ಡಾ. ಹೆಚ್.ಎಂ. ನಟರಾಜ್ ಎಂಬುವವರು ತಮ್ಮ ವಕೀಲರ ಮೂಲಕ ಮೈ ಬ್ಯಾಟರ್ ಟೆಕ್, ಬೆಂಗಳೂರು ಮತ್ತು ಪುನೀತ್ ಕೆ, ಮಾಲೀಕರು, ಮೈ ಬ್ಯಾಟರಿ ಟೆಕ್, ಗಜಾನನ ನಗರ, ಬೆಂಗಳೂರು ಇವರುಗಳ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಪರಿಹಾರ ನೀಡಲು ಆದೇಶಿಸಿದೆ.
ಅರ್ಜಿದಾರ ಡಾ. ಹೆಚ್. ಎಂ. ನಟರಾಜ್‌ರವರು 2024ರಲ್ಲಿ ಶಿವಮೊಗ್ಗದ ಕಾವೇರಿ ಮೋಟರ‍್ಸ್ರವರಿಂದ ಎಲೆಕ್ಟಿçಕ್ ಸ್ಕೂಟರ್‌ನ್ನು ರೂ. 39,000/- ಪಾವತಿಸಿ ಖರೀದಿಸಿರುತ್ತಾರೆ. ಆದರೆ ಅರ್ಜಿದಾರರು ಬುಕ್ ಮಾಡಿದ ಚಾಸಿಸ್ ನಂಬರಿನ ಸ್ಕೂಟರ್ ಬದಲು ಬೇರೆ ಚಾಸಿಸ್ ನಂಬರ್‌ವುಳ್ಳ ಸ್ಕೂಟರ್‌ನ್ನು ನೀಡಿದ್ದು, ಈ ಬಗ್ಗೆ ದೂರು ನೀಡಿದಾಗ ಒಂದು ವಾರದೊಳಗೆ ಬುಕ್ ಮಾಡಿರುವ ಸ್ಕೂಟರ್‌ನ್ನು ಕೊಡವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಎದುರುದಾರರು ಬುಕ್ ಮಾಡಿರುವ ಸ್ಕೂಟರ್‌ನ್ನು ನೀಡದೇ ಸೇವಾ ಲೋಪವೆಸಗಿದ್ದಾರೆಂದು ಸೂಕ್ತ ಪರಿಹಾರ ಕೋರಿ ಪ್ರಕರಣ ಸಲ್ಲಿಸಿರುತ್ತಾರೆ.
ಈ ಕುರಿತು ಆಯೋಗವು ಪ್ರಕರಣದ ಅಂಶಗಳು ಮತ್ತು ಅರ್ಜಿದಾರರು ಹಾಜರುಪಡಿಸಿದ ದಾಖಲೆಗಳನ್ನು ಪರಿಗಣಿಸಿ, ಎದುರುದಾರರಿಗೆ ಆಯೋಗವು ನೋಟೀಸ್ ನೀಡಿ ದೂರಿನ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಲು ತಿಳಿಸಿದ್ದು, ದೂರುದಾರರು ಆಯೋಗದ ಮುಂದೆ ಹಾಜರಾಗಿರುವುದಿಲ್ಲ.
ಅರ್ಜಿದಾರರು ಸಲ್ಲಿಸಿರುವ ಪ್ರಮಾಣ ಪತ್ರ ಮತ್ತು ದಾಖಲೆಗಳನ್ನು ಪರೀಶೀಲಿಸಿ ಮತ್ತು ಅರ್ಜಿದಾರರ ವಾದವನ್ನು ಆಲಿಸಿ, ಎದುರುದಾರರು ಸೇವಾ ನ್ಯೂನತೆ ಎಸಗಿರುತ್ತಾರೆಂದು ಪರಿಗಣಿಸಿ ಅರ್ಜಿದಾರರ ದೂರನ್ನು ಬಾಗಶಃ ಪುರಸ್ಕರಿಸಲಾಗಿದೆ. ಎದುರುದಾರು ಜಂಟಿಯಾಗಿ ಮತ್ತು ಪ್ರತ್ಯೇಕವಾಗಿ ಆಯೋಗದ ಆದೇಶದ ದಿನಾಂಕದಿAದ 45 ದಿನಗಳೊಳಗಾಗಿ ಬುಕ್ ಮಾಡಿರುವ ಎಲೆಕ್ಟಿçಕ್ ಸ್ಕೂಟರ್‌ನ್ನು ನೀಡುವುದು, ವಿಫಲವಾದರೆ ಈಗಾಗಲೇ ನೀಡಿರುವ ಸ್ಕೂಟರ್‌ನ್ನು ವಾಪಸ್ ಪಡೆದು, ಸ್ಕೂಟರ್‌ನ ಮೊತ್ತ ರೂ. 39,000/-ಗಳನ್ನು ಶೇ. 12 ಬಡ್ಡಿಯೊಂದಿಗೆ ದಿ:11/06/2024ರಿಂದ ಪೂರಾ ಹಣ ನೀಡುವಂತೆ ಹಾಗೂ ರೂ. 5,000/-ಗಳನ್ನು ಮಾನಸಿಕ ಹಿಂಸೆಗಾಗಿ ಮತ್ತು ರೂ. 10,000 ಗಳನ್ನು ವ್ಯಾಜ್ಯದ ಖರ್ಚು ವೆಚ್ಚದ ಬಾಬ್ತಾಗಿ ನೀಡುವಂತೆ, ತಪ್ಪಿದಲ್ಲಿ ಈ ಮೊತ್ತಗಳಿಗೆ ಪೂರ್ಣ ಪಾವತಿಯಾಗುವವರೆಗೂ ಶೇ. 12ರ ಬಡ್ಡಿ ಸಹಿತ ಪಾವತಿಸಲು ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಸದಸ್ಯರಾದ ಸವಿತಾ ಬಿ ಪಟ್ಟಣಶೆಟ್ಟಿ ಮತ್ತು ಬಿ.ಡಿ.ಯೋಗಾನಂದ ಭಾಂಡ್ಯ ಇವರ ಪೀಠವು ಜ.31 ರಂದು ಆದೇಶಿಸಿದೆ.
Post a Comment