ಸ್ಕೈ ಡೈವಿಂಗ್ ವೇಳೆ ಪ್ಯಾರಚ್ಯೂಟ್ ನಿಷ್ಕ್ರಿಯ-ಹೊಸನಗರ ಯುವಕ ಸಾವು

 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಏರ್ ಫೋರ್ಸ್ ಅಧಿಕಾರಿಯೊಬ್ಬರು ಸ್ಕೈ ಡೈವಿಂಗ್ ವೇಳೆಯಲ್ಲಿ ಪ್ಯಾರಚೂಟ್ ನಿಷ್ಕ್ರಿಯವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.


ಹೊಸನಗರ ತಾಲೂಕಿನ ಪಟಗುಪ್ಪ ಬಳಿಯ ಸಂಕೂರು ನಿವಾಸಿ ಮಂಜುನಾಥ್ ಜಿ ಎಸ್(36) ಮೃತಪಟ್ಟ ದುರ್ಧೈವಿಯಾಗಿದ್ದಾರೆ.


ಆಗ್ರಾದ ಪ್ಯಾರಾ ಟ್ರೈನಿಂಗ್ ಸ್ಕೂಲ್ ನಲ್ಲಿ ವಾರಂಟ್ ಆಫಿಸರ್ ಹಾಗೂ ಪ್ಯಾರಾ ಜಂಪ್ ಇನಸ್ಟ್ರಕ್ಟರ್ ಆಗಿ ಕಾರ್ಯ ನಿರ್ವಹಿಸುತಿದ್ದ ಮಂಜುನಾಥ್ ಶುಕ್ರವಾರ ಬೆಳಿಗ್ಗೆ 9.30ಕ್ಕೆ ಸ್ಕೈ ಡೈವಿಂಗ್ ಮಾಡುವಾಗ ಪ್ಯಾರಾಚೂಟ್ ನಿಷ್ಕ್ರಿಯವಾದ ಕಾರಣ ನಿಯಂತ್ರಣ ಕಳೆದುಕೊಂಡು ಸುಮಾರು 13 ಸಾವಿರ ಅಡಿ ಮೇಲಿಂದ ಕೆಳಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಕೊನೆಯಲ್ಲಿ ಮಧ್ಯಾಹ್ನ 2.30 ಗೆ ಮೃತದೇಹ ಡ್ರಾಫಿಂಗ್ ಝೋನ್ ಮಲ್ಪುರ ಬಳಿ ಮೃತದೇಹ ಪತ್ತೆಯಾಗಿದೆ.


ಆಗ್ರಾದಲ್ಲಿರುವ ಪ್ಯಾರಾಟ್ರೂಪರ್ ತರಬೇತಿ ಕೇಂದ್ರದಲ್ಲಿ ಸ್ಕೈಡೈವಿಂಗ್ ವೇಳೆ ಹಾರಿದ 12 ಮಂದಿ ಮಂಜುನಾಥ್ ಜಿ ಎಸ್ ವರ್ಷದ ಸುರಕ್ಷಿತವಾಗಿ ಕೆಳಕ್ಕೆ ಇಳಿದಿರಲಿಲ್ಲ. ಅವರಿಗಾಗಿ ಹುಡುಕಾಟ ನಡೆಸಿದಾಗ, ಅವರು ತೀವ್ರ ಗಂಭೀರವಾದ ಸ್ಥಿತಿಯಲ್ಲಿ ಗೋದಿಯ ಹೊಲದಲ್ಲಿ ಪತ್ತೆಯಾಗಿದ್ದಾರೆ. ಅವರನ್ನ ಸ್ಥಳೀಯ ಆಸ್ಪತ್ರೆಗೆ ಕರದೊಯ್ಯಲಾಯ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


ಸಂಕೂರಿನಲ್ಲಿ ತಂದೆ ತಾಯಿ ಹಾಗೂ ತಮ್ಮ , ತಂಗಿ ಇದ್ದು 2019 ರಲ್ಲಿ ಅಸ್ಸಾಂ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ ಮಂಜುನಾಥ್ ಜಿ ಎಸ್ ರವರ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು.ಮೃತದೇಹ ಆಗ್ರಾದಲ್ಲಿದ್ದು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಹುಟ್ಟೂರಾದ ಹೊಸನಗರ ತಾಲೂಕಿನ ಸಂಕೂರು ಗ್ರಾಮಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

Post a Comment

Previous Post Next Post