ಚಲಿಸುತ್ತಿದ್ದ ರೈಲಿನಿಂದ ಬಿದ್ದು ಪ್ರಯಾಣಿಕನ ಕೈ ಬೆರಳು ಕಟ್

 

ಶಿವಮೊಗ್ಗದ ಗುಂಡಪ್ಪ ಶೆಡ್ ನ ರೈಲ್ವೆ ಗೇಟ್(Railway Gate) ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಕೈ ಬೆರಳು(finger) ಮುರಿದಿರುವ ಘಟನೆ ಇಂದು ಮಧ್ಯಾಹ್ನ ನಡೆದಿದೆ. 


ಶಿವಮೊಗ್ಗದ ಗುಂಡಪ್ಪ ಶೆಡ್ ನ ಬಳಿ ಬೆಂಗಳೂರಿನಿಂದ ರೈಲು ಎಸ್ ಎಂ ಇಟಿ ಯಲ್ಲಿ ರೈಲು ನಿಂತಿದೆ. ನಂತರ ಹೊಟಿದೆ. ಗುಂಡಪ್ಪ ಶೆಡ್ ಬಳಿ ರೈಲು ಸಿಗ್ನಲ್ ಹಿನ್ನಲೆಯಲ್ಲಿ ತಡವಾಗಿ ಚಲಿಸಿದೆ. ತಡವಾಗಿ ಚಲಿಸುತ್ತಿದ್ದಂತೆ ಪ್ರಯಾಣಿಕನೋರ್ವ ಜಂಪ್ ಮಾಡಿದ್ದಾನೆ. 


ಜಂಪ್ ಮಾಡಿದ ಪ್ರಯಾಣಿಕನ ಕೈ ಮುರಿದಿದೆ. ಆತ ಯಾಕೆ ಹಾರಿದ ಎಂಬುದರ ಬಗ್ಗೆ ಮಾಹಿತಿ ತಿಳಿದು ಬರಬೇಕಿದೆ. ಆದರೆ ಸ್ಥಳೀಯ ಮಾಹಿತಿ ಪ್ರಕಾರ ಮದ್ಯ ವ್ಯಸನದಿಂದ ಆತ ಹಾರಿದ್ದಾನೆ ಎಂಬ ಮಾಹಿತಿ ಕೇಳಿ ಬರುತ್ತಿದೆ. ಕೆಳಗೆ ಬಿದ್ದ ಪ್ರಯಾಣಿಕನ ಕೈ ಬೆರಳು ಕಟ್ ಆಗಿದೆ ಎಂದು ಹೇಳಲಾಗುತ್ತಿದೆ. 


ಬೆರಳು ಕಟ್ ಆದ ಪ್ರಯಾಣಿಕನ ಹೆಸರು ಶಂಕರ್ ಎಂದು ತಿಳಿದು ಬಂದಿದೆ. ತಕ್ಷಣವೇ ಆತನನ್ನ ಮೆಗ್ಗಾನ್ ಗೆ ದಾಖಲಿಸಲಾಗಿದೆ. 



Post a Comment

Previous Post Next Post