ಶಿವಮೊಗ್ಗದ ಕೋಟೆ ಗಂಗೂರಿನ ಅಡಕೆ ಮಂಡಿ ಬಡಾವಣೆಯಲ್ಲಿ ಸಿಲಿಂಡರ್ ಸ್ಪೋಟಗೊಂಡು ಮನೆಯೊಂದು ಸಂಪೂರ್ಣ ಹಾನಿಯಾಗಿದೆ. ಆದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
ಗಣೇಶಪ್ಪ ಎಂಬುವರಿಗೆ ಸೇರಿದ ಮನೆಯಲ್ಲಿ ಬೈಲಪ್ಪ ಎಂಬುವರ ಕುಟುಂಬ ವಾಸವಾಗಿತ್ತು. ಅಡಿಗೆ ಮಾಡಲು ಸ್ಟವ್ ಸಹಿತ ಸಿಲಿಂಡರ್ ಹೊಂದಿದ್ದ ಗ್ಯಾಸ್ ಸಿಲಿಂಡರ್ ಇಂದು ಲೀಕೇಜ್ ಆಗಿ ಸ್ಪೋಟಗೊಂಡಿದೆ. ಸ್ಫೋಟದ ಪರಿಣಾಮವಾಗಿ ಮನೆ ಬಿರುಕುಗೊಂಡು ಮನೆಯ ಗೋಡೆ ಹಾಗೂ ಚಾವಣಿ ಹಾರಿಹೋಗಿದೆ.
ಮನೆಯಲ್ಲಿ ವಾಸಿಸುತ್ತಿದ್ದ ಬೈಲಪ್ಪ ಎಂಬುವರ ಕುಟುಂಬ, ಸಿಲಿಂಡರ್ ಸ್ಫೋಟಿಸಿದಾಗ ಮನೆಯ ಹೊರಗೆ ಬಂದು 15 ನಿಮಿಷದ ನಂತರ ಸ್ಪೋಟಗೊಂಡಿದೆ. ಇದು ಐದು ಕೆಜಿ ಸಿಲಿಂಡರ್ ಗೆ ನ್ಯಾಬ್ ನಲ್ಲಿ ಲೀಕೇಜ್ ಆಗಿದ್ದು, ಅದನ್ನ ತಡೆಯಲು ಬೈಲಪ್ಪ ಪದರಯತ್ನಿಸಿದ್ದಾರೆ. ಸಾಧ್ಯವಾಗದಿದ್ದಾಗ ಮನೆಯಿಂದ ಹೊರ ಬಂದಿದ್ದಾರೆ.
ಇದರಿಂದಾಗಿ ಅನಾಹುತ ತಪ್ಪಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಗಿದ್ದಾರೆ. ಘಟನೆಯಿಂದಾಗಿ ಮನೆಯ ಬಟ್ಟೆ ಮತ್ತಿತರ ವಸ್ತುಗಳಿಗೆ ಹಾನಿಯಾಗಿದೆ. ಸ್ಫೋಟದ ಪರಿಣಾಮವಾಗಿ ಬೈಲಪರ ಪತ್ನಿಗೆ ಸಣ್ಣಪುಟ್ಟ ಗಾಯವಾಗಿದೆ.
Post a Comment