ವಿನೋಬ ನಗರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಗಾಂಜಾ ದಾಳಿ ನಡೆದಿದೆ. ಎರಡು ಪ್ರತ್ಯೇಕ ದಾಳಿಯಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.
ಭಾನುವಾರ ಮಧ್ಯಾಹ್ನ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೆ. ಹೆಚ್. ಪಟೇಲ್ ಬಡಾವಣೆ ತುಂಗಾ ಚಾನಲ್ ದಂಡೆಯಲ್ಲಿ ವ್ಯಕ್ತಿಯೊಬ್ಬನು ದ್ವಿಚ ಕ್ರ ವಾಹನವನ್ನು ನಿಲ್ಲಿಸಿಕೊಂಡು, ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಲಾಗಿದ್ದು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಪ್ರತಾಪ್ ಎಸ್, 26 ವರ್ಷ, ಬಿಲಗೋಡಿ ಗ್ರಾಮ ಸಾಗರ ಈತನನ್ನು ಬಂಧಿಸಲಾಗಿದೆ. ಆರೋಪಿತನಿಂದ ಅಂದಾಜು ಮೌಲ್ಯ 6,000/- ರೂಗಳ 349 ಗ್ರಾಂ ತೂಕದ ಒಣ ಗಾಂಜಾ, ರೂ 600/- ನಗದು ಹಣ, ಮತ್ತು ಕೃತ್ಯ ಕ್ಕೆ ಉಪಯೋಗಿಸಿದ ಅಂದಾಜು ಮೌಲ್ಯ 8,000/- ರೂಗಳ ಮೊಬೈಲ್ ಪೋನ್ ಹಾಗೂ ಅಂದಾಜು ಮೌಲ್ಯ 20,000/-ರೂಗಳ ದ್ವಿ ಚಕ್ರ ವಾಹನ ಸೇರಿದಂತೆ ಒಟ್ಟು 34,600/- ರೂಗಳ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಮತ್ತೊಂದು ಪ್ರಕರಣ ಫೆ.01 ರಂದು ನಡೆದಿದ್ದು, ಈ ಪ್ರಕರಣ ಕೀರ್ತಿ ನಗರದ ದೇವಂಗಿ ಪಾರ್ಕಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸುರೇಂದ್ರ ಬಬ್ಲು ಎಂಬಾನನ್ನ ಬಂಧಿಸಲಾಗಿದೆ. 15000 ರೂ ಮೊಬೈಲ್ 363 ಗ್ರಾಂ ಮೌಲ್ಯದ ಗಾಂಜಾವನ್ನ ವಶಕ್ಕೆ ಪಡೆಯಲಾಗಿದೆ. ವಿನೋಬ ನಗರ ಪೊಲೀಸ್ ಠಾಣೆಯ ಪಿಐ ಚಂದ್ರಕಲಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಮಿಥುನ್ ಕುಮಾರ್ ಜಿ. ಕೆ ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ, ಅನಿಲ್ ಕುಮಾರ್ ಭುಮರಡ್ಡಿ,ಹೆಚ್ಚುವರಿ ಪೊಲೀಸ್ ಅಧಿಕ್ಷಕರು-1, ಶಿವಮೊಗ್ಗ ಜಿಲ್ಲೆ ಮತ್ತು ಕಾರಿಯಪ್ಪ ಎ ಜಿ. ಹೆಚ್ಚುವರಿ ಪೊಲೀಸ್ ಅಧಿಕ್ಷಕರು-2, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ-ಬಿ ಸಂಜೀವ್ ಕುಮಾರ್ ಟಿರವರ ಮೇಲ್ವಿಚಾರಣೆಯಲ್ಲಿ, ವಿನೋಬನಗರ ಪೊಲೀಸ್ ಠಾಣೆ ಪಿಐ ಚಙದ್ರಕಲಾರವರ ನೇತೃತ್ವದ ಪಿಎಸ್ಐ ಸುನೀಲ್ ಬಿ.ಸಿ ಮತ್ತು ಸಿಬ್ಬಂಧಿಗಳ ತಂಡವು ಎರಡೂ ಕಾರ್ಯಚರಣೆಯಲ್ಲಿ ಭಾಗಿಯಾಗಿದ್ದರು.
ಕಾರ್ಯಾಚರಣೆಯನ್ನ ನಡೆಸಿದ ತನಿಖಾ ತಂಡದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಪ್ರಶಂಸಿಸಿ ಅಭಿನಂದಿಸಿರುತ್ತಾರೆ.
Post a Comment