ಮ್ಯಾಮ್ ಕೋಸ್ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ. ಶಿವಮೊಗ್ಗದಲ್ಲಿ ನಡೆಯುತ್ತಿರುವ ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘ ನಿಯಮಿತ ಚುನಾವಣೆಯಲ್ಲಿ ಕಣ ಕಣದಲ್ಲೂ ಕೇಸರಿ ಘೋಷಣೆ ಕೂಗಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿಗೆ ಕಾಂಗ್ರೆಸ್ ಬೆಂಬಲಿತರಾದ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಕೇಸರಿ ಕ್ಯಾನ್ಸರ್ ಕಾರಕ ಎಂದು ಕೂಗಲಾಗಿದೆ
19 ನಿರ್ದೇಶಕರ ಆಯ್ಕೆಗಾಗಿ ನಡೆಯುತ್ತಿರುವ ಚುನಾವಣೆಯ ವೇಳೆ ಕಾಂಗ್ರೆಸ್ ಬೆಂಬಲಿತರು ಹಾಗೂ ಬಿಜೆಪಿ ಬೆಂಬಲಿತರ ನಡುವೆ ವಾಗ್ವಾದ ನಡೆದಿದೆ. ಕೇಸರಿ ಶಾಲು ಹಾಕಿಕೊಂಡ ಬಿಜೆಪಿ ಬೆಂಬಲಿಗರು ಕಣ ಕಣದ ಕೇಸರಿ ಕೂಗಿದರೆ ಹಸಿರು ಟೋಪಿ ಹಾಕಿಕೊಂಡ ಕಾಂಗ್ರೆಸ್ ಬೆಂಬಲಿಗರು ಕೇಸರಿ ಕ್ಯಾನ್ಸರ್ ಕಾರಕ ಎಂದು ಘೋಷಣೆ ಕೂಗಲಾಗಿದೆ.
ಬೆಂಬಲಿಗರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಒಟ್ಟು 39 ಜನ ಚುನಾವಣೆ ಕಣದಲ್ಲಿ ಸ್ಪರ್ಧೆ, 11511 ಮತಗಳು ಚಲಾವಣೆಯಾಗಬೇಕಿದೆ.
Post a Comment