ಖಾಸಗಿ ಭೂಮಿ ವಿಚಾರ-ವಿನೋಬ ನಗರ ಪೊಲೀಸ್ ಠಾಣೆ ವಿರುದ್ಧ ಆಕ್ರೋಶ

 

ಶಿವಮೊಗ್ಗದಲ್ಲಿ ಲ್ಯಾಂಡ್ ಮಾಫಿಯಾಗೆ ಮತ್ತೊಂದು ಸೇರ್ಪಡೆ....ನೊಂದ ಜಾಗದ ಮಾಲೀಕ ದಿನೇ ದಿನೇ ಶಿವಮೊಗ್ಗ ಬೆಳೆಯುತ್ತಿದೆ. ಹಾಗೆನೆ ಲ್ಯಾಂಡ್ ಮಾಫಿಯಾ ದವರ ಕಣ್ಣು ಖಾಲಿ ಜಾಗಗಳ ಮೇಲೆ ನೆಟ್ಟಿರುತ್ತದೆ.ಅದರಂತೆ ವಿನೋನಗರ ವ್ಯಾಪ್ತಿಯಲ್ಲಿ ನಡದಿದೆ.


ಜಾಗವನ್ನು 2021 ರಲ್ಲಿ ಜಿಪಿಎ ಹೋಲ್ಡರ್ ರಿಂದ ಕ್ರಯ ಪಡೆದವರು ಇದೀಗ ಹಣವೂ ಇಲ್ಲದೆ ಜಾಗವೂ ಇಲ್ಲದೆ ಠಾಣೆ. ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿದ್ದಾರಲ್ಲದೆ ಜಾಗದಲ್ಲಿ ಅಕ್ರಮವಾಗಿ ಒಳ ಪ್ರವೇಶಿಸಿ ಶೆಡ್‌ ನಿರ್ಮಾಣ ಮಾಡುತ್ತಿದ್ದಾರೆ.


ಕೇಳಿದರೆ ರೌಡಿಗಳಿಂದ ಜೀವ ಬೆದರಿಕೆ ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂದಿಸಿದ ಠಾಣೆಗೆ ದಾಖಲೆ.ನ್ಯಾಯಾಲಯದ ಆದೇಶ ನೀಡಿದ್ದರೂ ಪೋಲಿಸರು ಕ್ರಮ ಕೈಗೊಳಂಡಿಲ್ಲ ಎನ್ನುತ್ತಾರೆ ಜಾಗದ ಮಾಲೀಕರು.ಸಂಜೆಯೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮಾದ್ಯಮ.ಹಾಗು ಎಸ್.ಪಿ ಯವರಿಗೆ ದೂರು ನೀಡಿ ನ್ಯಾಯ ಪಡೆಯಲು ಯೋಜಿಸಲಾಗಿದೆ ಎನ್ನುತ್ತಾರೆ ನೊಂದ ಜಾಗದ ಮಾಲೀಕರಾಗಿದ್ದಾರೆ. ಒಟ್ಟಾರೆ ಶಿವಮೊಗ್ಗದ ಲ್ಯಾಂಡ್ ಮಾಫೀಯಾಗೆ ಇದೊಂದು ಸೇರ್ಪಡೆಯಾಗಿದೆ. 


ವಿನೋಬನಗರದ ಕಲ್ಲಹಳ್ಳಿ ಸರ್ವೆನಂಬರ್ 113/3 ಜಾಗ ನ್ಯಾಯಾಲಯದಲ್ಲಿದ್ದರೂ ಈ ಜಾಗದಲ್ಲಿ ಶೆಡ್ ನಿರ್ಮಿಸಲಾಗಿದೆ. 1 ಕಾಲು ಎಕರೆಗಿಂತ ಹೆಚ್ಚಿಗೆ ಇರುವ ಜಾಗ ನ್ಯಾಯಾಲಯದಲ್ಲಿದ್ದರೂ ಈ ಜಾಗಕ್ಕೆ ಕಣ್ಣು ಹಾಕಲಾಗಿದೆ ಎಂದು ಮಾಲೀಕ ಪಿ.ಮಂಜುನಾಥ್ ಆರೋಪಿಸಿದ್ದಾರೆ. 


ಈ ಜಾಗವನ್ನ ಸೇವಿಯರ್ ವರ್ಗೀಸ್ ಅವರಿಂದ 17 ಲಕ್ಷಕ್ಕೆ ಖರೀದಿಸಿದ್ದು ನಂತರ ಸೇವಿಯರ್ ವರ್ಗಿಸ್ ಅವರು ತನ್ನದೆಂದು ಕ್ಲೈಮ್ ಮಾಡಿಕೊಳ್ಳಲಾರಂಭಿಸಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆಗಳನ್ನ ಹೂಡಲಾಗಿದೆ. 


ಪ್ರಕರಣ ನ್ಯಾಯಾಲಯದಲ್ಪಿದ್ದರೂ ಸಹ ಸೇವಿಯರ್ ನಮ್ಮ ಭೂಮಿಯ ಮೇಲೆ ಕಣ್ಣುಹಾಕಿ ಶೆಡ್ ನಿರ್ಮಿಸಿದ್ದಾರೆ. ಕಾಂಪೌಂಡ್ ಗೆ ಬಣ್ಣ ಬಳಿಸಿದ್ದಾರೆ. ವಿನೋಬ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು ಪಿಐ ಕ್ರಮ ಜರುಗಿಸುತ್ತಿಲ್ಲ. ಎಸ್ಪಿಯವರು ತಿಳಿಸಿದರೂ ಸಹ ಮೇಲಧಿಕಾರಿಗಳ ಸೂಚನೆಯನ್ನ ಪಾಲಿಸುತ್ತಿಲ್ಲ. ಎದುರಾಳಿಗಳಿಂದ ಲಂಚ ಪಡೆದು ಪೊಲೀಸರು ಕ್ರಮ ಜರುಗಿಸುತ್ತಿಲ್ಲ ಎಂದು ಮಂಜುನಾಥ್ ಗಂಭೀರ ಆರೋಪ ಮಾಡಿದ್ದಾರೆ. 

Post a Comment

Previous Post Next Post