ಇ-ಆಸ್ತಿ ವಿಚಾರದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸಂಪೂರ್ಣ ವಿಫಲವಾಗಿದೆ ಎಂದು ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ ಆರೋಪಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವೇದಿಕೆ ಅಧ್ಯಕ್ಷ ವಸಂತ್ ಕುಮಾರ್, ಚೆಕ್ ಬಂದಿ ಮತ್ತು ಕರ್ನಾಟಕ ಮುನ್ಸಿಪಲ್ ಡೇಟಾ ಸೊಸೈಟಿ ತಂತ್ರಾಂಶ ಕ್ಕೆ ಶಿಫ್ಟ್ ಮಾಡಿ ಆಸ್ತಿ ವಿವರವನ್ನ ಅಪ್ ಲೋಡ್ ಮಾಡಲು ಸರ್ಕಾರದ ಸುತ್ತೋಲೆ ಇದೆ. ತಪ್ಪಿದರೆ ತಿದ್ದಪಡಿ ಆಗಬೇಕು ಒಪ್ಪಿಗೆ ನೀಡಿದರೆ ಅಪ್ ಲೋಡ್ ಆಗಬೇಕು. ನಮ್ಮನ್ನ ದಾಖಲಾತಿ ಕೇಳುವ ಅವಕಾಶವೇ ಇಲ್ಲ ಎಂದು ವಿವರಿಸಿದರು.
2022 ರಿಂದ ಈ ಸುತ್ತೋಲೆ ಬಂದಿದೆ. ಯಾವ ಇ ಸ್ವತ್ತನ್ನ ಬಳಸಿಲ್ಲ. ಎಂ ಆರ್ ಎಸ್ ತಂತ್ರಾಜ್ಞಾನದಲ್ಲಿ ಈಗಿನ ಇ-ಖಾತಾ ಅಪ್ ಲೋಡ್ ಮಾಡಿರುವುದಾಗಿ ಪಾಲಿಕೆ ಹೇಳಿದೆ. ಈ ಇ-ಖಾತಾ ಕೆಎಂಡಿಎಸ್ ಸಾಫ್ಟ್ ವೇರ್ ಗೆ ಅಪಲೋಡ್ ಮಾಡಬೇಕಿತ್ತು. ಫಾರಂ 2, ಮತ್ತು 3ರಲ್ಲಿ ನಮೂದೆ ಮಾಡಬೇಕು. ಮಾಡಿಲ್ಲ. ಈಗಾಗಲೇ ಇಸ್ವತ್ತು ಪಡೆದವರ ವಿವರ ಮಾನ್ಯತೆ ಪಡೆಯುವುದು ಅನುಮಾನವಿದೆ. ಫೆ.25 ರಿಂದ ಕೆಎಂಡಿಎಸ್ ಗೆ ಅಪ್ ಲೋಡ್ ಮಾಡುವುದಾಗಿ ಪಾಲಿಕೆ ಭರವಸೆ ನೀಡಿದೆ ಎಂದರು.
1.07 ಲಕ್ಷ ಆಸ್ತಿ ಇದೆ. ಅದರಲ್ಲಿ 68 ಸಾವಿರ ಇ ಆಸ್ತಿ ಆಗಿಲ್ಲ. ಮಾ.10 ರ ಒಳಗೆ 35% ಮಾತ್ರ ಆಗಿದೆ. ಕಡ್ಡಾಯ ಮಾಡಿದ್ದು ಮಾನಸಿಕ ಹಿಂಸೆ ಮತ್ತು ಭ್ರಷ್ಠಾಚಾರ ನಡೆಯಲು ಅನುಕೂಲವಾಗಿದೆ. ಇ ಆಸ್ತಿ ಕಡ್ಡಾಯ ತಪ್ಪು, ಕನಿಷ್ಠ 6 ತಿಂಗಳು ಮುಂದು ಹಾಕಬೇಕು ಎಂದು ಆಗ್ರಹಿಸಿದರು.
ಕಾನೂನು ಬದ್ದವಾಗಿ ಯಾರಿಗೂ ಸಾಫ್ಟ್ ವೇರ್ ನಲ್ಲಿ ಇಸ್ವತ್ತನ್ನ ನೀಡಿಲ್ಲ. ಅಧಿಜೃತ ಸಾಫ್ಟ್ ವೇರ್ ನೀಡಿಲ್ಲ. ಮ್ಯಾನೇಜ್ ಮೆಂಟ್ ರೀಶಫಲ್ ಆಗಬೇಕಿದೆ. ಪಾಥ್ ಹೋಲ್ ವೆಟ್ ಮಿಕ್ಸ್ ಮಾಡಲು ಆಗ್ತಾ ಇಲ್ಲ. 1.5 ಕೋಟಿ ಹಣ ಟೆಙಡರ್ ಆಗಿ ಪಾಥ್ ಹೋಲ್ ನಡೆಯಲಿದೆ ಎಂದರು.
ಸತೀಶ್ ಕುಮಾರ್ ಶೆಟ್ಟಿ ಮಾತನಾಡಿ, ಕೆಎಂಡಿಎಸ್ ಸಾಫ್ಟ್ ವೇರ್ ನಲ್ಲಿ ಅಪಲೋಡ್ ಮಾಡದೆ ಇದ್ದರೆ ಮಾನ್ಯತೆಯಾಗೊಲ್ಲ. ಕಂಪ್ಯೂಟರ್ ನಲ್ಲಿ ಅಪಲೋಡ್ ಮಾಡಲು ಒವೈಸಿಸ್ ನಲ್ಲಿ 217 ರಲ್ಲಿ ಅಪಲೋಡ್ ಆಯಿತು. ಅದು ಈಗ ಔಟ್ ಡೇಟೆಡ್, ಆಮೇಲೆ ಆಸ್ತಿ ಕಣಜ ತರಲಾಯಿತು. ಈ ಆಸ್ತಿ ಕಣಜದಲ್ಲಿ ಎಲ್ಲರ ಅಪಡೇಟ್ ಆಗಿದೆ. ಈ ಆಸ್ತಿ ಕಣಜವನ್ನ ಕೆಎಂಡಿಎಸ್ ಗೆ ಅಪಲೋಡ್ ಮಾಡಬೇಕಿದೆ. ಕೆಫ್ ಡಿಎಸ್ ಸಾಫ್ಟ್ ಬೇರ್ ಬರುತ್ತೆ ಎಂದು ಪಾಲಿಕೆ ಹೇಳಿದೆ. ವಾರ್ಡ್ ಗೆ ಹೋಗಿ ಇದನ್ನ ಅಧಿಕಾರಿಗಳು ಅಪ್ ಲೋಡ್ ಮಾಡಬೇಕಿದೆ. ಹಾಗಾಗಿ ಜನ ಇ ಆಸ್ತಿ ವಿಚಾರಕ್ಕೆ ಹೋಗಬೇಡಿ ಎಂದು ಮನವಿ ಮಾಡಿದರು.
ಇಡೀ ಮಾರ್ಚ್ 10 ರ ಒಳಗೆ ಅಪ ಲೋಡ್ ಮಾಡಬೇಕಿದೆ. ಇದು ಅವೈಜ್ಞಾನಿಕವಾಗಿದೆ ಇದನ್ನ ಮುಂದೂಡಬೇಕಿದೆ. ನಿಮ್ಮ ಮನೆ ಬಳಿಗೆ ಬಂದರೆ 100 ರೂ. ಶುಲ್ಕ ಇದೆ. ಒಂದು ವೇಳೆ ಗೊತ್ತಾಗದಿದ್ದರೆ 08182-222646 ಕ್ಕೆ ಕರೆ ಮಾಡಲು ತಿಳಿಸಿದರು. ನಮ್ಮನ್ನ ದಾಖಲಾತಿ ಕೇಳಿದ್ದು ತಪ್ಪಿದೆ. ಕಾವೇರಿ ಸಾಫ್ಟ್ ವೇರ್ ಲಿಂಕ್ ಆಗಬೇಕಿದೆ.
Post a Comment