Ex chief Minister B.S.Yeddiyurappa || ಮಾಜಿ ಮುಖ್ಯಮಂತ್ರಿ ಬಿ.ಎಸ್ ವೈ ಹುಟ್ಟು ಹಬ್, ಆಚರಿಸಿದ್ದು ಹೇಗೆ?

 

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರವರ 81ನೇ ಜನ್ಮದಿನದ ಹಿನ್ನೆಲೆ ಹಲವೆಡೆ ಸಂಭ್ರಮಾಚರಣೆ ನಡೆಸಲಾಗಿದೆ. ಎಂಎಲ್ ಸಿ ಡಾ.ಧನಂಜಯ ಸರ್ಜಿ, ಡಿಎಸ್ ಅರುಣ್ ಯಡಿಯೂರಪ್ಪನವರ ಅಭಿಮಾನಿ ಬಳಗದ ಸಂತೋಷ್ ಬಳ್ಳೇಕೆರೆ, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ವೆಂಕಟೇಶ್ ಮೊದಲಾದವರಿಂದ ಸಂಭ್ರಮಾಚರಣೆ ನಡೆಸಲಾಗಿದೆ.


ರವೀಂದ್ರ ನಗರ ಗಣಪತಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ನಡೆಸಿದ ಅಭಿಮಾನಿಗಳು ನಂತರ ಮೆಗ್ಗಾನ್ ಆಸ್ಪತ್ರೆಯಲ್ಲಿ 1000 ಜನ ರೋಗಿಗಳಿಗೆ ಹಣ್ಣು ಹಂಪಲು ಹಂಚಲಾಗಿದೆ.



 ರೈಲಿನಲ್ಲಿ ಸಂಭ್ರಮಾಚರಣೆ


ಶಿವಮೊಗ್ಗದಿಂದ ಪ್ರಯಾಗ್ ರಾಜ್ ಗೆ ತೆರಳಿದ್ದ ವಿಶೇಷ ರೈಲಿನಲ್ಲಿದ್ದ ಪ್ರಯಾಣಿಕರಿಂದ ಬಿಎಸ್ ವೈ ಹುಟ್ಟುಹಬ್ಬ ಆಚರಣೆ ನಡೆದಿದೆ. ಪ್ರಯಾಗ್ ರಾಜ್ ನಿಂದ ವಾಪಸ್ ಬರುವ ವೇಳೆ ಚಿತ್ರದುರ್ಗ ನಿಲ್ದಾಣದಲ್ಲಿ ಹುಟ್ಟುಹಬ್ಬ ಆಚರಣೆ ನಡೆಸಲಸಗಿದೆ. ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಕಾಗಿದೆ.


ಶಿವಮೊಗ್ಗ ನಗರ ಕಾರ್ಯದರ್ಶಿ ಮಾಲತೇಶ್ ಹಾಗೂ ಭದ್ರಾವತಿಯ ಪರಾಜಿತ ಬಿಜೆಪಿ ಅಭ್ಯರ್ಥಿ ಮಂಗೋಟೆ ರುದ್ರೇಶ್ ಸಂಭ್ರಮಾಚರಣೆಯಲ್ಲಿ ಭಾಗಿತಾಗಿದ್ದರು. ಈ ವೇಖೆ ಬಿಎಸ್ ಯಡಿಯೂರಪ್ಪ ಪರ ಘೋಷಣೆಗಳ ಸುರಿ ಮಳೆಯೇ ಬಿದ್ದಿದೆ. 

Post a Comment

Previous Post Next Post