ನಾಳೆ ಶಿವಮೊಗ್ಗಕ್ಕೆ ವಿಶ್ವನಾಥ್ ಭಟ್

 

ಖ್ಯಾತ ಆರ್ಥಿಕ ತಜ್ಞರು ಹಾಗು ಭಾರತೀಯ ಜನತಾ ಪಕ್ಷದ ರಾಜ್ಯ ವಕ್ತಾರರು ಆದ ವಿಶ್ವನಾಥ್ ಭಟ್ ರವರು ಫೆ 18ರ ಮಂಗಳವಾರ ಸಂಜೆ ಐದು ಮೂವತ್ತಕ್ಕೆ ಶಿವಮೊಗ್ಗದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ ಸಂಘದ ಸಭಾಂಗಣದಲ್ಲಿ 2025-26 ರ ಕೇಂದ್ರ ಸರ್ಕಾರದ ಬಜೆಟ್ ನ(budget) ವಿಶ್ಲೇಷಣೆ(analysis) ಹಾಗೂ ಶಿವಮೊಗ್ಗ ನಗರದ ಗಣ್ಯರು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. 


ಕಾರ್ಯಕ್ರಮದ ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಜಗದೀಶ್ ಎನ್. ಕೆ.ರವರು ಹಾಗೂ ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷರಾದ ಬಿ ಗೋಪಿನಾಥ್ ರವರು ಹಾಗೂ ವಿಧಾನ ಪರಿಷತ್ ಸದಸ್ಯರುಗಳಾದ ಡಿಎಸ್ ಅರುಣ್ ರವರು ಹಾಗೂ ಡಾಕ್ಟರ್ ಧನಂಜಯ್ ಸರ್ಜಿ ಅವರು ಉಪಸ್ಥಿತರಿರಲಿದ್ದಾರೆ.


ಈ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರದ ಎಲ್ಲಾ ಆಸಕ್ತರು ಪಾಲ್ಗೊಳ್ಳಬೇಕೆಂದು ಜಿಲ್ಲಾ ಬಿಜೆಪಿ ಆಹ್ವಾನವನ್ನು ನೀಡುತ್ತದೆ.

Post a Comment

Previous Post Next Post