ಭದ್ರಾವತಿಯಲ್ಲಿ ನಾಲ್ಕು ಮಾಫಿಯಾ(Mafia) ಶುರುವಾಗಿದೆ. ಮರಳು(sand), ಅರಣ್ಯನಾಶ, ಇಸ್ಪೀಟ್, ಗಾಂಜಾ ಮಾಫಿಯಾ ಆರಂಭವಾಗಿದೆ ಎಂದು ಜೆಡಿಎಸ್ ನ ಶಾರದಾ ಅಪ್ಪಾಜಿ ಗೌಡ ಆರೋಪಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈ ನಾಲ್ಕು ಮಾಫಿಯಾವನ್ನ ಶಾಸಕರ ಮಕ್ಕಳಿಂದ ಇಂತಹ ಮಾಫಿಯಾ ಶುರುವಾಗಿದೆ. ಎಲ್ಲಾ ಶಾಸಕರ ಮಕ್ಕಳು ಅಧಿಕಾರ ಮಾಡ್ತಾ ಇದ್ದಾರೆ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು. ಅಧಿಕಾರಿಯ ಧೈರ್ಯ ಮೆಚ್ಚಬೇಕು. ಆದರೆ ಭದ್ರಾವತಿ ಬಿಹಾರ್ ರಾಜ್ಯದಲ್ಲಿ ನಡೆಯುವ ರಾಜಕೀಯವಾಗಿ ಮಾರ್ಪಟಾಗುತ್ತಿರುವುದು ದುರಂತ ಎಂದು ಬಣ್ಣಿಸಿದರು.
ಶಾಸಕರು ಭದ್ರಾವತಿಯಲ್ಲಿ ಕಾಣಿಸಿಕೊಂಡಿಲ್ಲ. ಎರಡು ವರ್ಷದಿಂದ ಸಂಗಮೇಶ್ ಕಾಣೆಯಾಗಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಎಲ್ಲಾ ಅವರ ಮಕ್ಕಳು, ಅಣ್ಣ ತಮ್ಮಂದಿರು ನೋಡಿಕೊಳ್ತಾ ಇದ್ದಾರೆ ಭದ್ರಾವತಿಯನ್ನ ನೋಡಿಕೊಳ್ತಾ ಇದ್ದಾರೆ. ಭದ್ರಾವತಿ ಬಗ್ಗೆ ದೂರು ಕೊಟ್ಟರೂ ಯಾರು ಸ್ಪಂದಿಸುತ್ತಿಲ್ಲ. ಎಸ್ಪಿ, ಡಿಸಿ, ಎಸಿ ಯಾರು ಈ ಬಗ್ಗೆ ತೆಲೆಕೆಡಿಸಿಕೊಂಡಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಸರ್ಕಾರ ಬಂದ್ರೆ ದುರಾಡಳಿತ ನಡೆಸಬೇಕಾ? ಬರೀ ಅವರದ್ದೇ ಆಡಳಿತ ನಡೆಸಲಾಗುತ್ತಿದೆ.ಬೇರೆ ಯಾರೇ ದೂರು ಕೊಟ್ರು ದೂರು ದಾಖಲಾಗಲ್ಲ. ಸರ್ಕಾರದ ಕಣ್ಮುಚ್ಚಿ ಕುಳಿತಿದ್ದೀಯಾ ಎಂದು ಪ್ರಶ್ನಿಸಿದ ಶಾರದಾ ಅಪ್ಪಾಜಿಗೌಡ, ಇನ್ನು ಸ್ವಲ್ಪ ದಿನ ಆದಮೇಲೆ ಯಾರು ಓಡಾಡಲು ಆಗೋಲ್ಲಾ ಎಂಬ ವಾತಾವರಣ ನಿರ್ಮಾಣವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ನಾಲ್ಕು ಮಾಫಿಯಾ ನಡೆಯುತ್ತಿವೆ. ಇನ್ನು ಮೂರು ವರ್ಷದಲ್ಲಿ ಭದ್ರಾವತಿಯಲ್ಲಿ ಏನು ಉಳಿಯೋಲ್ಲ. ನಾನು ದೂರು ನೀಡಿದ್ರೆ ಅಧಿಕಾರಿಗಳೇ ನಮ್ಮ ರಾಜಕೀಯ ಎದುರಾಳಿಗೆ ಮಾಹಿತಿ ಕೊಡ್ತಾ ಇದ್ದಾರೆ. ಶಿಫ್ಟ್ ಪ್ರಕಾರ ಇಸ್ಪೀಟು ಆಡಿಸುತ್ತಿದ್ದಾರೆ. ಇನ್ನು ಮೂರು ವರ್ಷದಲ್ಲಿ ಭದ್ರಾವತಿಯಲ್ಲಿ ಕೈಗೆ ಕೆಲಸ ಸಿಗೊಲ್ಲ ಇಸ್ಪೀಟ್ ಎಲೆ ಮಾತ್ರ ಜನರ ಕೈಗೆ ಸಿಗುತ್ತೆ ಎಂದು ದೂರಿದರು.
Post a Comment