ಕೆರೆ ಒತ್ತುವರಿ ವಿಚಾರದಲ್ಲಿ ಐದು ಜನ ಅಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಂಡು ನಾಲ್ಕು ವಾರದೊಳಗೆ ಉಪ-ಲೋಕಾಯುಕ್ತಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಅಸಿಸ್ಟೆಂಟ್ ಕಮಿಷನರ್, ತಹಶೀಲ್ದಾರ್, ತಾಲೂಕ್ ಪಂಚಾಯತ್ ಇಒ, ಮಹಾನಗರ ಪಾಲಿಕೆಯ ಸಹಾಯಕ ಕಾರ್ಯ ಅಭಿಯಂತರರು, ಎಡಿಎಲ್ಆರ್ ಯಾಸ್ಮೀನ್ ಭಾನು ಅವರಿಗೆ ಉಪಲೋಕಾಯುಕ್ತರು ಎರಡು ವಾರದಲ್ಲಿ ತನಿಖೆ ನಡೆಸಿ ನಾಲ್ಕುವಾರದೊಳಗೆ ವರದಿ ಸಲ್ಲಿಸುವಂತೆ ಪತ್ರಬರೆದಿದೆ.
ಕುತೂಹಲದ ವಿಷಯವೆಂದರೆ ಗೋಪಾಳದ ಸರ್ವೆ ನಂಬರ್ 3.12 ಎಕರೆ ಜಮೀನಿನಲ್ಲಿ 4 ಗುಂಟೆ ಭಾವಿ ಮತ್ತು ಮನೆಯನ್ನ ಬಿಟ್ಟು ಕೆರೆ ಬಫರ್ ಜೋನ್ ನಿಂದ 100 ಮೀಟರ್ ನಲ್ಲಿ ಸಿಟಿ ಕ್ಲಬ್ ಕಟ್ಟಲು ಸೂಚನೆಯಾಗಿತ್ತು. ಇಲ್ಲಿ ಕಟ್ಟಡ ಮಾತ್ರ ಕಾಣುತ್ತಿದ್ದು ಸುತ್ತಮುತ್ತ ಕಟ್ಟಡಗಳಿವೆ.
ಇಲ್ಲಿ ಕೆರೆಗಳು ಎಲ್ಲಿವೆ ಎಂಬುದು ಹುಡುಕುವ ಸ್ಥಿತಿ ನಿರ್ಮಾಣವಾಗಿದೆ. ಈ ಕೆರೆಗಳನ್ನ ತನಿಖೆ ನಡೆಸಿ ಅಧಿಕಾರಿಗಳ ವರದಿ ಏನು ಬರುತ್ತೆ ಎಂಬುದೇ ಕುತೂಹಲವಾಗಿದೆ. ಸ್ಥಳೀಯ ಪತದರಿಜೆಯೊಂದು ವರದಿ ಮಾಡಿದ ಆಧಾರದ ಮೇರೆಗೆ ಉಪ ಲೋಕಾಯುಕ್ತಕ್ಕೆ ಸಲ್ಲಿಸಲಾಗಿತ್ತು.
ಉಪಲೋಕಾಯುಕ್ತ ಈ ಪ್ರಕರಣದಲ್ಲಿ ತನಿಖೆ ನಡೆಸಿ ವರದಿಸಲ್ಲಿಸಿದೆ ಸ್ಥಳೀಯ ಪತ್ರಿಕೆ ವರದಿ ಹೀಗಿದೆ.
ವರದಿಯಲ್ಲಿತ್ತು
ನಗರದ ಗಾಡಿಕೊಪ್ಪದ ಸರ್ವೆ ನಂ.15 ರಲ್ಲಿ 3 ಎಕರೆ 12 ಗುಂಟೆ, ಕೆರೆಯ ಜಾಗವಾಗಿದ್ದು, ಈ ಕೆರೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡು ಖಾಸಗಿ ವ್ಯಕ್ತಿಗಳು ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ.
ಗಾಡಿಕೊಪ್ಪದ ಸರ್ವೆ ನಂ. 15 ರಲ್ಲಿ 3 ಎಕರೆ 12 ಗುಂಟೆ ಕೆರೆಯ ಜಾಗವೆಂದು ಆರ್.ಟಿ.ಸಿ.ಯಲ್ಲಿ ನಮೂದು ಆಗಿರುತ್ತದೆ. ಈಗಲೂ ಕೂಡ 3 ಎಕರೆ 12 ಗುಂಟೆ ಸರ್ವೆ ನಂ. 15 ರಲ್ಲಿ ಖರಾಬು ಕೆರೆ ಎಂದು ತೋರಿಸುತ್ತದೆ. 3 ಎಕರೆ 12 ಗುಂಟೆ ಕೆರೆಯ ಜಾಗವನ್ನು 2004 ರಲ್ಲಿ ಶಿವಮೊಗ್ಗ ಸಿಟಿಕ್ಲಬ್‌ಗೆ 30 ವರ್ಷಗಳಿಗೆ ಗುತ್ತಿಗೆಯ ಆಧಾರದ ಮೇಲೆ ನೀಡಿದ್ದು, ಕರ್ನಾಟಕ ಭೂ ಮಂಜೂರಾತಿ ನಿಯಮಾವಳಿಗೂ 1969ರ ನಿಯಮ 19ರ 4ಬಿ ಅನ್ವಯ 1 ವರ್ಷಕ್ಕೆ ಎಕರೆ ಒಂದಕ್ಕೆ 2 ಸಾವಿರ ರೂಗಳಂತೆ ಗುತ್ತಿಗೆ ನರ ವಿಧಿಸಿ ಕಾರ್ಯದರ್ಶಿ ಶೀವಮೊಗ್ಗ ಸಿಟಿಕ್ಲಬ್ ರವರಿಗೆ ಗುತ್ತಿಗೆ ಆಧಾರದ ಮೇಲೆ ಷರತ್ತು ವಿಧಿಸಿ ಮಂಜೂರಾತಿ ಆದೇಶ ಹೊರಡಿಸಲಾಗಿತ್ತು.
ನಂತರ ಒಂದು ವರ್ಷದ ಅವಧಿಗೆ 6,600 ರೂಗಳಿದ್ದು, ಎಸ್‌ಬಿಐ ಖಾತೆಯಲ್ಲಿ ಕಟ್ಟಿ ರಶೀದಿ ಪಡೆದುಕೊಂಡಿರುತ್ತಾರೆ. ಗುತ್ತಿಗೆ ನೀಡಿದ ಜಮೀನಿನಲ್ಲಿ 1 ಎಕರೆ 8 ಗುಂಟೆ ಸಾರ್ವಜಿನಿಕ ರಸ್ತೆ ಉಪಯೋಗಕ್ಕೆ ಮೀಸಲಿಟ್ಟು 4 ಗುಂಟೆಯಲ್ಲಿ ಆಲಿ ಹಂಚಿನಮನೆ, ಒಂದು ನೀರಿನ ಬಾವಿ ಹಾಗೂ ಮನೆಯ ಮುಂದೆ ತಂತಿ ಬೇಲಿ ಹಾಕಿಕೊಂಡಿರುವ ಜಾಗ ಇರುತ್ತದೆ ಎಂದು ಗುರುತಿಸಿದ್ದಾರೆ. ಆದ್ದರಿಂದ ಆ ಜಾಗವನ್ನು ಹೊರತು ಪಡಿಸಿ ಉಳಿದ 2 ಎಕರೆ ಜಾಗವನ್ನು ಮಾತ್ರ ಶಿವಮೊಗ್ಗ ಸಿಟಿಕ್ಲಬ್‌ಗೆ ಗುತ್ತಿಗೆ ಆಧಾರದ ಮೇಲೆ 30 ವರ್ಷಗಳಿಗೆ ಷರತ್ತು ಬದ್ಧವಾಗಿ ನೀಡಲು ಆದೇಶವಾಗಿದೆ.
ಗಾಡಿಕೊಪ್ಪದ ಸರ್ವೆ ನಂ. 15 ರಲ್ಲಿ ಸದರಿ 3 ಎಕರೆ 12 ಗುಂಟೆ ಕೆರೆಯ ಜಾಗವನ್ನು 2 ಎಕರೆ ಸಿಟಿಕ್ಲಬ್‌ಗೆ 30 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಸರ್ಕಾರದ ಆದೇಶದನ್ವಯ ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಉಳಿದ 1 ಎಕರೆ 12 ಗುಂಟೆ ಜಾಗ ಏನಾಯಿತು? ಈಗ ಲಗಾನ್ ಸೈ ಲೈನ್ ಹೆಸರಿನಲ್ಲಿ ಕಟ್ಟುತ್ತಿರುವ ಅಪಾರ್ಟ್‌ಮೆಂಟ್‌ನವರು ಅದನ್ನು ಅತಿಕ್ರಮಿಸಿಕೊಂಡಿದ್ದಾರಾ? ಅಥವಾ ಸರಿಯಾಗಿ ಸರ್ವೆ ಆಗದೇ ಕೆರೆಯ ಜಾಗವನ್ನು ತಪ್ಪಾಗಿ ಜಿಲ್ಲಾಡಳಿತ ಸಿಟಿಕ್ಲಬ್‌ಗೆ ನೀಡಿದೆಯಾ? ಇಲ್ಲಿ ಕೆರೆಗೆ ಸಂಬಂಧಿಸಿದಂತೆ ಬಫರ್ ನೀತಿಯನ್ನು ಅನುಸರಿಸಲಾಗಿದೆಯಾ? ಎನ್ನುವ ಸಾಕಷ್ಟು ಗೊಂದಲಗಳು ಈ 3 ಎಕರೆ 12 ಗುಂಟೆ ಜಾಗದಲ್ಲಿ ಹುಟ್ಟಿದೆ.
ಅಷ್ಟಕ್ಕೂ ಕೆರೆಯ ಜಾಗವನ್ನು ಖಾಸಗಿ ವ್ಯಕ್ತಿಗಳ ಅಡಿ ಬರುತ್ತಾ? ಬರುವುದಿಲ್ಲವೆಂದರೆ ಆ 3 ಎಕರೆ 12 ಗುಂಟೆ ಕೆರೆಯ ಜಾಗ ಎಲ್ಲಿ ಹೋಯಿತು? ಎನ್ನುವ ಸಮಗ್ರ ತನಿಖೆಯಾಗಬೇಕು ಎಂದು ವರದಿಯಾಗಿತ್ತು.
Post a Comment