Complaint against Muslim Hostel, ಮುಸ್ಲಿಂ ಹಾಸ್ಟೆಲ್ ನಲ್ಲಿ ಸಿಗುತ್ತಿಲ್ಲ ಗುಣಮಟ್ಟದ ಆಹಾರ - ವಿದ್ಯಾರ್ಥಿ ಗಳಿಂದ ಸಚಿವರಿಗೆ ದೊರು
ಜಿಲ್ಲೆಯ ವಕ್ಫ್ ಬೋರ್ಡ್ ಅಡಿಯಲ್ಲಿ ಸ್ಥಳೀಯ ಅಲ್ಪ ಸಂಖ್ಯಾತ ವಿದ್ಯಾರ್ಥಿಗಳಿಗೆ, ವಿದ್ಯಾಭ್ಯಾಸದ ಪ್ರಯುಕ್ತ ಅನುಕೂಲವಾಗಲೆಂದು ನಿರ್ಮಾಣಗೊಂಡಿರುವ ಮುಸ್ಲಿಂ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಗಳಿಗೆ ಗುಣ ಮಟ್ಟದ ಇಲ್ಲದ ಊಟ ಸೇರಿದಂತೆ ಅನೇಕ ಸಮಸ್ಯೆ ಗಳು ಎದುರಾಗಿದ್ದು ಇದನ್ನೆಲ್ಲಾ ಬಗೆ ಹರಿಸಿ ಮತ್ತು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಖ್ಫ್ ಮತ್ತು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆ ಸಚಿವ ಬಿ ಜೆಡ್ ಜಮೀರ್ ಅಹ್ಮದ್ ಗೆ ವಿದ್ಯಾರ್ಥಿ ಗಳಿಂದ ಮನವಿ ಸಲ್ಲಿಸಲಾಯಿತು.
ಇಂದು ನಗರಕ್ಕೆ ಆಗಮಿಸಿದ ಸಚಿವರಿಗೆ ಭೇಟಿ ನೀಡಿದ ಹಾಸ್ಟೆಲ್ ನ ವಿದ್ಯಾರ್ಥಿಗಳು ಮುಸ್ಲಿಂ ಹಾಸ್ಟೆಲ್ ನಲ್ಲಿ ಪೌಷ್ಟಿಕಾಂಶವಿಲ್ಲದ ಆಹಾರ ವನ್ನು ನೀಡಲಾಗುತ್ತಿದೆ, ಹಾಸ್ಟೆಲ್ ನಲ್ಲಿ ಸಿಬ್ಬಂದಿಗಳ ಕೊರತೆ, ಕುಡಿಯುವ ಸ್ವಚ್ಛ ನೀರಿನ ಸಮಸ್ಯೆ ಜೊತೆಗೆ ಶೌಚಾಲಯ ಮತ್ತು ಸ್ನಾನ ಗ್ರಹಗಳ ಸ್ವಚ್ಛತೆ ಮತ್ತು ನಿರ್ವಹಣೆ ವಿಚಾರವಾಗಿ ಸ್ಥೆಳೀಯ ವಖ್ಫ್ ಅಧಿಕಾರಿಗಳಿಗೆ ಮೌಖಿಕವಾಗಿ ಅನೇಕ ದೊರುಗಳನ್ನು ನೀಡಿದರು ಗಮನ ಹರಿಸದ ಅಧಿಕಾರಿಗಳ ನಮ್ಮ ಸಮಸ್ಯೆಗಳನ್ನು ಬಗೆಹರಿಸಿಲ್ಲ ಎಂದು ದೊರಿದರು.
ಸುಮಾರು ಒಂದೂವರೆ ವರ್ಷಗಳಿಂದ ಮ್ಯಾನೇಜ್ಮೆಂಟ್ ಸಮಿತಿ ಇಲ್ಲದ ಕಾರಣ ಅಧಿಕಾರಿಗಳು ಮಾಡಿದ್ದೆ ದರ್ಬಾರ್ ಹಾಸ್ಟೆಲ್ ನಲ್ಲಿ ನಡೆಯುತ್ತಿದೆ. ವಾರ್ಡನ್ ವರ್ತನೆ ಸರಿ ಇಲ್ಲ ಬೇಕಾ ಬಿಟ್ಟೀಯಾಗಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲಾಗುತ್ತೆ ಸರಿಯಾಗಿ ರಸೀದಿ ಗಳನ್ನು ನೀಡುವುದಿಲ್ಲ ಮೊದಲು ವಾರ್ಡನ್ ಬದಲಾವಣೆಯಾಗಬೇಕೆಂದು ಹೆಸರು ಹೇಳಲಿಚ್ಚಿಸಿದ ವಿದ್ಯಾರ್ಥಿ ಯೊಬ್ಬರು ತಿಳಿಸಿದರು.
ವಿದ್ಯಾರ್ಥಿಗಳ ಮನವಿಯನ್ನು
ಸ್ವೀಕರಿಸಿದ ಸಚಿವರು ಆದಷ್ಟು ಬೇಗ ಎಲ್ಲಾ ಸಮಸ್ಯೆ ಗಳನ್ನು ಬಗೆ ಹರಿಸಿ ಕೊಡುವುದಾಗಿ ಭರವಸೆ ನೀಡಿದರು.ಎಂ ಎಲ್ ಸಿ ಬಲ್ಕಿಶ್ ಬಾನು, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಶಫಿವುಲ್ಲಾ , ಕಾಂಗ್ರೆಸ್ ಮುಖಂಡರಾದ ಪ್ರಸನ್ನ ಕುಮಾರ್ , ಯೋಗೇಶ್ ಸದ್ದು ಬೆಳ್ಳಿಗಾವಿ ಸೇರಿದಂತೆ ಮತ್ತಿತರರು ಇದ್ದರು.
Post a Comment