ರಾಜ್ಯ ಸರ್ಕಾರ ಚುನಾವಣೆಗೂ (election ಮುನ್ನ(before) ತನ್ನ ಪ್ರಣಾಳಿಕೆಯಲ್ಲಿ (Manifesto) ನೀಡಿದ ರೈತರ ಭರವಸೆಯನ್ನ ಈಡೇರಿಸಬೇಕು, ವಿದ್ಯುತ್ ಖಾಸಗೀಕರಣಗೊಳಿಸಬಾರದು, ಕಾರ್ಮಿಕರ ದಲಿತರ ಹಣ ದಲಿತರಿಗೆ ಉಪಯೋಗಿಸುವಂತಾಗಬೇಕು ಎಂದು ಆಗ್ರಹಿಸಿ ರಾಜ್ಯಾದ್ಯಂತ ರೈತರ ಸಂಘ ಪ್ರತಿಭಟನೆ ನಡೆಸುತ್ತಿದ್ದು ಇಂದು ಸಹ ಶಿವಮೊಗ್ಗ ಡಿಸಿ ಕಚೇರಿ ಮುಂದೆ ಹೆಚ್ ಆರ್ ಬಸವರಾಜಪ್ಪನವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
2023 ರ ವಿಧಾನ ಸಭಾ ಚುನಾವಣೆಯಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ತನ್ನ ಪ್ರನಾಳಿಜೆಯಲ್ಲಿ ರೈತರಿಗೆ ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಬಿಲ್ ನ್ನ ಹಿಂಪಡೆಯಬೇಕು. ವಿದ್ಯುತ್ ನ್ನ ಖಾಸಗೀಕರಣಗೊಳಿಸಬಾರದು, ದಲಿತರ ಹಣವನ್ನ ದಲಿತರಿಗೆ ಉಪಯೋಗವಾಗುವಾಗಲಿದೆ ಎಂಬ ಭರವಸೆ ನೀಡಿ ಆಡಳಿತ ನಡೆಸಯವುದಾಗಿ ತಿಳಿಸಿತ್ತು.
ಕಾರ್ಮಿಕರ ರಕ್ಷಣೆ ಕಾಪಾಡುವ ಭರವಸೆಯನ್ನ ನೀಡಿತ್ತು. ನಮಗೂ ಲಿಖಿತ ಭರವಸೆ ನೀಡಲಾಗಿತ್ತು. ಸಿದ್ದರಾಮಯ್ಯನವರು ಹಿಂಬಾಗಿಲಿನಿಂದ ಕೃಷಿ ಜಾರಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಮಾತು ತಪ್ಪಿದ ಸಿದ್ದರಾಮಯ್ಯ ಎಂಬ ಅಪಕೀರ್ತಿಗೆ ಒಳಗಾಗ ಬಾರದು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಮೈಕ್ರೋ ಫೈನಾನ್ಸ್ ನ ಹಾವಳಿಯಿಂದ ಬಡವರನ್ನ ಬಜಾವ್ ಮಾಡಲು ರಾಜ್ಯ ಸರ್ಕಾರ ಕಾಯ್ದೆ ರಚಿಸಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ಆದರೆ ರಾಜ್ಯ ಪಾಲರು ಅಂಕಿತ ಹಾಕದೆ ರಾಜ್ಯ ಸರ್ಕಾರಕ್ಕೆ ವಾಪಾಸ್ ಕಳುಹಿಸಿದ್ದಾರೆ. ರಾಜ್ಯಪಾಲರು ಇದೇ ಧೋರಣೆಯನ್ನ ಮುಂದುವರೆಸಿದರೆ ಅವರ ವಿರುದ್ಧವೂ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಡಿಎಸ್ ಎಸ್ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಹಾಲೇಶಪ್ಪ, ರೈತ ಸಂಘದ ಉಪಾಧ್ಯಕ್ಷ ಹಿಟ್ಟೂರು ರಾಜು, ಜಿಲ್ಲಾಧ್ಯಕ್ಷ ಕೆ ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇ.ಬಿ.ಜಗದೀಶ್ ಮೊದಲದಾವರು ಉಪಸ್ಥಿತರಿದ್ದರು.
Post a Comment