ಬಸವ ಏನು ಮೇಲಿಂದ ಇಳಿದು ಬಂದಿದ್ದಾನಾ? ಮಹಿಳಾ ಅಧಿಕಾರಿಯೊಂದಿಗೆ ನಾವಿದ್ದೇವೆ-ಅಬ್ಬರಿಸಿದ ಶಾಸಕ ಚೆನ್ನಿ


 ಭದ್ರಾವತಿ ಶಾಸಕನ ಪುತ್ರ ಮಹಿಳಾ ಅಧಿಕಾರಿಗೆ ಅವ್ಯಾಚ್ಯ ಪದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಙಧಿಸಿದಂತೆ ಕೆಸರಿ ಪಡೆ ಮುಗಿಬಿದ್ದಿದೆ. ಶಾಸಕ ಚೆನ್ನ ಬಸಪ್ಪ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಭದ್ರಾವತಿ ರಿಪಬ್ಲಿಕ್ ಆಗಿ ಎಷ್ಟೋ ವರ್ಷವೇ ಕಳೆದಿದೆ ಎಂದು ಆರೋಪಿಸಿದ್ದಾರೆ. 


ರಾಜ್ಯದಲ್ಲಿ ಭದ್ರಾವತಿ ಗುಂಡಾ ರಾಜ್ಯವಾಗಿದೆ. ಶಾಸಕರ ಮಗನೇ ಗುಂಡಾ ವರ್ತನೆ ಮಾಡುತ್ತಿದ್ದಾನೆ. ಒಬ್ಬ ಅಧಿಕಾರಿಗೆ ಗುಂಡವರ್ತನೆ ಮಾಡುವ ವ್ಯವಸ್ಥೆ ಭದ್ರಾವತಿಯಲ್ಲಿ ನಿರ್ಮಾಣವಾಗಿದೆ. ರಕ್ಷಣಾ ವ್ಯವಸ್ಥೆ ಸತ್ತುಹೋಗಿದೆಯಾ? ಎಂದು ಪ್ರಶ್ನಿಸಿರುವ ಶಾಸಕರು ಹಿಂದೆ ಹತ್ತಾರು ಸಂಗತಿಗಳನ್ನು ಪೊಲೀಸ್ ಗಮನಕ್ಕೆ ತರಲಾಗಿತ್ತು. ಆದರೆ ಕ್ರಮ ಆಗಲಿಲ್ಲ ಅದರ ಪರಿಣಾಮ ಈ ಹಂತಕ್ಕೆ ಹೋಗಿದೆ ಎಂದು ಅಬ್ಬರಿಸಿದರು. 


ಜಿಲ್ಲಾ ರಕ್ಷಣಾಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಲ್ಲವೇ?ಒಬ್ಬ ಹೆಣ್ಣುಮಗಳಿಗೆ ಅವಮಾನ ಮತ್ತು ಅಪಮಾನವಾಗಿದ್ದರೂ ಕೂಡ ಈ ಕ್ಷಣದಲ್ಲೂ ಆತನ ಮೇಲೆ ಕ್ರಮ ಆಗಿಲ್ಲ. ಕಾಂಗ್ರೆಸ್ಗೆ ಒಂದು ಕಾನೂನು ಇನ್ನೊಬ್ಬರಿಗೆ ಇನ್ನೊಂದು ಕಾನೂನು ಇದೆಯಾ?ಗೃಹಮಂತ್ರಿ ಪರಮೇಶ್ವರ ಬಗ್ಗೆ ಮಾತನಾಡುವುದಕ್ಕೆ ನಂಗೆ ಒಂದು ತರ ಆಗುತ್ತದೆ. ಭದ್ರಾವತಿ ವಿಷಯದ ಬಗ್ಗೆ ವಿಧಾನಸೌಧದಲ್ಲಿ ಚರ್ಚೆ ಮಾಡಿದ್ದೇನೆ ಎಂದು ವಿವರಿಸಿದರು. 


ಇಸ್ಪೀಟ್ ದಂಧೆ, ಡ್ರಗ್ಸ್ ಮಾಫಿಯಾ ಓಸಿ ದಂಧೆಗಳು ನಡೆಯುತ್ತಿದೆ ಎಂದು ಸರ್ವೇ ನಂಬರ್ ಸಮೇತ ಹಾಕಿದರು ಕೂಡ ಯಾವುದೇ ಕ್ರಮ ಆಗಿಲ್ಲ. ಆಗ ಕ್ರಮ ಆಗಿರಲಿಲ್ಲ ಅದರ ಪರಿಣಾಮವೇ ಈಗ ಈ ಹೆಣ್ಣು ಮಗಳಿಗೆ ಆದ ಘಟನೆಯಾಗಿದೆ. ಮರಳು ಮಾಫಿಯಾ ವಿಪರೀತವಾಗಿ ಹರಡಿಕೊಂಡಿದೆ. ಡಾಕ್ಟರ್ ಜಿ ಪರಮೇಶ್ವರ್ ಅವರೇ ನಿಮಗೆ ಅದರಿಂದ ಏನಾದರೂ ಬರುತ್ತಾ ಇದೆಯಾ ಎಂದು ವ್ಯಂಗ್ಯವಾಡಿದರು. 


ಗೃಹಸಚಿವರ ಮೇಲೆ ಗೌರವ ಇದೆ ನಮಗೆ ಆದರೆ ಈ ರೀತಿ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಳ್ಳೆ ಅಧಿಕಾರಿಯ ಮೇಲೆ ದರ್ಪ ತೋರ್ಸುತ್ತಿರುವ ಇಂಥ ಶಾಸಕರ ಮಗನ ವಿಚಾರವಾಗಿ ನಿಮ್ಮ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಿ. ಅವನನ್ನು ಬಂಧನ ಮಾಡಲು ನಿಮಗೆ ತಾಕತ್ತಿಲ್ಲವೇ? ಸರ್ಕಾರ ಇದಿಯೋ ಅಥವಾ ಸತ್ತುಹೋಗಿದೆ ಎಂದು ಜನರು ಕೇಳುತ್ತಿದ್ದಾರೆ. ಅವನು ಬೀದಿ ಬಸವ ನಾ? ಅವನಿಗೆ ಸರಿಯಾದ ಪಾಠ ಹೇಳಿಕೊಡದೆ ಹೋದ್ರೆ ನಾಗರಿಕರು ಬುದ್ಧಿ ಕಲಿಸುತ್ತಾರೆ ಎಂದು ಅಬ್ಬರಿಸಿದರು. 


ನಾಗರಿಕ ಸಮಾಜ ಕಾನೂನನ್ನ ಕೈಗೆ ತೆಗೆದುಕೊಳ್ಳ ಬಾರದು ಎಂದರೆ ನೀವು ಕೆಲಸ ಮಾಡಿ. ನಿಮ್ಮದು ನೀರ್ವೀರ್ಯ ಸರ್ಕಾರ ಎನ್ನುವುದಾದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ಈ ಸರ್ಕಾರಕ್ಕೆ ತಾಕತ್ತು ಇಲ್ಲ. ಈಗಾಗಲೇ ಭದ್ರಾವತಿ ರಿಪಬ್ಲಿಕ್ ಆಗಿ ಹೋಗಿದೆ. ಡಿವೈಎಸ್ಪಿ ಅಲ್ಲಿ ಬದುಕಿದ್ದಾರೆ ತಾನೆ? ಸಾಮಾನ್ಯ ವ್ಯಕ್ತಿ ಸಾಮಾಜಿಕ ಜಾಣದಲ್ಲಿ ಪೋಸ್ಟ್ ಮಾಡಿದರೆ ಆತನ ಮೇಲೆ ಸುಮೋಟೋ ಪ್ರಕರಣ ದಾಖಲ ಮಾಡಿ ಜೀವ ಬೇಡ ಅನ್ನುವ ರೀತಿ ಮಾಡುತ್ತಾರೆ ಪೊಲೀಸರು, ಶಾಸಕರ ಮಗ ಬಸವ ಮೇಲಿಂದ ಕೆಳಗೆ ಇಳಿದಿದ್ದಾನೆ ಎಂದು ಅವನಿಗೆ ರಕ್ಷಣೆ ನೀಡುತ್ತಾರೆ. ಅವಮಾನ ಅನುಭವಿಸಿದ ಹೆಣ್ಣು ಮಗುವಿನ ಪರ್ವಾಗಿ ನಾವಿದ್ದೇವೆ ಎಂದು ಶಾಸಕರು ಧೈರ್ಯ ತುಂಬಿದರು. 


ಈ ಪ್ರಕರಣ ಇಡೀ ಭದ್ರಾವತಿಗೆ ಅವಮಾನವಾಗಿದೆ. ಭದ್ರಾವತಿ ರಿಪಬ್ಲಿಕ್ ಆಗಿ ಬಹಳ ವರ್ಷಗಳೇ ಆಗಿವೆ. ಈ ಬಗ್ಗೆ ಮಾತನಾಡುವುದಕ್ಕೆ ಕಾಂಗ್ರೆಸ್ ನವರಿಗೆ ತಾಕತ್ತಿಲ್ಲರಾಜ್ಯದಲ್ಲಿ ಶಾಸಕರು ಈ ರೀತಿ ಗುಂಡ ವರ್ತನೆ ಮಾಡುತ್ತಾರೆ ಭದ್ರಾವತಿಯಲ್ಲಿ ಶಾಸಕರ ಮಕ್ಕಳು ಈ ರೀತಿ ಮಾಡುತ್ತಾರೆ ಏನು ಸಾಯೋಣ. ಶಾಸಕರು ಹಾಗೂ ಶಾಸಕರ ಮಕ್ಕಳ ವರ್ತನೆಯಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ

Post a Comment

Previous Post Next Post