ರಾಜ್ಯ ಮಾಜಿ ಶಾಸಕರ ವೇದಿಕೆ ರಾಜ್ಯ ಸರ್ಕಾರಕ್ಕೆ ಹಲವು ಬೇಡಿಕೆ ಇಟ್ಟಿದ್ದು ಇದನ್ನ ಪೂರೈಸುವಂತೆ ಒತ್ತಾಯಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವೇದಿಕೆಯ ಅಧ್ಯಕ್ಷ ಹೆಚ್ ಎಂ ಚಂದ್ರಶೇಖರ್, ರಾಜಕಾರಣಿಗಳು ಇಲ್ಲಿಗೆ ಬಂದಾಗ ವಿಐಎಸ್ಎಲ್ ಕಾರ್ಖಾನೆಯನ್ನ ಪುನಶ್ಚೇತನಗೊಳಿಸಿ ಎಂದು ಅವರು ಒಪ್ಪಿಹೋಗುತ್ತಾರೆ ಆದರೆ ಯಾವುದೇ ಕ್ರಮ ಆಗೊಲ್ಲ. ಸರ್ಕಾರಿ ಆಸ್ಪತ್ರೆಗೆ ಹೋದವರ ಸ್ಥಿತಿ ಸ್ಮಶಾನಕ್ಕೆ ಹೋಗುವಂತಾಗಿದೆ. ಪತ್ರಕರ್ತರ ಮಾಸಾಶನ ನೀಡುವಂತೆ, ನಿವೇಶನ ಹಂಚುವಂತೆ ಸೇರಿದಂತೆ 9 ಬೇಡಿಕೆ ಈಡೇರಿಸಲು ಆಗ್ರಹಿಸಲಾಗಿದೆ ಎಂದರು.
ಹಾಳಾದ ರಸ್ತೆಗಳಿಗೆ ಡಾಂಬರೀಕರಣ, ಪೌರಕಾರ್ಮಿಕರಿಗೆ ಸರ್ಕಾರದ ವತಿಯಿಂದ ಉಪಹಾರ ವ್ಯವಸ್ಥೆ, ನೌಕರರಿಗೆ ಮತ್ತು ಪೊಲೀಸ್ ಸಿಬ್ಬಂದಿಗಳಿಗೆ ವಸತಿ ಗೃಹ ನಿರ್ಮಾಣ, ಸರ್ಕಾರಿ ಶಾಲೆ ನವೀಕರಣ, ಸಮವಸ್ತ್ರ, 6 ದಿವಸ ಉಚಿತ ಹಾಲು, ಬಾಳೇಹಣ್ಣು ಮತ್ತು ಮೊಟ್ಟೆ ವಿತರಿಸಬೇಕು.
ಐದು ಎಕರೆ ಹೊಂದಿರುವ ರೈತರಿಗೆ ಉಚಿತ ಗೊಬ್ಬರ, ಔಷಧ, ಸಬ್ಸಿಡಿ ದರದಲ್ಲಿ ಪೆಟ್ರೋಲ್ ವ್ಯವಸ್ಥೆ, ರೈತರ ಸರ್ಕಾರದ ಪ್ರತಿ ಯೋಜನೆ ಸಮರ್ಥವಾಗಿ ಕಾರಗಯಗತವಾಗಬೇಕು ಸೇರಿದಂತೆ, ಮೊದಲಾದ 9 ಬೇಡಿಕೆಗಳಿಗೆ ಸಿಎಂ ಮುಂದೆ ಇಡಲಾಗಿದೆ. ಅದಕ್ಕೆ ಸಿಎಂ ಅಸ್ತು ಎಂದು ತಿಳಿಸಿರುವುದಾಗಿ ಹೇಳಿದರು.
ಮತ್ತೋರ್ವ ಮಾಜಿ ಶಾಸಕ ಕೆಜಿ ಕುಮಾರ ಸ್ವಾಮಿ ಮಾತನಾಡಿ, ಜಿಲ್ಲಾಧಿಕಾರಿಗಳು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಭೂಕಾಳಿ ಬಿಡ್ತಾರೆ ಒಂದು ಕೆರೆಯನ್ನೂ ಬಜಾವ್ ಮಾಡ್ತಾಯಿಲ್ಲ. ಈಗಿನ ಜಿಲ್ಲಾಧಿಕಾರಿಗಳು ಏನು ಕ್ರಮ ಕೈಗೊಳ್ಳುವರು ಕಾದು ನೋಡಬೇಕಿದೆ ಎಂದರು.
ಕೋಟೆಗಂಗೂರಿನಲ್ಪಿ ಬಬ್ಬ ಪ್ರಭಾವಿ ಅಡಿಕೆ ತೋ288 ಕೆರೆ ಶಿವಮೊಗ್ಗದಲ್ಲಿದೆ ಒಂದು ಕೆರೆ ಅಭಿವೃದ್ಧಿ ಪಡಿಸಿಲ್ಲ ಯಾವುದೇ ಕ್ರಮ ಜರುಗಿಸುತ್ತಿಲ್ಲ. ನಗರದಲ 50-60 ಕೆರೆ, ಗಾಡಿಕೊಪ್ಪ, ಪುರದಾಳ್ ಕೆರೆ ನವುಲೆ ಕೆರೆ ಮೊದಲಾದ ಒಳ್ಳೆಯ ಕೆರೆಗಳು ಸಂರಕ್ಷಿಸಬೇಕೆಂದರು
Post a Comment