ಘಟಿಕೋತ್ಸವದಲ್ಲಿ ಹಲವು ಲೋಪಗಳಾಗಿಲ್ಲ ಎಂದು ಕುಲಪತಿ ಶರತ್ ಅನಂತ ಮೂರ್ತಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲ ಹೆಸರುಗಳನ್ನ ತಪ್ಪಾಗಿ ಓದಲಾಯಿತು. ಪೋಷಕರನ್ನ ಒಳಗೆ ಬಿಡಲು ಆಗಲಿಲ್ಲ. ಪೋಷಕರು ಪಾಸ್ ಪಡೆದಿರಲಿಲ್ಲ. ಅಚಾನಕ್ ಆಗಿ ವಿದ್ಯಾರ್ಥಿಗಳು ಭಾಗಿಯಾಗಲು ಇಚ್ಚೆ ಪಟ್ಟ ಹಿನ್ನಲೆಯಲ್ಲಿ ಹಲವುಗೊಂದಲಗಳಾಯಿತು. ತಕ್ಷಣಕ್ಕೆ ಪರಿಹರಿಸಲು ಸಮಯದ ಕೊರತೆಯಿಂದ ಪರಿಸ್ಥಿತಿ ಹಾಗೆ ಅನಿಸಿದೆ ಎಂದರು.
ಈವೆಂಟ್ಸ್ ಮ್ಯಾನೇಜ್ ಮೆಂಟ್ ಗಳಿಗೆ ಘಟಿಕೋತ್ಸವ ನಡೆಸಲು ಕೊಟ್ಟಿರುವುದೇ ತಪ್ಪು ಎಂಬ ಮಾತು ಕೇಳಿ ಬರುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ರಿಜಿಸ್ಟ್ರಾರ್ ಮಂಜುನಾಥ್, ಇದರಲ್ಲಿ ಎರಡು ಅಭಿಪ್ರಾಯಗಳಿವೆ. ಕೆಲ ವಿಶ್ವ ವಿದ್ಯಾಯಗಳು ಈ ಘಟಿಕೋತ್ಸವವನ್ನ ಈವೆಂಟ್ಸ್ ಮ್ಯಾನೇಜ್ ಮೆಂಟ್ ಗೆ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಇದು ಒಂದು ಕಡೆಯಾದರೆ
ಮತ್ತೊಂದೆಡೆಗೆ ಕಾರ್ಯಕ್ರಮ ಅತ್ಯುತ್ತಮವಾಗಿ ನಿರ್ವಹಿಸಲು ಈವೆಂಟ್ಸ್ ಮ್ಯಾನೇಜ್ ಮೆಂಟ್ ಗೆ ನೀಡಲಾಗಿದೆ. ಮತ್ತೊಂದು ಘಟಿಕೋತ್ಸವ ಏಪ್ರಿಲ್ ನಲ್ಲಿ ನಡೆಯಲಿದ್ದು ಇದರ ಬಗ್ಗೆ ಮತ್ತೊಮ್ಮೆ ಚಿಂತಿಸಲಾಗುವುದು ಎಂದರು.
Post a Comment