ಶಿವಮೊಗ್ಗದಲ್ಲಿ 2022 ರಲ್ಲಿ ಹಂದಿ ಅಣ್ಣಿಯನ್ನ ಹತ್ಯೆ ಮಾಡಿದ್ದ ಕಾಡಾ ಕಾರ್ತಿಕ್ ನ ಗ್ಯಾಂಗ್ ಇಂದು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕಾಡಾ ಕಾರ್ತಿಕ್ ಗ್ಯಾಂಗ್ ನ್ನ ಹತ್ಯೆ ಮಾಡುವ ಸಂಚು ನಡೆಯುತ್ತಿದೆ ಎಂಬ ಮಾಹಿತಿ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಇಂದು ಬಿಗಿ ಬಂದೋ ಬಸ್ತ್ ಮಾಡಲಾಗಿತ್ತು.
ಈಗ ಈ ವಿಚಾರಣೆಯನ್ನ ಶಿವಮೊಗ್ಗದ ನ್ಯಾಯಾಲಯ 10 ದಿನಗಳ ಮುಂದೆ ಹಾಕಿದೆ. ಈ ತಿಂಗಳಲ್ಲಿ ಈ ಗ್ಯಾಂಗ್ ಇದು ಮೂರನೇ ಬಾರಿ ನ್ಯಾಯಾಲಯಕ್ಕೆ ಹಾಜರಾಗಿದ್ದು, ಕಳೆದ ಎರಡು ಬಾರಿ ಇವರು ನ್ಯಾಯಾಲಯಕ್ಕೆ ಹಾಜರಾಗುವಾಗ ಅಬ್ಸರ್ಬ್ ಮಾಡುತ್ತಿದ್ದ ಎದುರಾಳಿ ಗ್ಯಾಂಗ್ ನಿಂದ ಜೀವ ಭಯವಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದಲ್ಲಿ ಸಂಪೂರ್ಣ ಭದ್ರತೆ ನೀಡಲಾಗಿತ್ತು. ಡ್ರೋಣ್ ಸಹ ಹಾರಿಸಲಾಗಿತ್ತು.
ಕಾಡಾ ಕಾರ್ತಿಕ್, ನಿತಿನ್ ಯಾನೆ ಭಜರಂಗಿ, ಮದನ್ ರಾಜ್, ಯಾನೆ ಮದನ್ ರಾಯ್, ಚಂದನ್ ಯಾನೆ ಚಾರ್ಲಿ, ಫಾರುಕ್ ಯಾನೆ ಯಾನೆ ಉಮ್ಮರ್, ಮಧುಸೂಧನ್, ಅಲಿಯಾಸ್ ಅಲಿಯಾಸ್ ಕರಿಯಾ, ಮಧು ಮತ್ತು ಆಂಜನೇಯ ಎಂಬುವರು ಹಙದಿ ಅಣ್ಣಿಯ ಕೊಲೆ ಆರೋಪಿಗಳಾಗಿದ್ದಾರೆ. 2024 ರಲ್ಲಿ ಹರಿಹರದ ಮಧು ಮತ್ತು ರಾಣೇಬೆನ್ನೂರಿನ ಆಂಜನೇಯ ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರಾಗಿ ವಾಪಾಸ್ ಊರಿಗೆ ಹೋಗುವಾಗ ಎದುರಾಳಿಗಳು ಚೀಲೂರ ಬಳಿ ಬೆನ್ನತ್ತಿಕೊಂಡು ಹೋಗಿ ಕೊಲೆ ಮಾಡಿದ್ದರು.
ಹಂದಿ ಅಣ್ಣಿ ಸಹ ನ್ಯಾಯಾಲಯಕ್ಕೆ ಹೋಗುವಾಗಲೇ ಆತನ ಹತ್ಯೆ ನಡೆದಿತ್ತು. ಈಗ ಕಾಡಾಕಾರ್ತಿಕ್ ಮತ್ತು ಆತನ ಗ್ಯಾಂಗ್ ಎಲ್ಲೂ ಹೊರಗಡೆ ಸಿಗುತ್ತಿಲ್ಲ. ನ್ಯಾಯಾಲಯಕ್ಕೆ ಇವರು ಹಾಜರಾಗಲು ಹೊರಗಡೆ ಬರುತ್ತಿದ್ದ ಕಾರಣ ಎದುರಾಳಿ ಗ್ಯಾಂಗ್ ಕಾಯುತ್ತಿದೆ. ಎರಡು ಮೂರು ಬಾರಿ ಇವರನ್ನ ಗಮನಿಸುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ದೊರೆತ ಹಿನ್ನಲೆಯಲ್ಲಿ ಇಂದು ಬಿಗಿ ಭದ್ರತೆ ನೀಡಲಾಗಿದೆ.
ಒಂದು ವೇಳೆ ನ್ಯಾಯಾಲಯದ ಆವರಣದಲ್ಲೇ ಮರ್ಡರ್ ನಡೆದರೆ ದೊಡ್ಡ ಸೆಟ್ ಬ್ಯಾಕ್ ಸಹ ಹೌದು. ಹೀಗಾಗಿ ಸೆಕ್ಯೂರಿಟಿ ಹೆಚ್ಚಿಸಲಾಗಿದೆ ಎಂಬ ಮಾತು ಕೇಳಿ ಬಂದಿದೆ. ಮುಂದಿನ 10 ದಿನಕ್ಕೆ ಮತ್ತೆ ನ್ಯಾಯಾಲಯಕ್ಕೆ ಹಾಜರಾಗಲು ಆರೋಪಿ ಕಾಡಾ ಕಾರ್ತಿಕ್ ಮತ್ತು ಆತನ ಗ್ಯಾಂಗ್ ಗೆ ಸೂಚಿಸಲಾಗಿದೆ. ಅವತ್ತು ಇದು ಟೈಟ್ ಸೆಕ್ಯೂರಿಟಿ ನೀಡಕಾಗುವುದು.
Post a Comment