ನಿನ್ನೆ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅಡಿಕೆ ಹಾನಿಕಾರಕ ಎಂದು ಅಫಿಡೆವಿಟ್ ಹಾಕಿರೋದು ಯಾರು ಎಂದು ಮಧು ಬಂಗಾರಪ್ಪ ಸ್ಪಷ್ಟಪಡಿಸಲಿ ಎಂದು ಹೇಳಿರುವ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಕೆಪಿಸಿಸಿ ವಕ್ತಾರ ರಮೇಶ್ ಹೆಗಡೆ, ಆರಗ ಜ್ಞಾನೇಂದ್ರ ಅರೆಬರೆ ಹೇಳಿಕೆ ಕೊಡುತ್ತಾರೆ.ಅವರಿಗೆ ಮ್ಯಾಮ್ ಕೋಸ್ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಕೇಂದ್ರ ಸರ್ಕಾರ ತಜ್ಞರ ಸಮಿತಿ ನೇಮಕ ಮಾಡಿತ್ತು. ಸಹಕಾರ ಭಾರತಿ ಮತ ಕೇಳುತ್ತಿದ್ದ ಎಸ್ ಆರ್ ರಂಗಮೂರ್ತಿ, ರಾಮ್ ಭಟ್, ಒಳಗೊಂಡ ಸಮಿತಿ ಅಡಿಕೆ ಜಿಗಿಯುವುದರಿಂದ ಕ್ಯಾನ್ಸರ್ ಬರುತ್ತೆ ಎಂದು ವರದಿ ನೀಡಿದಬರು ಬಿಜೆಪಿಯವರು ಎಂದು ಆರೋಪಿಸಿದರು.
ಅಡಿಕೆ ಕಾರಕ ಎಂದು ಅಟಲ್ ನೇತೃತ್ವದ ಬಿಜೆಪಿ ಸರ್ಕಾರದವರದು ಇದೆ. ಮಾಜಿ ಸಚಿವರು ಆರಗ ಜ್ಞಾನೇಂದ್ರ ಇದನ್ನ ಅರಿತುಕೊಳ್ಳಬೇಕು. ಅಡಿಕೆಗೆ ನಬಾರ್ಡ್, ಮೊದಲಾದ ಸರ್ಕಾರ ಬೆಂಬಲಿತ ಸಂಸ್ಥೆಗಳು ಅಡಿಕೆಗೆ ಸಾಲಕೊಡಬಾರದು ಎಂದು ವರದಿ ನೀಡಿದೆ.
2021 ರಂದು ನರೇಂದ್ರ ಮೋದಿ ಸರ್ಕಾರದ ಸಚಿವೆ ಅನುಪ್ರಿಯ ಪಟೇಲ್, ಅಶ್ವಿನ್ ಕುಮಾರ್ ಚೌಬೆ ಅಡಿಕರ ಕ್ಯಾನ್ಸರ್ ಎಂದು ಸಂಸದ್ ಅಧಿವೇಷನದಲ್ಲಿ ಅಡಿಕೆ ಹಾನಿಕಾರಕ ಎಂದು ಸಂಸತ್ ನಲ್ಲಿ ಹೇಳಿದ್ದಾರೆ. ಮಾನ್ಸುಖ್ ಮಾಙಡವೀಯ ಅಡಿಕೆಯ ಮಾನವ ಬಳಕೆಯ ನಿಷೇಧಿಸುವ ಬಗ್ಗೆ 2022 ರಲ್ಲಿ ನೀಡಿರುತ್ತದೆ.
2021 ರಲ್ಲಿ ಯಡಿಯೂರಪ್ಪನವರ ಸರ್ಕಾರ ಮಾರಾಟ ವಾಹಿನಿ ವೆಬ್ ಸೈಟ್ ನಲ್ಲಿ ಮಾದಕ ಉತ್ತೇಜಕ ಪಟ್ಟಿಗೆ ಸೇರಿಸಿ ಅಡಿಕೆ ಮಾನ ಕಳೆದಿದೆ. ಬೂತಾನ್ ದೇಶದಿಂದ 1700 ಮೆಟ್ರಿಕ್ ಟನ್ ಅಡಿಕೆ ಆಮದು ಮಾಡಿಕೊಂಡಿರುವುದು ನಮ್ಮ ರೈತರನ್ನ ಉದ್ದಾರ ಮಾಡಲು ಅಲ್ಲ ಬದಲಿಗೆ ಬೂತಾನ್ ನ ಚುನಾವಣೆಗೆ ಅನುಕೂಲ ಮಾಡಿಕೊಡಲು ಎಂದು ಆರೋಪಿಸಿದ ಅವರು ಅಡಿಕೆ ಮಾನ ಹಾಗೂ ಮೌಲ್ಯವನ್ನ ತೆಗೆದ ಬಿಜೆಪಿ ಅಡಿಕೆ ಬೆಳೆಗಾರರ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ವಕ್ತಾರ ಆಗ್ರಹಿಸಿದರು.
ಎಂಎಸ್ ರಾಮಯ್ಯ ಆರೋಗ್ಯ ಸಂಸ್ಥೆ ವರದಿ ಆಧಾರದ ಮೇಲೆ ಸುಪ್ರೀಂ ಕೋರ್ಟ್ ಗೆ ಅಡಿಕೆ ಬೆಳೆಗಾರರಿಗೆ ಎಸಗಿದ ದ್ರೋಹ ಅಲ್ಲವೇ ಎಂದು ಆಕ್ಷೇಪಿಸಿದರು. ಸುದ್ದಿಗೋಷ್ಠಿಯಲ್ಲಿ ಧೀರಾಜ್ ಹೊನ್ನವಿಲೆ, ಚಂದ್ರಶೇಖರ್, ಕಲೀಂ ಪಾಶ, ವಿಜಯಕುಮಾರ್, ಜಿ.ಡಿ.ಮಂಜುನಾಥ್ ಉಪಸ್ಥಿತರಿದ್ದರು.
Post a Comment