ರಸ್ತೆಯಲ್ಲಿ ದಿಢೀರ್ ಅಡ್ಡಬಂದ ಜಿಂಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್ ಅಪಘಾತಕ್ಕೀಡಾಗಿದೆ. ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಸೊರಬ ತಾಲೂಕು ಹಾಯಾ ಗ್ರಾಮದ ಶನೈಶ್ಚರ ದೇವಸ್ಥಾನದ ಸಮೀಪ ಅಪಘಾತವಾಗಿದೆ. ಸತೀಶ್ (46) ಎಂಬುವವರು ಹಾಯಾ ಗ್ರಾಮದಿಂದ ರಾತ್ರಿ 12 ಗಂಟೆ ಹೊತ್ತಿಗೆ ತಮ್ಮೂರು ಕುಪ್ಪಗಡ್ಡೆಗೆ ಬೈಕ್‌ನಲ್ಲಿ ಹಿಂತಿರುಗುತ್ತಿದ್ದರು. ರಸ್ತೆಯಲ್ಲಿ ದಿಢೀರ್ ಎದುರಾದ ಜಿಂಕೆಗೆ ಬೈಕ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಸತೀಶ್ ಕೆಳಗೆ ಬಿದ್ದು, ತಲೆಗೆ ಗಂಭೀರ ಗಾಯವಾಗಿತ್ತು.
ಹಾಯಾ ಗ್ರಾಮದ ದೇವರಾಜ್ ಎಂಬುವವರಿಗೆ ಸತೀಶ್ ಕರೆ ಮಾಡಿ ಅಪಘಾತದ ವಿಷಯ ತಿಳಿಸಿದ್ದರು. ಕೂಡಲೆ ಸತೀಶ್‌ರನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸತೀಶ್ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Post a Comment