ಸಂಗೀತ್ ಸಮರ್ಪಣ್ ಟ್ರಸ್ಟ್ ನ ಅಧ್ಯಕ್ಷ ಸುರೇಖಾ ಹೆಗಡೆ ಇಂದು ಸುದ್ದಿಗೋಷ್ಠಿ ನಡೆಸಿ ಸುಗಮ ಸಂಗೀತ ಕ್ಷೇತ್ರದ ಬಗ್ಗೆ ಮಾತನಾಡಿದರು. ಹಾಡುವ ವೈಖರಿ ಬದಲಾಗಿದೆ. ಜನರಿಗೆ ಇದು ಗೊತ್ತಾಗುತ್ತಿಲ್ಲ ಎಂದರು.
ಇದರ ಹಿನ್ನಲೆಯಲ್ಲಿ ಧ್ವನಿ ಸಂಸ್ಕರಣೆಯನ್ನ ಹಾಡುಗಾರ ಬೆಳಸಿಕೊಳ್ಳುವ ಕಾರಣ ಎರಡು ದಿನ ಶಿಬಿರ ಹಮ್ಮಿಕೊಂಡಿದ್ದೇನೆ ಭಾಗವಹಿಸಲು ಕೋರಿದರು.
ಪುತ್ತೂರು ನರಸಿಂಹ ನಾಯಕ್, ಮೆಂಡೋಲಿನ್ ಎನ್ ಎಸ್ ಪ್ರಸಾದ್ ಸಂಪನ್ಮೂಲವ್ಯಕ್ತಿಗಳಾಗಿ ಆಗಮಿಸುತ್ತಿದ್ದಾರೆ. ಇವರು ಎರಡು ದಿನ ಶಿವಮೊಗ್ಗದಲ್ಲಿ ಇದ್ದು ಶಿಬಿರ ನಡೆಸಿಕೊಡಲಿದ್ದಾರೆ. ಆಸಕ್ತರು 15 ವರ್ಷದಿಂದ 30 ವರೆಗಿನ ವಯೋಮಿತಿಯವರು ಭಾಗಿಯಾಗಬಹುದಾಗಿದೆ.
ಮಾ.15 ಮತ್ತು 16 ರಂದು ಶಿವಮೊಗ್ಗದಲ್ಲಿ ನಡೆಯಲಿದ್ದು ಅತ್ಯಂತ ಸೂಕ್ತವಾದ ಸ್ಥಳ ಆಯ್ಕೆ ಮಾಡಲಿದ್ದೇನೆ. ನಿಗದಿತ ಶುಲ್ಕವಿರುತ್ತದೆ. ಆಸಕ್ತರು 9980315679/9481662308 ಸಂಪರ್ಕಿಸಬಹುದಾಗಿದೆ.
ಸುಮಾರು 20 ವರ್ಷಗಳಿಂದ ಗಾಯಕಿಯಾಗಿ, ಸಂಯೋಜಕಿಯಾಗಿ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರು ಸುರೇಖಾ ಹೆಗಡೆ 8 ವರ್ಷಗಳಿಂದ ನನ್ನ ಸಂಗೀತ್ ಸಮರ್ಪಣ್ ಟ್ರಸ್ಟ್ ನಡೆಸುತ್ತಿದ್ದಾರೆ.
ಸಂಗೀತ ಬದಲಾಗಿದೆ ಕೇಳುವ ಕಿವಿಯೂ ಬದಲಾಗಿದೆ. ಫಾಸ್ಟ್ ಬೀಸ್ಟ್ ಗೆ ಯುವ ಜನ ಮಾರಿಹೋಗಿದ್ದಾರೆ. ನನ್ನ ಪ್ರತಿಭೆಯನ್ನ ನಂಬಿ ಬದುಕುತ್ತಿದ್ದೇನೆ. ಇಲ್ಲಿಂದ ಸಿನಿಮಾ ಹಾಗೂ ಸಂಗೀತ ಕಾರ್ಯಕ್ರಮ ನಡೆಸಿದ್ದಾರೆ ಅವರೆಲ್ಲ ನಮ್ಮ ಸಂಗೀತ ಸೇವೆಯನ್ನ ಬಳಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
Post a Comment