ಖಾಸಗಿ ಬಸ್ ಗೆ ಪೆಸಿಟ್ ಕಾಲೇಜು ಬಸ್ ಡಿಕ್ಕಿ

 

ಖಾಸಗಿ ಸಾರಿಗೆ(private transport) ಬಸ್ ಹಾಗೂ ಕಾಲೇಜ್ ಬಸ್ (collage bus) ನಡುವೆ ಡಿಕ್ಕಿಯಾಗಿದೆ. ಡಿಕ್ಕಿಗಳಲ್ಲಿ ಎರಡೂ ವಾಹನಗಳಿಗೆ ಜಖಂ ಆಗಿದೆ. ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 


ಶಿವಮೊಗ್ಗದ ಹೊರವಲಯ ಸಾಗರ ರಸ್ತೆಯಲ್ಲಿರುವ ಮಲ್ಲಿಗೇನಹಳ್ಳಿ ಬಳಿಯ ಬೈಪಾಸ್ ನ ಫ್ಲೈಓವರ್ ಬಳಿಯಿರುವ ಬಿ ಎಚ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಖಾಸಗಿ ಕಾಲೇಜಿನ ಐದು ಜನ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ


ಗಾಯಾಳುಗಳಿಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಎರಡೂ ಬಸ್ ಗಳ ಮುಂಭಾಗ ಜಖಂ ಆಗಿದೆ. ಆಯನೂರು ಕಡೆಯಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಪೆಸಿಟ್ ಕಾಲೇಜುಕಡೆಯಿಂದ ಸಾಗರ ರಸ್ತೆಕಡೆಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕಾಲೇಜ್ ಬಸ್ ಡಿಕ್ಕಿ ಹೊಡೆದಿದೆ. 


ತುಂಗ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎರಡೂ ವಾಹನಗಳು ಠಾಣೆಗೆ ತಂದಿರಿಸಲಾಗಿದೆ.

Post a Comment

Previous Post Next Post