ಮಾದೇಶ್ವರ ದೇವಸ್ಥಾನದ ರಸ್ತೆಯ ಮೂಲಕ ವೀರಾಪುರಕ್ಕೆ ಬೈಕ್ ನಲ್ಲಿ ಹೊರಟಿದ್ದ ವೃದ್ಧ ದಂಪತಿಗಳ ಮಾಂಗಲ್ಯ ಸರ ಕಳುವು ಮಾಡಲಾಗಿದೆ.
ಭದ್ರಾವತಿಯ ನ್ಯೂ ಕಾಲೋನಿಯಲ್ಲಿ ವಾಸವಾಗಿರುವ ನನ್ನ ಸಂಬಂಧಿಕರ ಮಗಳಾದ ಶ್ರೀಮತಿ ಸೌಮ್ಯ ರವರ ಮನೆಯ ಕಾರ್ಯಕ್ರಮಕ್ಕೆ ಸಿರಿಯೂರು ವೀರಾಪುರದ ಹನುಮಂತೆ ಗೌಡರು ತಮ್ಮ ಹೊಂಡ ಡಿಯೋ ಬೈಕ್ ನಲ್ಲಿ ಪತ್ನಿ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮ ಮುಗಿಸಿಕೊಂಡು ವಾಪಾಸ್ ಮನೆಗೆ ತೆರಳುವಾಗ ಬೈಪಾಸ್ ಬಳಿ ಹನುಮಂತೆ ಗೌಡರು ವಾಹನವನ್ನ ನಿಧಾನ ಗೊಳಿಸುತ್ತಿದ್ದಂತೆ ಬೈಕ್ ನ ಹಿಂಬಂದಿಯಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ ನ ಇಬ್ವರು ಯುವಕರು ಗೌಡರ ಪತ್ನಿಯ ಕುತ್ತಿಗೆಯಲ್ಲಿದ್ದ 35 ಗ್ರಾಂ ಚಿನ್ನಾಭರಣವನ್ನ ಕಳವು ಮಾಡಲಾಗಿದೆ.
ತಾಳಿ ಸರದ ಬೆಲೆ 1.75.000/-ರೂ. ಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಬಂಗಾರದ ತಾಳಿ ಸರವನ್ನು ಕಿತ್ತುಕೊಂಡು ಹೋದ 02 ಜನ ಅಪರಿಚಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Post a Comment