ಅಂಬಾರಗುಡ್ಡದಲ್ಲಿ ಬೆಂಕಿ ಕಾಣಿಸಿಕೊಳ್ಳುವ ಮೂಲಕ ಸಸ್ಯ ಸಂಪತ್ತು ನಾಶವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಸಿಂಗಳೀಕ ಅಭಯಾರಣ್ಯದ ಅಂಬಾರಗುಡ್ಡದ ಬೆಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ವರದಿಯಾಗಿದೆ.
ಬೆಂಕಿಯಿಂದ ಅಮೂಲ್ಯ ಸಸ್ಯ ಸಂಪತ್ತು, ಸಣ್ಣ ಪುಟ್ಟ ಪ್ರಾಣಿ,ಪಕ್ಷಿಗಳಿಗೆ ಹಾನಿಯಾಗಿದೆ. ಅಂಬಾರಗುಡ್ಡದ ಆವಿಗೆ ಗ್ರಾಮದ ಗುಡ್ಡ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಸಹ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಸುಮಾರು 8 ಕಿ.ಮೀ ವ್ಯಾಪ್ತಿಯಲ್ಲಿನ ದಟ್ಟ ಅರಣ್ಯಕ್ಕೂ ಹರಡಿ ಸಸಿಗಳು ಹಾಗೂ ಮರಗಳು ಬೆಂಕಿಗೆ ನಾಶವಾಗಿದೆ. ನವಿಲು, ಅಳಿಲು, ಮೊಲ, ನರಿ, ಹಂದಿ, ಕಾಡು ಕೋಳಿ ಸೇರಿದಂತೆ ಹಲವಾರು ಹುಲ್ಲುಗಾವಲಿನಲ್ಲಿ ವಾಸ ಮಾಡುವ ಪಕ್ಷಿಗಳು ವಾಸವಾಗಿದ್ದವು. ಬೆಂಕಿ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ ಭಾಗದಿಂದ ಬಂದಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
Post a Comment