ಭದ್ರಾವತಿಯಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಹಾಗೂ ಅವರ ಪುತ್ರನನ್ನ ಬಂಧಿಸುವಂತೆ ಆಗ್ರಹಿಸಿ ಜೆಡಿಎಸ್ ಬೃಹತ್ ಪ್ರತಿಭಟನೆ ನಡೆಸಿದೆ.
ಮಾಧವಾಚಾರ್ ವೃತ್ತದಿಂದ ತಾಲೂಕ್ ಕಚೇರಿಯ ವರೆಗೆ ಬಂದ ಪ್ರತಿಭಟನೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರ ಸ್ವಾಮಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕಡಿದಾಳ್ ಗೋಪಾಲ್ ಶಾರದ ಅಪ್ಪಾಜಿ ಗೌಡ, ಅಜಿತ್ ಗೌಡ, ಶಾಸಕಿ ಶಾರದ ಪೂರ್ಯನಾಯ್ಕ್ , ಜೆಡಿಎಸ್ ಉಪಾಧ್ಯಾಧ್ಯಕ್ಷ ಕೆ.ಬಿ.ಪ್ರಸನ್ನ ಕುಮಾರ್, ಮಧು, ಬಿಜೆಪಿಯ ಧರ್ಮಪ್ರಸಾದ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ತಹಶೀಲ್ದಾರ್ ಕಚೇರಿಯ ಎದುರು ಪ್ರತಿಭಟನಾ ಮೆರವಣಿಗೆಯಲ್ಲಿ ಮಾತನಾಡಿದ ಜೆಡಿಎಸ್ ಉಪಾಧ್ಯಕ್ಷ ಕೆಬಿ ಪ್ರಸನ್ನ ಕುಮಾರ್ ನಾವು ಮರಳು ವಿಚಾರದಲ್ಲಿ ಕುಮ್ಮಕ್ಕು ನೀಡಿದ್ದೇವೆಂದು ಇಲ್ಲಿನ ಶಾಸಕರು ನುಡಿದಿದ್ದಾರೆ. ನಾವು ಇದರಲ್ಲಿ ಭಾಗಿಯಿಲ್ಲ. ಪದೇ ಪದೇ ಇದನ್ನಹೇಳುವ ಬದಲು ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲು ನಾವು ಸಿದ್ದ, ನೀವು ಬಂದು ಆಣೆ ಮಾಡಲು ಸಿದ್ದರಿದ್ದೀರಾ ಎಂದು ಸವಾಲು ಎಸೆದರು.
ಶಾರದಾ ಅಪ್ಪಾಜಿ ಗೌಡ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರು ಇಲ್ಲ. ದೇವರು ಅವರಿಗೆ ಆಯಸ್ಸು ಕೊಡಲಿ ಆದರೆ ಕ್ಷೇತ್ರದ ಅಭಿವೃದ್ಧಿ ಇಲ್ಲ. ಭದ್ರಾವತಿಯಲ್ಲಿ ಪ್ರತಿ ಎರಡು ಅಂಗಡಿಗೆ ಒಂದು ಅಂಗಡಿಯಂತೆ ಓಸಿ ಬರೆಯುತ್ತಾರೆ. ಅದಕ್ಕೆ ಶಾಸಕರ ಬೆಂಬಲಿಗರಿದ್ದಾರೆ. ಅಧಿಕಾರಿಗಳು ಕಣ್ಣುಮುಚ್ಚಿಕೊಂಡು ಕುಳಿತೊದ್ದಾರೆ.
ಅಪ್ಪಾಜಿಗೌಡರು ಇದ್ದಾಗ ಅಭಿವೃದ್ಧಿ ಆಗಿದ್ದು ಬಿಟ್ಟರೆ ಈಗ ಅಭಿವೃದ್ಧಿ ಇಲ್ಲ. ಅಭಿವೃದ್ಧಿ ಇದ್ದರೆ ನನಗೆ ಕಾಣಿಸುತ್ತಿಲ್ಲ ಜನರಿಗೆ ಕಾಣುತ್ತಿಲ್ಲ. ಶಿಫ್ಟ್ ವೈಸ್ ಓಸಿ ಆಡಸಲಾಗುತ್ತಿದೆ. ನಾಟ ಒಡಯುತ್ತಿದ್ದರು ಆರ್ ಎಫ್ ಒ ಕಣ್ಣುಮುಚ್ಚಿಕುಳಿತ್ತಿದ್ದಾರೆ. ಅಧಿಕಾರಿಗಳು ಅಧಿಕಾರಿಗಳಾಗಿ ಕೆಲಸ ಮಾಡಲಿ ಎಂದು ತಿಳಿಸಿದರು.
Post a Comment