ಶ್ರಮದಿಂದ ಬಂಧಿಸಿದ್ದಾ? ಮಾಧ್ಯಮಗಳಿಗೆ ಫೋಸ್ ಕೊಡಲು ಬಾಡಿವಾರೆಂಟ್ ಮೇಲೆ ಕರೆತಂದಿದ್ದ?

 


ಜನವರಿ 8 ರಂದು ಹೊಸನಗರ ತಾಲೂಕು‌ನಗರ ಹೋಬಳಿಯಲ್ಲಿ ಹೆಣ್ಣು ಕಾಡುಕೋಣವನ್ನ‌ ಬೇಟೆಯಾಡಿದ್ದ ಪ್ರಕರಣಕ್ಕೆ ಟ್ವಿಸ್ಟ್ ದೊರೆತಿದೆ.‌ ಇಲ್ಲಿನ ಸಾಗರದ ಹೊಸನಗರ ತಾಲೂಕಿನ ಅರಣ್ಯ ಅಧಿಕಾರಿಗಳು ಆರೋಪಿಗಳನ್ನ ಬಂಧಿಸಿರುವುದಾಗಿ ಸುದ್ದಿ ಕೇಳಿ ಬಂದಿದೆ.


ಆದರೆ ಈ ಘಟನೆಯ ಆರೋಪಿಗಳನ್ನ ಬಾಡಿ ವಾರೆಂಟ್ ಮೇಲೆ ಅರೆಸ್ಟ್ ಮಾಡಿಕೊಂಡು ಬಂದು ಮಾಧ್ಯಮಗಳ ಮುಂದೆ ಸಾಗರ ವಿಭಾಗದ ಹೊಸನಗರ ವಲಯ ಅರಣ್ಯಾಧಿಕಾರಿಗಳು ಬಂಧಿಸಿರುವುದಾಗಿ ಫೋಸ್ ನೀಡಿರುವುದು ದುರಂತ. ನಗರ ಹೋಬಳಿ ಸಂಪೆಕಟ್ಟೆ ಶಾಖೆಯ ಹೊಸೂರು ಗ್ರಾಮದ ಸರ್ವೆ ನಂಬರ್ 4 ರ ಮತ್ತಿ ಕೈ ಮೀಸಲು ಅರಣ್ಯ ಪ್ರದೇಶದಲ್ಲಿ ಒಂದು ಹೆಣ್ಣು ಕಾಡುಕೋಣವನ್ನ ಬೇಟಿಯಾಡಲಾಗಿತ್ತು. 


ಕಾಡುಕೋಣದ ಕಾಲು ಮತ್ತು ಮಾಂಸವನ್ನ ಬಿಡಿಸಿ ಕಾರಿನಲ್ಲಿ ಸಾಗಾಣಿಕೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಆರೋಪಿಗಳನ್ನ ಪತ್ತೆಹಚ್ಚಿ ಬಂಧಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಲಾಗಿದೆ. ಭಟ್ಕಳದ ಮಹಮ್ಮದ್ ಆಶ್ರಫ್, ಬೈಂದೂರು ತಾಲೂಕಿನ ಶಿರೂರು ಗ್ರಾಮದ ಅಲಿ ಬಾಪು, ವಾಸೀಮ್ ಅಕ್ರಂ ಎಂಬುವರನ್ನ ಬಂಧಿಸಲಾಗಿದೆ. ಉಳಿದಿಬ್ಬರು ಆರೋಪಿಗಳು ಕಣ್ಮರೆಯಾಗಿದ್ದಾರೆ ಎಂದು ಶಿವಮೊಗ್ಗ ಜಿಲ್ಲೆ ಸಾಗರ ವಲಯ ಅರಣ್ಯ ಇಲಾಖೆ ಪತ್ರಿಕಾ ಪ್ರಕಟಣೆಯನ್ನೂ ನೀಡಿದೆ. 


ಆದರೆ ಕುದಯರೆಮುಖದ ಡಿಸಿಎಫ್ ಶಿವರಾಮ್ ಬಾಬು ಅವರ ಪ್ರಯತ್ನದಿಂದ ರಾಜ್ಯದ ಕಾಡುಕೋಣ ಬೇಟೆಯಾಡಿದ ಭಟ್ಕಳ ಗ್ಯಾಂಗ್ ನ್ನ ಬಂಧಿಸಿರುವುದಾಗಿ ಆಂಗ್ಲಮಾಧ್ಯಮ ಪತ್ರಿಕೆಯೊಂದು ಪ್ರಕಟಿಸಿದೆ. ಸಾಗರದಲ್ಲಿ ಕಾಡುಕೋಣಗಳ ಹಿಂಡು ಹೆಚ್ಚಳವಾಗಿದೆ. ಆದರೆ ಮಾಹಿತಿಯನ್ನ ಮರೆಮಾಚಿ ಇಲ್ಲಿ ಅಧಿಕಾರಿಗಳ ಮಾಧ್ಯಮಗಳಲ್ಲಿ ಮಿಂಚಿಕೊಳ್ಳುತ್ತಿರುವುದು ಎಷ್ಟು ಸರಿ? ಎಂಬುದು ಸುದ್ದಿಲೈವ್ ನ ಪ್ರಶ್ನೆ


ಕಾರ್ಕಳ ವನ್ಯ ಜೀವಿ ಅರಣ್ಯ ಇಲಾಖೆ ಅಡಿ ಬರುವ ಕುದುರೆಮುಖ ಅರಣ್ಯ ಇಲಾಖೆ ರಾಜ್ಯದಲ್ಲಿ ಕಳೆದ ವರ್ಷ ಬೇಟಿಯಾಡಿದ ಕಾಡುಕೋಣ ವನ್ಯ ಮೃಗಗಳ ಪತ್ತೆಯ ಕಾರ್ಯಾಚರಣೆಯಲ್ಲಿ ಈ ಭಟ್ಕಳ ಗ್ಯಾಂಗ್ ನ್ನ‌ ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ನಗರ ಹೋಬಳಿಯಲ್ಲಿ ನಡೆದ ಕಾಡುಕೋಣಗಳ ಬೇಟೆಯೂ ಸಹ ಇದರಲ್ಲಿ ಒಂದಾಗಿತ್ತು. 


ಈ ಭಟ್ಕಳ ಗ್ಯಾಂಗ್ ರಾಜ್ಯದಲ್ಲಿ ಕಾಡುಕೋಣಗಳನ್ನ‌ ಭೇಟಿಯಾಡಿ ಕೇರಳಕ್ಕೆ ಕಳುಹಿಸುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಾಂಸ, ಮತ್ತು ಚರ್ಮದ ಬಳಕೆಗೆ ಈ ಕಾಡುಕೋಣವನ್ನ ಭೇಟೆಯಾಡಲು ಬಳಕೆಯಾಗುತ್ತಿರುವ ನಿಗೂಡ ರಹಸ್ಯವೂ ಇದರಲ್ಲಿ ಅಡಗಿರುವ ಅಂಶ ಹೊರಬಿದ್ದಿದೆ. ಇದನ್ನ ಹೇಳದ ಇಲ್ಲಿನ ಅಧಿಕಾರಿಗಳು ಮಾಧ್ಯಮಗಳಿಗೆ ಸುಳ್ಳು ಮಾಹಿತಿ ನೀಡುತ್ತಿರುವುದು ದುರಂತ 

Post a Comment

Previous Post Next Post