ಅಕ್ರಮ ಮರಳುಗಾರಿಕೆ (sand) ತಡೆಯಲು ಹೋದ ಮಹಿಳಾ ಅಧಿಕಾರಿಯ ವಿರುದ್ಧ ಅವ್ಯಚ್ಯ ನಿಂದನೆ ಮತ್ತು ಜೀವ ಬೆದರಿಕೆ ಹಾಕಿರುವ ಕುರಿತಂತೆ ಹಳೇ ನಗರ ಪೊಲೀಸ್(police) ಠಾಣೆಯಲ್ಲಿ ದೂರು ದಾಖಲಾದರೂ ಶಾಸಕರ ಪುತ್ರನ ಹೆಸರಿಲ್ಲದೆ ಕೇವಲ 6-7 ಜನರ ವಿರುದ್ಧ ದೂರು ದಾಖಲಾಗಿರುವುದು ಅಚ್ಚರಿ ಮೂಡಿಸಿದೆ.
ನಿನ್ನೆ ಭದ್ರಾವತಿಯ ಸೀಗೆಬಾಗಿಯಲ್ಲಿ ಅಕ್ರಮ ಮರಳುಗಾರಿಕೆ ಮೇಲೆ ದಾಳಿ ನಡೆಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮಹಿಳೆಯ ಮೆಲೆ ಅವ್ಯಚ್ಯ ಶಬ್ದಗಳಿಂದ ಶಾಸಕ ಸಂಗಮೇಶ್ವರರ ಪುತ್ರ ನಿಂದಿಸಿರುವ ಆರೋಪ ಕೇಳಿ ಬಂದಿತ್ತು. ಈ ಆರೋಪದ ಅಡಿಯಲ್ಲಿ ಮಾಧ್ಯಮಗಳು ಸುದ್ದಿ ಮಾಡಿದ್ದವು.
ಕೇಸರಿ ಪಡೆಯಂತೂ ಅಕ್ಷರಶಃ ಶಾಸಕನ ಪುತ್ರನ ವಿರುದ್ಧ ಮುಗಿಬಿದ್ದಿತ್ತು. ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಅಥವಾ ಪ್ರಚೋದನಾಕಾರಿ ಪೋಸ್ಟ್ ಹಾಕುವನ ಆರೋಪಿ ಸ್ಥಾನದಲ್ಲಿ ಹೆಸರನ್ನ ಉಲ್ಲೇಖಿಸಿ ಪ್ರಕರಣ ದಾಖಲಾಗಿದೆ.
ಆದರೆ ಓರ್ವ ಮಹಿಳಾ ಅಧಿಕಾರಿಗೆಅವ್ಯಚ್ಯ ಶಬ್ದಗಳಲ್ಲಿ ಬೈದಿರುವುದು ಮತ್ತು ಬೆದರಿಕೆ ಹಾಕಿರುವುದು ಸ್ಪಷ್ಟವಾದರೂ ಆರೋಪಿ ಸ್ಥಾನದಲ್ಲಿ ಬಸವೇಶ್ ನ ಹೆಸರು ಉಲ್ಲೇಖಿಸದೆ 6-7 ಜನರು ಜನರ ವಿರುದ್ಧ ದೂರು ದಾಖಲಾಗಿರುವುದು ದುರಂತವೇ ಸರಿ.
Post a Comment