ಡ್ರಾಪ್ ಕೇಳುವ ಸೋಗಿನಲ್ಲಿ ಇಬ್ಬರು ಸ್ನೇಹಿತರನ್ನ ನಾಲ್ವರು ಯುವಕರು ರಾಬರಿ ಮಾಡಿದ್ದು ಇದರಲ್ಲಿ ಇಬ್ಬರನ್ನ ಭದ್ರಾವತಿಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೌಶಿಕ್ ಮತ್ತು ಕಾರ್ತಿಕ್ ಇಬ್ವರು ಸ್ನೇಹಿತರು. ಇಬ್ಬರು ಸ್ನೇಹಿತರು ಮದ್ಯ ಸೇವನೆಗಾಗಿ ನಿನ್ನೆ ರಾತ್ರಿ ಹೊಸಮನೆಯ ಬಾರ್ ವೊಂದಕ್ಕೆ ತೆರಳಿದ್ದಾರೆ. ಬಾರ್ ನಲ್ಲಿ ಮೊಬೈಲ್ ಸ್ಕ್ಯಾನ್ ಆಗದಿದ್ದ ಕಾರಣ ಅಲ್ಲೇ ಇದ್ದ ಅನ್ವರ್ ಕಾಲೋನಿ ಹುಡುಗರನ್ನ ಮಾತನಾಡಿಸಿದ್ದಾರೆ.
ಬಾರ್ ನಲ್ಲಿ ನಾಲ್ವರು ಅನ್ವರ್ ಕಾಲೋನಿಯ ಹುಡುಗರು ಸ್ನೇಹಿತರಂತೆ ಮಾತನಾಡಿಸಿ ತಮ್ಮ ಮೊಬೈಲ್ ಗೆ ಹಣಹಾಕಿ ಎಣ್ಣೆ ತೆಗೆದುಕೊಳ್ಳೋಣ ಎಂದಿದ್ದಾರೆ. ನಂತರ ಇದೇ ಕಾರ್ತಿಕ್ ಮತ್ತು ಕೌಶಿಕ್ ರನ್ನ ಬೈಕ್ ನಲ್ಲಿ ಡ್ರಾಪ್ ಕೇಳಿದ್ದಾರೆ. ನಾವು ನಾಲ್ಕು ಜನರಿದ್ದೇವೆ. ಒಬ್ವರನ್ನ ಕರೆದುಕೊಳ್ಳಿ ಎಂದು ಹೇಳಿ ಕೌಶಿಕ್ ಮತ್ತು ಕಾರ್ತಿಕ್ ಜೊತೆ ಅನ್ವರ್ ಕಾಲೋನಿಯ ಹುಡುಗನನ್ನ ಕಳುಹಿಸಿದ್ದಾರೆ. ಹೊಳೆಹೊನ್ನೂರು ರಸ್ತೆಯಲ್ಲಿರುವ ಸಿಎಂ ಇಬ್ರಾಹಿಂ ಮನೆಯ ಹಿಂಭಾಗದಲ್ಲಿ ಸ್ನೇಹಿತರನ್ನ ಅನ್ವರ್ ಕಾಲೋನಿಯ ಯುವಕರು ರಾಬರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೊಬೈಲ್ ಮತ್ತು ಖಾಲಿ ಪರ್ಸ್ ನ್ನ ಕಿತ್ತುಕೊಂಡು ಹೋಗಿದ್ದಾರೆ.
ಈ ವೇಳೆ ಸ್ನೇಹಿತರ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ. ಕಾರ್ತಿಕ್ ನನ್ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಓಲ್ಡ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Post a Comment