ಪ್ರತಿಷ್ಠಿತ ಮಾಮ್ ಕೋಸ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳೆ ಗೆದ್ದು ಬೀಗಿದ್ದಾರೆ. 19 ಸ್ಥಾನವನ್ನ ಸಹಕಾರ ಭಾರತಿ ಅಭ್ಯರ್ಥಿಗಳು ಕ್ಲೀನ್ ಸ್ವೀಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ 20 ವರ್ಷದಿಂದ ಮಾಮ್ ಕೋಸ್ ಆಡಳಿತ ಮಂಡಳಿಗೆ ಸಹಕಾರ ಭಾರತಿ ಅಭ್ಯರ್ಥಿಗಳೆ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದು, ಮತ್ತೊಂದು ಅವಧಿಗೆ ಸಹಕಾರ ಭಾರತಿಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
17 ವಿಧಾನ ಸಭಾ ಕ್ಷೇತ್ರವನ್ನ ಹೊಂದಿರುವ ಮಾಮ್ ಕೋಸ್ ನಲ್ಲಿ ಕಾಂಗ್ರೆಸ್ ನ ಬೆಂಬಲಿತ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ ಸಹಕಾರ ಭಾರತಿಯನ್ನ ಕಟ್ಟಿಹಾಕುವಲ್ಲಿ ವಿಫಲವಾಗಿದೆ.
ಗೆದ್ದ ಸಹಕಾರ ಭಾರತಿಯ ಅಭ್ಯರ್ಥಿಗಳು ಕೆಳಕಂಡಂತಿವೆ
ಮಹೇಶ್ ಹುಲ್ಕುಳಿ(4825) ತೀರ್ಥಹಳ್ಳಿ ತಾಲ್ಲೂಕು, ರತ್ನಾಕರ ಬೆಳಗಿನ ಮನೆ, ತೀರ್ಥಹಳ್ಳಿ ತಾಲ್ಲೂಕು (4366), ಆಗುಂಬೆಯ ನಂದನ್ ಹಸಿರುಮನೆ (4956), ತೀರ್ಥಹಳ್ಳಿಯ ಶ್ರೀಮತಿ ಜಯಶ್ರೀ (4870), ಶಿವಮೊಗ್ಗದ ಗೋಂದಿಚಟ್ನಹಳ್ಳಿಯ ವಿರೂಪಾಕ್ಷಪ್ಪ ಜಿ.ಇ. (4524), ಸತೀಶ್ ರಾಮೇನಕೊಪ್ಪ(3932), ಹೊಸನಗರ ದ ಕಿರುಗುಳಿಗೆ ಕೆ.ವಿ.ಕೃಷ್ಣಮೂರ್ತಿ(4642)
ಸಾಗರದ ತಿಮ್ಮಪ್ಪ ಶ್ರೀಧರಪುರ (4451)ಸಾಗರದ ಕೀರ್ತಿರಾಜ್ ಕಾನಳ್ಳಿ (4934), ಭದ್ರಾವತಿಯ ಕುಬೇಂದ್ರಪ್ಪ(4684), ತರೀಕೆರೆಯ ರಮೇಶ್ ಟಿ.ಎಲ್ (4256). ಕಳಸದ ಪ್ರಸನ್ನ ಹೆಬ್ಬಾರ್ ಜಿ.ಎಸ್ (4569), ಕೊಪ್ಪದ ನರೇಂದ್ರ ಬೇಳೆಗದ್ದೆ(4699), ಕೊಪ್ಪದ ಶ್ರೀಮತಿ ಸಹನಾ ಸುಭಾಷ್(4346), ಶೃಂಗೇರಿಯ ಸುರೇಶ್ಚಂದ್ರ ಅಂಬಳೂರು (4007) ಕಚ್ಚೋಡಿ ಶ್ರೀನಿವಾಸ್ ಶೃಂಗೇರಿ (4662) ಹೊಸನಗರದ ಧಮೇಂದ್ರ (4598), ಸಾಗರದ ಅನಂತಪುರದ ಭರ್ಮಪ್ಪ (4310), ಶಿಕಾರಿಪುರದ ವೀರೇಶ್ (4241) ಮತಗಳನ್ನ ಪಡೆದು ಗೆದ್ದಿದ್ದಾರೆ.
Post a Comment