ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಮಾನ್ಯ ಮಾಡುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೈಕ್ರೋ ಫೈನಾನ್ಸ್ ನವರ ಕಿರುಕುಳದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿಸಿ ಕಚೇರಿ ಮುಂದೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗಂಗಾಧರ ಕೆಟಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ.
ಮೈಕ್ರೋ ಫೈನಾನ್ಸ್ ಕಂಪನಿಗಳು ಗ್ರಾಮೀಣ ಪ್ರದೇಶದ ಜನರಿಗೆ ಕಾನೂನು ಬಾಹಿರವಾಗಿ ಸಾಲ ವಸೂಲಾತಿ ಕ್ರಮಗಳನ್ನ ಅನುಸರಿಸುತ್ತಿರುವುದನ್ನ ಸಾಲ ವಸೂಲಾತಿಯಲ್ಲಿ ಕಂಪನಿ ಸಿಬ್ಬಂದಿಗಳು ನಡೆಸುತ್ತಿರುವ ಕಿರುಕುಳವನ್ನ ಹಾಗೂ ಗೂಂಡಾಗಿರಿಯ ವರ್ತನೆಯನ್ನ ಸಂಘ ಖಂಡಿಸಿದೆ.
ಬಗರ್ ಹುಕುಂ ಸಾಗುವಳಿದಾರರಿಗೆ ಒಕ್ಕಲೆಬ್ಬಿಸದೆ ಭೂಮಿ ಒಡೆತನದ ಹಕ್ಕುಪತ್ರವನ್ನ ನೀಡಬೇಕು. ಹೊಸ ಕೃಷಿ ಕಾಯ್ದೆಗಳನ್ನ ವಾಪಾಸ್ ಪಡೆಯಬೇಕು. ಕರ್ನಾಟಕ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ, ಎಂಎಸ್ ಪಿ ಬೆಲೆಯನ್ನ ಕಾನೂನು ವ್ಯಾಪ್ತಿಗೆ ತರಬೇಕು. ಕೃಷಿ ಪಂಪ್ಸೆಂಟ್ ಗಳಿಗೆ ವಿದ್ಯುತ್ ಸರಬರಾಜು ಮಾಡಲು ಇರುವ ಕಾಯ್ದೆಗಳನ್ನ ಸಡಿಲಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಯನ್ನ ಈಡೇರಿಸುವಂತೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಈರಣ್ಣ ಪ್ಯಾಟಿ, ಹಾಲೇಶಪ್ಪ ಗೌಡ್ರು, ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ಪುಟ್ಟನ ಗೌಡ್ರು, ಮಂಜುನಾಥೇಶ್ವರ, ಮೋಹನ್ ಕುಮಾರ್ ಕೂಡ್ಲಿಗೆರೆ, ಜಗದೀಶ್ ನಾಯಕ್, ಎಂ ಗಿರೀಶ್ ಮಾಳೇನಹಳ್ಳಿ, ಭದ್ರಾವತಿಯ ಹಿರಣಯ್ಯ ಮೊದಲಾದವರು ಉಪಸ್ಥಿತರಿದ್ದರು.
Post a Comment