ಖಂಡ್ರೆ ಅವರದ್ದು ತೊಗಲ್ ದರ್ಬಾರ್, ಸಂಸದರಿಗೆ ರೈತರ ಸಮಸ್ಯೆ ಬಗ್ಗೆ ಅರಿವಿಲ್ಲ-ತೀ.ನಾ.ಶ್ರೀ ಗುಡುಗು

 

ಶಿವಮೊಗ್ಗದಲ್ಲಿ 1978 ರ ಅರಣ್ಯ(Forest) ಸಂರಕ್ಷಣ(preservation) ಕಾಯಿದೆ(act) ಅಡಿ, ಅರಣ್ಯ ಭೂಮಿ ಸಾಗುವಳಿ(cultivation) ಮಾಡಿದವರಿಗೆ ಕೈಬರಹದ ಪಹಣಿ ಹೊಂದಿದ್ದರೆ 3 ಎಕರೆ ಜಮೀನಿ ನೀಡಬೇಕು ಎಂಬುದಕ್ಕೆ ಸಂಬಂಧಿಸಿದಂತೆ 8 ಆದೇಶವಿದೆ.ಯಾವ ಆದೇಶವಿದ್ದರು ರೈತರು ಅತಂತ್ರರಾಗಿದ್ದಾರೆ ಎಂದು ರೈತ ಹೋರಾಟಗಾರ ತೀ.ನಾ.ಶ್ರೀನಿವಾಸ್ ಗುಡುಗಿದರು. 


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಾವುದೇ ಆದೇಶದಲ್ಲಿ ಸೂಕ್ತವಾಗಿ ಜಾರಿ ಮಾಡಿಲ್ಲ. ಈಗ ಈ ಕಾನೂನು 29 ವರ್ಷ ಕಳದಿಧದು 20 ಸಾವಿರ ರೈತರಿಗೆ ಹಕ್ಕು ಪತ್ರ ಲಭಿಸಿಲ್ಲ. ಕೇಂದ್ರದ ಅರಣ್ಯ ಸಂರಕ್ಷಣೆಯ ವಿರುದ್ಧವಾಗಿದೆ. ಈಶ್ವರ ಖಂಡ್ರೆ ತೊಗಲಕ್ ದರ್ಬಾರ್ ಮಾಡ್ತಾ ಇದ್ದಾರೆ. ಅರಣ್ಯ ಮತ್ತು ಕಂದಾಯ ಬೇರೆ ಮಾಡಲು 1978 ರಲ್ಲಿದ್ದ ಸಮಸ್ಯೆ ಬಗೆಹರಿಸಬೇಕು. ಆದರೆ ಸಚಿವರು ಅರಣ್ಯ ಕಾನೂನು ತನ್ನದೇ ಎಂದಿದೆ ಎಂದು ದೂರಿದರು. 


ಮಲೆನಾಡಿನ ಸಮಸ್ಯೆ ಬಗೆಹರಿದಿಲ್ಲ. ಉಡುಗಣಿ ಮತ್ತು ಗಾಂಧಿನಗರದ ರೈತರ ನೂರಾರು ಜನರಿಗೆ ಅನ್ಯಾಯವಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ರೈತರ ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ ನಡೆಸುತ್ತೇವೆ. ನಮ್ಮ ಭೂಮಿ ನಮ್ಮ ಹಕ್ಕಿನ ಅಡಿ ಹೋರಾಟ ಮಾಡುವುದಾಗಿ ಹೇಳಿದರು. 


ರೈಲು ಬಿಡೋದು ಬಸ್ ಬಿಡೋದು ಬಿಟ್ಟರೆ ಸಂಸದರಿಗೆ ರೈತರ ಸಮಸ್ಯೆಯರ ಬಗೆಹರಿಸುವ ಬಗ್ಗೆ ಜ್ಞಾನವಿಲ್ಲ. ಹೇಳಲು ಹೋದರೆ ನಮಗೆ ಅಠ ಮಾಡಲು ಬರಬೇಡಿ ಎಂದು ಹೇಳ್ತಾರೆ. ಆದರೆ ರೈಲು ಬಸ್ಸು ಬಿಡೋದು ಬಿಟ್ಟರೆ ಬೇರೆ ಸಮಸ್ಯೆ ಬಗೆಹರಿಸಲು ಅವರಿಗೆ ಆಗೊಲ್ಲ ಎಂದರು. 


10 ಸಾವಿರ ಜನರ ಎದುರು ಮಲೆನಾಡಿಗರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದ ಸಿಎಂ ಡಿಸಿಎಂ ಯಾವಕ್ರಮ ಜರುಗಿಸಿಲ್ಲ. ಖಂಡ್ರೆ ಮತ್ತು ಇತರೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಸಚಿವ ಮಧು ಒಬ್ಬರು ಹೋರಾಟ ಮಾಡ್ತಾ ಇದ್ದಾರೆ. ಆದರೆ ಬೇರೆಯಾವ ಕ್ರಮವಿಲ್ಲ ಎಂದು ಟೇಬಲ್ ಕುಟ್ಟಿ ಮಾತನಾಡಿದರು. 

Post a Comment

Previous Post Next Post