ಅರಸಾಳು ಮತ್ತು ಕುಂಸಿಯಲ್ಲಿ ಮೈಸೂರು-ತಾಳಗುಪ್ಪ ರೈಲಿಗೆ(rail) ತಾತ್ಕಾಲಿಕ(temporary) ನಿಲುಗಡೆ(stop) ಮುಂದುವರಿಸಲಾಗಿದೆ.
ನೈಋತ್ಯ ರೈಲ್ವೆಯು ಮೈಸೂರು-ತಾಳಗುಪ್ಪ ಮಾರ್ಗದ ಪ್ರಯಾಣಿಕರ ಅನುಕೂಲಕ್ಕಾಗಿ, ಈ ಕೆಳಗಿನ ರೈಲುಗಳಿಗೆ ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಯ ಅವಕಾಶವನ್ನು ಮುಂದುವರಿಸಲಾಗಿದೆ.
1. ರೈಲು ಸಂಖ್ಯೆ 16227/16228 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 24.02.2025 ರಿಂದ 23.08.2025 ರವರೆಗೆ ಜಾರಿಯಾಗುವಂತೆ ಮುಂದುವರಿಸಲಾಗಿದೆ.
2. ರೈಲು ಸಂಖ್ಯೆ 16206/16205 ಮೈಸೂರು-ತಾಳಗುಪ್ಪ-ಮೈಸೂರು ಡೈಲಿ ಎಕ್ಸ್ ಪ್ರೆಸ್ ರೈಲು ಈ ಹಿಂದೆ ಅರಸಾಳು ಮತ್ತು ಕುಂಸಿ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಒದಗಿಸಲಾಗಿತ್ತು, ಈ ಸೌಲಭ್ಯವನ್ನು 24.02.2025 ರಿಂದ 23.08.2025 ರವರೆಗೆ ಜಾರಿಯಾಗುವಂತೆ ಮುಂದುವರಿಸಲಾಗಿದೆ.
Post a Comment