ವಿಕಸಿತ ಭಾರತಕ್ಕೆ ಈ ಬಾರಿಯ ಬಜೆಟ್ ಬೂಸ್ಟರ್ ಡೋಸೇಜ್ ಇದ್ದಂತೆ-ವಿಶ್ವನಾಥ್ ಭಟ್!


 2014 ರಿಂದ ಕೇಂದ್ರ ಸರ್ಕಾರದ 12 ಬಜೆಟ್ ಗಳನ್ನ ರಾಜ್ಯದ್ಯಂತ ಮಾತನಾಡಿದ್ದೇನೆ. ಈ ಬಾರಿಯ ಬಜೆಟ್(Budget) ಬಗ್ಗೆ ಮಾತನಾಡಿರುವ(speach) ಬಗ್ಗೆ ಹೆಮ್ಮೆ(proudly) ಇದೆ ಎಂದು ಬಿಜೆಪಿಯ ವಕ್ತಾರ ಹಾಗೂ ಬಿಜೆಪಿಯ ವಕ್ತಾರ ವಿಶ್ವನಾಥ್ ಭಟ್ ತಿಳಿಸಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಬಜೆಟ್ ಬಗ್ಗೆ ತೆರಿಗೆದಾರನಿಗೆ ಕೃತಜ್ಞತೆ ಹೇಳುವ ಕೆಲಸವನ್ನ 57 ವರ್ಷದಲ್ಲಿ ಮಾಡಲಿಲ್ಲ. ಯಾಕೆ ಮಾಡಲಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು. 


ಇಸ್ರೇಲ್-ಹಮಾಸ್, ರಷ್ಯ-ಉಕ್ರೇನ್ ಯುದ್ಧಗಳು ಅಂತರಾಷ್ಟ್ರೀಯ ಅರ್ಥವ್ಯವಸ್ಥೆಯನ್ನ ಕುಸಿತಗೊಳಿಸಿದೆ. ಆರ್ಥಿಕ ಹಿಂಜರಿತವಾಗಿದೆ. ಜಾಗತೀಕರಣದಿಂದ ರಕ್ಷಣಾತ್ಮಕವಲಯಕ್ಕೆ ಶಿಫ್ಟ್ ಆಗಬೇಕಿದೆ. ಕಚ್ಚಾವಸ್ತುಗಳ ಬೆಲೆ ಏರಿಕೆಯಾಗಿದೆ ಆರ್ಥಿಕ ಅನಿಶ್ಚತತೆ ಉಂಟಾಗಿದೆ ಎಂದರು. 


ಇದರಿಂದ ಹೂಡಿಕೆದಾರರು ಹೂಡಿಕೆ ಮಾಡಲ್ಲ. ಇದರಿಂದ ಉದ್ಯೋಗ ಸೃಷ್ಠಿಯಾಗುತ್ತಿಲ್ಲ. ಶ್ರೀಮಂತ ರಾಷ್ಟ್ರಗಳು ಸಾಲದಲ್ಲಿದೆ. ಇಲಾನ್ ಮಾಸ್ಕ್ ಹೀಗೆ ಅರ್ಥವ್ಯವಸ್ಥೆ ಮುಂದುವರೆದರೆ ಅಮೇರಿಕಾನೂ ದಿವಾಳಿಯಾಗಲಿದೆ ಎಂದಿದ್ದಾರೆ. ಇದು ಭಾರತದ ಬಜೆಟ್ ಮಂಡಿಸಲು ಸಮಸ್ಯೆಯಾಗಿದೆ. ಉದ್ಯೋಗ ತಲೆನೋವಾಗಿದೆ. ಮಿಡ್ಲಕ್ಲಾಸ್ ಜನ 6 ಕ್ಕೆ ಏರಲ್ಲ, ಮೂರುಕ್ಕೆ ಇಳಿಯಲ್ಲ ಎಂಬ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಅಂತಹವರಿಗೆ ಈ ಬಜೆಟ್ ಬೂಸ್ಟರ್ ಡೋಸೇಜ್ ಆಗಿದೆ ಎಂದರು. 


2011 ರಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ 3200 ರೂ. ಸಂಬಳ ಪಡೆಯುತ್ತಿದ್ದರು. 2024ರಲ್ಲಿ ಅದೇ ಮಾಹಿತಿ ತಂತ್ರಾಜ್ಞನದವರು ಮೂರು ಲಕ್ಷ ರೂ. ಸಂಬಳ ಪಡೆಯುವಂತಾಗಿದೆ. ಇದೇ ಸಮಯಕ್ಕೆ ಶಾಲಾ ಶುಲ್ಕಗಳು ಏರಿಕೆಯಾಗಿದೆ. ಬೆಲೆ ಏರಿಕೆಯ ಸಮಸ್ಯೆಯನ್ನ ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇರುವುದು ಕಾರಣವಾಗಿದೆ ಎಂದರು. 


ಮುಂದಿನ 6 ವರ್ಷದಲ್ಲಿ ಪ್ರತಿವರ್ಷ 7.6-7.8 ರ ಜಿಡಿಪಿ ಏರಿಕೆಯಾದರೆ ಭಾರತದಲ್ಲಿ ಉದ್ಯೋಗ ಸೃಷ್ಠಿಯಾಗಲಿದೆ. ಅದಕ್ಕೆ ಸ್ಥಿರ ಸರ್ಕಾರ ಬೇಕಿದೆ. ಉತ್ಪಾದನಾ ವಲಯದ ಬಲಿಷ್ಠವಾಗಿ ಬೆಳೆಯಬೇಕಿದೆ. ಇದಕ್ಕೆ ಕೇಂದ್ರ ಸರ್ಕಾರ ಒತ್ತು ನೀಡಿದೆ 2047 ರಲ್ಲಿ ವಿಕಸಿತ ಭಾರತದ ಗುರಿ ಹೊಂದಲಾಗಿದೆ. ಮುಂದಿನ 20 ವರ್ಷಕ್ಕೆ ಈ ಬಾರಿಯ ಬಜೆಟ್ ಅಡಿಪಾಯವಾಗಲಿದೆ ಎಂದರು. 


ಬಡತನ ಮೂಲತ್ಪಾಟನೆಯಾಗಬೇಕು. ಶಿಕ್ಷಣ, ಆರೋಗ್ಯ ಪೂರಕವಾಗಿರಬೇಕು. ಕಾರ್ಮಿಕರಿಗೆ ಕೌಶಲ್ಯ ಸಿಗಬೇಕಿದೆ. ಮಹಿಳೆಯರು ಅರ್ಥ ವ್ಯವಸ್ಥೆಯಲ್ಲಿ ಶೇ.70 ರಷ್ಟು ಭಾಗಿಯಾಗಿರಬೇಕು. ರೈತರು, ಯುವಕರು, ಬಡವರು, ಸ್ತ್ರೀಶಕ್ತಿಗೆ ಹೆಚ್ಚು ಒತ್ತು ನೀಡಬೇಕು. 4 ನೇ ತಂತ್ರಜ್ಞಾನದ ಕೈಗಾರಿಕಾ ಕ್ರಾಂತಿಯ ಕಾಲಘಟದಲ್ಲಿದ್ದೇವೆ ಮೂರನೇ ಕಾಲಘಟ್ಟದ ಕೈಗಾರಿಕೆಯಲ್ಲಿ ಸರ್ಕಾರ ಭಾಗಿಯಾಗಿರಲಿಲ್ಲ ಎಂದು ವಿವರಿಸಿದರು. 


ಮುಂದಿನ ದಿನಗಳಲ್ಲಿ ಭಾರತ ಮೂರನೇ ಅತಿದೊಡ್ಡ ದೇಶವಾಗಿ ಬೆಳೆದಿದೆ. ಹಾಗಂತ ಸವಲು ಇಲ್ಲ ಎಂದು ಹಶಳಲು ಅಸಾಧ್ಯ. ಜಾಗತಿಕದ ಸವಾಲಿದೆ ಆಂತರಿಕ ಸವಾಲು ಕಡಿಮೆಯಿದೆ. ಸ್ವರ್ಣ ಪರ್ವ 2022-23 ರಿಂದ ಆರಂಭವಾಗಿದೆ. ಉದ್ಯೋಗ ಸಮಸ್ಯೆ ಮತ್ತು ಕಡುಬಡತನ ಇರಬಾರದು ಅದನ್ನ ನಿರ್ಮೂಲನ ಆಗಬೇಕು. ಬಹು ಆಯಾಮದ ಬಡತನ ಕಡಿಮೆಯಾಗಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಈ ಬಜೆಟ್ ನಲ್ಲಿ ಉದ್ಯೋಗ ಮತ್ತು ಬಡತನ ನಿರ್ಮೂಲನೆ ಮಾಡಲು ಕೇಂದ್ರ ಸರ್ಕಾರ ಹೆಜ್ಜೆಯಿಡುತ್ತಿದೆ ಎಂದರು‌

Post a Comment

Previous Post Next Post