ಸಾಲಬಾಧೆಗೆ ಬೇಸತ್ತು ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

 

ಸಾಲಬಾಧೆಗೆ ಬೇಸತ್ತು ರೈತರೊಬ್ಬರು ತಮ್ಮದೇ ಅಡಿಕೆ ತೋಟದಲ್ಲಿದ್ದ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.


ಹರತಾಳು ಗ್ರಾಪಂ ವ್ಯಾಪ್ತಿಯ ಕೆ ಹುಣಸವಳ್ಳಿ ಘನಂದೂರು ಗ್ರಾಮದ ಪುಟ್ಟನಾಯ್ಕ್ (80) ಮೃತ ದುರ್ಧೈವಿಯಾಗಿದ್ದಾರೆ.


ಮೃತ ಪುಟ್ಟನಾಯ್ಕ್ ರವರು ಕೃಷಿ ಉದ್ದೇಶದಿಂದ ಸಾಲ ಮಾಡಿದ್ದು ಬೆಳೆ ನಷ್ಟದಿಂದ ಸಾಲ ಕಟ್ಟಲಾಗದೇ ಬ್ಯಾಂಕ್ ಹಾಗೂ ಸಂಘ ಸಂಸ್ಥೆಗಳಲ್ಲಿ ಸಾಲಕ್ಕೆ ಬಡ್ಡಿ ಹೆಚ್ಚಾದ ಕಾರಣ ಬೇಸತ್ತಿದ್ದರು ಎನ್ನಲಾಗಿದೆ. ಇವರಿಗೆ ಕೃಷ್ಣ ಪ್ರಗತಿ ಗ್ರಾಮೀಣ ಬ್ಯಾಂಕ್ ಹೊಸನಗರ 13 ಲಕ್ಷ , ತೋಟಗಾರ್ಸ್ ಅಡಿಕೆ ಮಂಡಳಿ ಸಾಗರ 2.5 ಲಕ್ಷ , ಪಿಎಲ್ ಡಿ ಬ್ಯಾಂಕ್ 2.5 ಲಕ್ಷ ಸಾಲವಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.


ಮೃತರು ಮೂರು ಗಂಡು ಹಾಗೂ ಎರಡು ಹೆಣ್ಣು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇರಿಸಲಾಗಿದೆ.ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

Previous Post Next Post