು ಝಳಪಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಈ ವೇಳೆ ಇಬ್ಬರು ಪತ್ತೆಯಾಗಿದ್ದು ಉಳಿದವರು ತಲೆಮರೆಸಿಕೊಂಡಿದ್ದರು.
ಇಂದು ಭದ್ರಾವತಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಭದ್ರಾವತಿಯ ಪೊಲೀಸರಿಗೆ ಟಾಸ್ಕ್ ಬೀಡುವ ಮೂಲಕ ಸಂಚಲನ ಮೂಡಿಸುತ್ತಿರುವ ಎಸ್ಪಿ ಕಾರ್ಯವನ್ನ ಜನ ಹೊಗಳುತ್ತಿದ್ದಾರೆ.
Post a Comment