ಗ್ರಾಪಂ ಅಧ್ಯಕ್ಷ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

 

ಶಿವಮೊಗ್ಗದ ಮುದ್ದಿನಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷನೋರ್ವ ಆತ್ಮಹತ್ಯೆ (suicide) ಯತ್ನಿಸಿರುವ ಘಟನೆ ವರದಿಯಾಗಿದೆ. 


ಪಿಡಿಒ ವಿರುದ್ಧ ಆರೋಪಿಸಿ ಗ್ರಾಮ ಪಂಚಾಯಿತಿ(Grama panchayath) ಅಧ್ಯಕ್ಷ ರಘು ಎಂಬುವರು ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನ ಮೆಗ್ಗಾನ್ ಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. 


ಜಮೀನಿನ ವಿಚಾರದಲ್ಲಿ ತಮ್ಮನ್ನ ಭೇಟಿ ಮಾಡಲು ಬಂದ ಗ್ರಾಮಸ್ಥರಿಗೆ ಪಿಡಿಒರನ್ನ ಬರ ಹೇಳಿದರೂ ಬಾರದ ಪಿಡಿಒರಿಂದ ಅವಮಾನಕ್ಕೊಳಗಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಅವರ ಆಪ್ತ ವಲಯ ನ ಅಧ್ಯಮಗಳಿಗೆ ತಿಳಿಸಿದೆ. 


ಈ ವಿಚಾರದಲ್ಲಿ ದೂರು ಮತ್ತು ಪ್ರತಿದೂರು ದಾಖಲಾಗುವ ಸಾಧ್ಯತೆ ಇದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುವ ಸಾಧ್ಯತೆಯಿದೆ. ನಾಳೆ ಗ್ರಾಪಂ ಸದಸ್ಯರು ಗ್ರಾಪಂ ಕಚೇರಿ ಮುಂದೆ ಪ್ರತಿಭಟಿಸುವ ಸಾಧ್ಯತೆಯಿದೆ. 

Post a Comment

Previous Post Next Post