ಮಧು ಬಂಗಾರಪ್ಪನವರ ಭರವಸೆ ಮೇರೆಗೆ ರೈತರ ಪ್ರತಿಭಟನೆ ವಾಪಾಸ್

 

ರೈತರ ತೋಟಗಳ ಮೇಲೆ ಅವೈಜ್ಞಾನಿಕ ಹೈಟೆನ್ಷನ್ ವಿದ್ಯುತ್ ಮಾರ್ಗವನ್ನ ಹಾದು ಹೋಗುವುದನ್ನ ವಿರೋಧಿಸಿ ಶಿಕಾರಿಪುರದ ತಾಲೂಕು ಕಚೇರಿ ಎದುರು ನಡೆಯುತ್ತಿರುವ ಬೃಹತ್ ಪ್ರತಿಭಟನೆ ಸಚಿವ ಮಧು ಬಂಗಾರಪ್ಪನವರು ಮನವಿ ಸ್ವೀಕರಿಸುವ ಮೂಲಕ ಅಂತ್ಯ ಹಾಡಲಾಗಿದೆ. 


ಕಳೆದ ಮೂರು ದಿನಗಳಿಂದ ಹೋರಾಟಗಾರ ತೀ.ನಾ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿತ್ತು. ಇಂದು ಸಚಿವ ಮಧು ಬಂಗಾರಪ್ಪನವರು ಮನವಿಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುವ ಮೂಲಕ ಪ್ರತಿಭಟನೆಗೆ ಇತಿಶ್ರೀ ಹಾಡಲಾಗಿದೆ. 


ಈಸೂರಿನಿಂದ ಶಿಕಾರಿಪುರದ ವರೆಗೆ 110/111 ಕೆವಿ ಎಸ್ ಪಿ ಲೈನ್ ಡಿ.ಸಿ ಗೋಪುರವನ್ನ 4.5 ಕಿಮಿ ದೂರ ಕ್ರಮಿಸದೆ ಇದನ್ನ 23 ಕಿಮಿ ದೂರ ಕ್ರಮಿಸಿ ಬರುವುದರಿಂದ ಹಲವರ ರೈತರ ತೋಟಗಳು ಹಾಳಾಗಲಿದೆ. 4.5 ಕಿಮಿ ದೂರಕ್ಕೆ 12-15 ವಿದ್ಯುತ್ ಗೋಪುರಗಳು ಬರಲಿದೆ. ಇದರ ಬದಲಿಗೆ 45-50ಗೋಪುರಗಳನ್ನ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ರೈತು ಅಂದಿನ ಎಸಿಯ ವಿರುದ್ಧ, ಸಂಸದರ ವಿರುದ್ಧ, ಶಿಕಾರಿಪುರ ಶಾಸಕರ ವಿರುದ್ಧ ಪ್ರತಿಭಟಿಸಲಾಗಿದೆ. 


ಇಂದು ಸಚಿವ ಮಧು ಬಂಗಾರಪ್ಪ ಪ್ರತಿಭಟನಾ ರೈತರ ಬಳಿ ಹೋಗಿ ಸಮಸ್ಯೆಯನ್ನ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ನಾಳೆನೇ ಬಗೆಹರಿಸುವ ಭರವಸೆ ನೀಡಿದ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದಿದ್ದಾರೆ. 

Post a Comment

Previous Post Next Post