ಯಾವುದೇ ರಿಪಬ್ಲಿಕ್ ಇಲ್ಲ-ಸಚಿವ‌ ಮಧುಬಂಗಾರಪ್ಪ

 

ಭದ್ರಾವತಿ(Bhadravati) ಪ್ರಕರಣ ದಲ್ಲಿ ಈಗಾಗಲೇ ಕ್ರಮ ಆಗಿದೆ ಮೂರು ಜನರ ಮೇಲೆ ಕೇಸ್(case) ಆಗಿ, ಅವರನ್ನ ಬಂಧಿಸಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು. 


ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕ್ರಮ ತೆಗೆದುಕೊಳ್ಳಲು ಯಾವುದೇ ಹಿಂದೇಟು ಹಾಕಲ್ಲ.ಎಸ್ಪಿ ಯವರಿಗೆ ಪ್ರೀ ಹ್ಯಾಂಡ್ ಕೊಟ್ಟಿದ್ದೀನಿ, ಅವರ ಕ್ರಮ ತೆಗೆದುಕೊಳ್ತಾರೆ. ಅಧಿಕಾರಿಗಳ ರಕ್ಷಣೆ ಮಾಡೋದು ನಮ್ಮ ಕರ್ತವ್ಯ ಎಂದರು. 


ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತದೆ. ಯಾವುದೇ ರಿಪಬ್ಲಿಕ್ ಇಲ್ಲ, ಆಗೋಕೆ ಬಿಡುವುದಿಲ್ಲ. ಅಧಿಕಾರಿಗಳಿಗೆ ಪ್ರೀ ಹ್ಯಾಂ ಡ್ ಕೊಟ್ಟು ಕ್ರಮ ತೆಗೆದುಕೊಳ್ಳೋಕೆ ಜಿಲ್ಲೆಯ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಕಾನೂನು ಗೆಲ್ಲಬೇಕು ಅಷ್ಟೇ ಎಂದರು. 


ಮೃತ ಯೋಧ ಮಂಜುನಾಥ್ ಭೇಟಿ ಮಾಡಿದ್ದೀನಿ. ದೇಶದ ಯೋಧನನ್ನ ಕಳೆದುಕೊಂಡಾಗ ಒಬ್ಬ ಪ್ಯಾಮಿಲಿ ಸದಸ್ಯ ಕಳೆದಕೊಂಡ ಹಾಗೇ ತುಂಬಾ ನೋವಾಯ್ತು, ಬೇಸರ ಆಯ್ತು, ಕುಟುಂಬದ ಪರಿಸ್ಥಿತಿ ನೋಡೋಕೆ ಆಗಲಿಲ್ಲ. ಮಂಜುನಾಥ್ ಪತ್ನಿ ಅಸ್ಸಾಂ ರವರು ನೋಡೋಕೆ ಕಷ್ಟ ಆಗುತ್ತೆ ಎಂದರು. 


ಸಿಎಂ ಗಮನಕ್ಕೆ ತಂದು ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂಬ ಭರವಸೆಯನ್ನ ಸಚಿವರು ನೀಡಿದರು. 

Post a Comment

Previous Post Next Post