ಮೌನಿ ಅಮಾವಸೆಯ ವೇಳೆ 40 ಕೋಟಿ ಜನ ಗಂಗಾ ಸ್ನಾಮ ಮಾಡಿರುವುದು ಹೆಮ್ನೆ ಅನಿಸುತ್ತದೆ ಎಂದು ಎಬಿವಿಪಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ತಿಳಿಸಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಎಬಿವಿಪಿಯ 44 ನೇ ಪ್ರಾಂತ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿ, ಕುಂಭ ಮೇಳದಲ್ಲಿ 13 ಅಖಾಡ ವಿಭಾಗಗಳನ್ನ ರಚಿಸಲಾಗಿತ್ತು. ನಾಗಸಾಧುಗಳು ಕೋಟಿಗಟ್ಟಲೆ ಜನ ಒಂದಾಗಿದ್ದಾರೆ. ಇದು ದೇವರ ಸಂದೇಶದಿಂದ ನಾಗಸಾಧುಗಳು ಒಂದಾಗಿದ್ದಾರೆ. 40 ಕೋಟಿ ಜನರಿಗೆ ಕುಂಭದಲ್ಲಿ ಅದ್ಭುತ ವ್ಯವಸ್ಥೆ ಮಾಡಲಾಗಿದೆ ಎಂದರು.
ಸ್ಟೀವ್ ಜಾಬ್ ಗೊಂದಲದಿಂದ ಭಾರತಕ್ಕೆ ಬಂದು ಬಾಬಾನ ಬಳಿ ಆಶ್ರಯ ಪಡೆದು 14 ವರ್ಷದ ನಂತರ ಆತನ ಊರಿಗೆ ಹೋದರು. ಆಗ ಭಾರತದ ಮಣ್ಣಿನ ಗುಣವನ್ನ ಗುಣಗಾನ ಮಾಡಿದರು ಎಂದರು.
ನಮ್ಮ ಭಾರತೀಯ ಸಂಸ್ಕೃತಿ ಬಗ್ಗೆ ಹೆಮ್ಮೆ ಇರಬೇಕು. ಭಾರತದಲ್ಲಿ 18-25 ಜನ 65% ಯುವಕರಿದ್ದಾರೆ. ತಾವು ಯಾವುದೇ ರಂಗದಲ್ಲಿ ಭಾರತೀಯ ಯುವಕರಿದ್ದಾರೆ. ನಾಸಾದಲ್ಲಿ 35% ಭಾರತೀಯ ಯುವಕರಿದ್ದಾರೆ. ಬ್ಯಾಂಕಿಂಗ್, ವೈದ್ಯಕೀಯ ರಂಗದಲ್ಲಿ ಭಾರತೀಯ ಯುವಕರ ಪಾತ್ರ ಬಹಳದೊಡ್ಡದಿದೆ ಎಂದರು.
ಭಾರತೀಯ ಯುವಕರ ಶಕ್ತಿ ಅಪಾರವಾಗಿದೆ. ಯವಕರನ್ನ ಎಲ್ಕಾ ರಂಗದಲ್ಲಿ ಬಳಕೆಯಾಗಬೇಕು ಎಂದು ಸ್ವಾಮಿ ಚಿನ್ಮಯಾನಂದ ಸ್ವಾಮಿ ಹೇಳಿದ್ದಾರೆ. ಅಬ್ದುಲ್ ಕಲಾಂ, ಸ್ವಾಮಿ ಯುವಕಾನಂದರು ಯುವಕರ ಶಕ್ತಿ ಬಗ್ಗೆ ಮಾತನಾಡಿದ್ದಾರೆ. ಸಾವರ್ಕರ್ ಅವರು ಯುವಕರನ್ನ ವಾಯುವಿಗೆ ಹೋಲಿಸಿದ್ದಾರೆ. ವಾಯುವಿಗೆ ರೂಪವಿಲ್ಲ. ಆಂಜನೇಯನ್ನಾಗಿಯೂ ಪರಿವರ್ತಿಸಬಹುದು ಆಟಂ ಬಾಂಬ್ ಆಗಿಯೂ ಬಳಸಬಹುದು ಎಂದು ಹೇಳಿದ್ದಾರೆ ಎಂದರು.
ಇದನ್ನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಯುವಕರನ್ನ ಸಮರ್ಪಕವಾಗಿ ಬಳಸಿಕೊಂಡಿದೆ. ಎಬಿವಿಪಿ ಭಾರತೀಯ ಯುವ ಶಕ್ತಿಯನ್ನ ಬಳಸಿಕೊಂಡು ದೇಶವನ್ನ ಕಟ್ಟುವಲ್ಲಿ ಕಳೆದ 70 ವರ್ಷದಲ್ಲಿ ಬಳಸಿಕೊಳ್ಳಲಾಗಿದೆ. ದೇಶ ಮೊದಲು ಎಂಬ ಧ್ಯೇಯದೊಂದಿಗೆ ಸಂಘಟನೆ ಗಟ್ಟಿಯಾಗಿ ಬೆಳೆದಿದೆ. ಕಂಪನಗೊಳಿಸುವ ಕ್ಷೇತ್ರವೆಂದರೆ ವಿದ್ಯಾರ್ಥಿಗಳ ಕ್ಷೇತ್ರವಾಗಿದೆ. ಅಲ್ಲಿ ಎಬಿವಿಬಿ ಆಘಾತ ಶಕ್ತಿಯಾಗಿ ಕೆಲಸ ಮಾಡಿ ವಿದ್ಯಾರ್ಥಿ ಶಕ್ತಿಯನ್ನ ಬಳಸಿಕೊಂಡಿದೆ ಎಂದರು.
ಸರ್ವ ಸ್ಪರ್ಷಿಯಾಗಿ ಬೆಳೆದ ಎಬಿವಿಪಿ ಎಲ್ಲೆಡೆ ಬೆಳೆದಿದೆ. ನೇಹಾ ಹತ್ಯೆ ಘಟನೆಯನ್ನ ವಿದ್ತಾರ್ಥಿ ಪರಿಷತ್ ಜಾಗೃತಿ ಮೂಡಿಸಿದೆ. ದೇಶದ್ರೋಹಿ ಶಕ್ತಿಗಳ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಆದರೂ ಜಾಗೃತಿಗೆ ಎಬಿವಿಪಿ ಗಮನಹರಿಸಬೇಕಿದೆ. 64 ಸಾವಿರ ಜನ ಸದಸ್ಯರು ಎಬಿವಿಪಿಯಲ್ಲಿದ್ದಾರೆ ಎಂದರು.
1973 ರಲ್ಲಿ ಶಿಕ್ಷಣದಲ್ಲಿ ಸರ್ಕಾರದ ಭಾಗಿ ಮತ್ತು ರಾಜಕಾರಣದ ವಿರುದ್ಧ ಸಿಡಿದೆದ್ದ ಎಬಿವಿಪಿ 2024 ರಲ್ಲಿ ಪರಿಸರ ಉಳಿಸುವ ಅಭಿಯಾನವನ್ನ ಹಮ್ಮಿಕೊಂಡಿದೆ. ಗನ್ ವರ್ಸಸ್ ಪೆನ್ ಮೂವ್ ಮೆಂಟ್ ಮಾಡಿ ನಕ್ಸಲ್ ವಿರುದ್ಧ ಹೋರಾಟ ನಡೆಸಿರುವ ಕೀರ್ತಿ ಎಬಿವಿಪಿಗೆ ದೊರೆತಿದೆ ಎಂದರು.
Post a Comment