ಪ್ರಯಾಗ್ ರಾಜ್ ನಲ್ಲಿ ತೀರ್ಥಹಳ್ಳಿಯ ಪತ್ರಕರ್ತರು

 

144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ತೀರ್ಥಹಳ್ಳಿ ಪತ್ರಕರ್ತರಾದ ಶ್ರೀಕಾಂತ್ ವಿ ನಾಯಕ್ ಹಾಗೂ ಅಕ್ಷಯ್ ಕುಮಾರ್ ಹಾಗೂ ಸ್ನೇಹಿತರು ಭೇಟಿ ನೀಡಿ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿ ಬರುತ್ತಿದ್ದಾರೆ .


ತೀರ್ಥಹಳ್ಳಿಯಿಂದ ಶನಿವಾರ ಬೆಳಗ್ಗೆ ಸ್ವಂತ ವಾಹನದಲ್ಲಿ ಹೊರಟಿದ್ದ ಸ್ನೇಹಿತರು ಮೊದಲು ವಾರಣಸಿಗೆ ಭೇಟಿ ನೀಡಿದರು. ಗಂಗೆಯಲ್ಲಿ ಮಿಂದೆದ್ದು ಕಾಶಿ ವಿಶ್ವನಾಥನ ದರ್ಶನ ಪಡೆದು ನಂತರ ಅಯೋಧ್ಯೆಯ ಪ್ರಭು ಶ್ರೀ ರಾಮಚಂದ್ರನ ದರ್ಶನ ಪಡೆದರು. ಕೊನೆಯದಾಗಿ ಪ್ರಯಾಗ್ ರಾಜ್ ನ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ತಮ್ಮ ಯಾತ್ರೆಯನ್ನು ಅಂತಿಮಗೊಳಿಸಿದರು.


ಉದಯವಾಣಿ ಪತ್ರಿಕೆ ಪತ್ರಕರ್ತರಾದ ಶ್ರೀಕಾಂತ್ ವಿ ನಾಯಕ್, ಶಿವಮೊಗ್ಗ ಸುದ್ದಿ ಡಿಜಿಟಲ್ ಮಾಧ್ಯಮ ಸಂಪಾದಕರಾದ ಅಕ್ಷಯ್ ಕುಮಾರ್, ರಾಘವೇಂದ್ರ ಹಾಗೂ ಚಂದ್ರಕಾಂತ್ ಮಹಾಕುಂಭಮೇಳವನ್ನು ಯಶಸ್ವಿಗೊಳಿಸಿದ್ದಾರೆ.

Post a Comment

Previous Post Next Post