ಶಿವಮೊಗ್ಗದಲ್ಲಿ ಅಭಿವೃದ್ಧಿ ಕೆಲಸಗಳಿಗಿಂತ ತಿರುಗೇಟು ನೀಡುವ ರಾಜಕಾರಣ ಮುಂದುವರೆದಿದೆ. ಕುವೆಂಪು ವಿಶ್ವ ವಿದ್ಯಾಲಯದಲ್ಲಿ ಈವೆಂಟ್ಸ್ ಮ್ಯಾನೇಜ್ ಮೆಂಟ್ ಗೆ ನೀಡಿ ಘಟಿಕೋತ್ಸವ ನಡೆಸಲಾಗಿದೆ. ಮಾರ್ಕ್ ಕಾರ್ಡ್ ಸಿಗುತ್ತಿಲ್ಲ ಎಂಬ ಲೋಪ ದೋಷದ ವಿರುದ್ಧ ಮಾತನಾಡಿದ ಎಂಎಲ್ ಸಿ ಅರುಣ್ ಗೆ ಕಾಮನ್ ಸೆನ್ಸ್ ಇಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದರು.
ಇದನ್ನ ಬಿಜೆಪಿ ಕೌಂಟರ್ ನೀಡಿದೆ. ಬಿಜೆಪಿಯ ಮಾಧ್ಯಮ ಸಹ ಪ್ರಮುಖ್ ಚಂದ್ರಶೇಖರ್ ಡಿಎಸ್ ಅರುಣ್ ಒಬ್ಬರು ಸಮರ್ಥ ರಾಜಕಾರಣಿಯಾಗಿದ್ದಾರೆ. ಅವರು ಸಹ ಬಿಜೆಪಿಯಲ್ಲಿ ಸಭ್ಯಸ್ಥ ರಾಜಕಾರಣಿಯಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ಅದರಿಂದಲೇ ಗುರುತಿಸಿ ಅವರನ್ನ ಎಂಎಲ್ ಸಿ ಮಾಡಲಾಗಿದೆ.
ಆದರೆ ಸಚಿವ ಮಧು ಬಂಗಾರಪ್ಪನವರು ಕಾಮನ್ ಸೆನ್ಸ್ ಇಲ್ಲ ಎಂದು ಹೇಳಿ ಅವಮಾನಿಸಿರುವುದು ಎಷ್ಟು ಸರಿಎಂದು ಪ್ರಶ್ನಿಸಿರುವ ಚಂದ್ರಶೇಖರ್ ಚುನಾಯಿತ ಪ್ರತಿನಿಧಿಗಳನ್ನ ಅವಹೇಳನಕಾರಿಯಾಗಿ, ಹೀಯಾಳಿಸಿ ಮಾತನಾಡುವುದನ್ನ ಸಚಿವರು ಕೈ ಬಿಟ್ಟು ಅಭಿವೃದ್ಧಿ ಕೆಲಸಗಳ ಬಗ್ಗೆ ಟೀಕೆ ಟಿಪ್ಪಣಿ ಮಾಡಲಿ, ಆಕ್ಷೇಪಿಸಿರುವುದಕ್ಕೆ ಕಾಮನ್ ಸೆನ್ಸ್ ಇಲ್ಲ ಎಂದು ವೈಯುಕ್ತಿಕ ಟೀಕೆ ಮಾಡದಂತೆ ಎಚ್ಚರಿಸಿದರು.
Post a Comment