ಮಲೆನಾಡಿಗೂ ಬಂತು ತುಳು ನಾಡಿನ ಜಾನಪದ ಕ್ರೀಡೆಏಪ್ರಿಲ್ ೧೯, ೨೦ ಕ್ಕೆ ಶಿವಮೊಗ್ಗದಲ್ಲಿ ಅದ್ದೂರಿ ಕಂಬಳ ಉತ್ಸವ- ಫೆ. ೧೦ ಕ್ಕೆ ಭೂಮಿ ಪೂಜೆ ನಡೆಯಲಿದೆ.
* ಮಾಚೇನಹಳ್ಳಿಯ ತುಂಗ -ಭದ್ರಾ ಜಂಕ್ಷನಿನಲ್ಲಿ ಕಂಬಳಕ್ಕೆ ಜಾಗ ಫಿಕ್ಸ್
* ೧೬ ಎಕರೆ ಜಾಗದಲ್ಲಿ ಕಂಬಳಕ್ಕೆ ಸಿದ್ದತೆ, ಒಂದು ತಿಂಗಳ ಕಾಲವಾದಿಯಲ್ಲಿ ಟ್ರಾö್ಯಕ್ ನಿರ್ಮಾಣ
* ದಕ್ಷಿಣ ಕನ್ನಡ- ಶಿವಮೊಗ್ಗ ಜಿಲ್ಲೆಯ ಸಾಂಸ್ಕೃತಿಕ ಸಮ್ಮಿಲನದ ಅಪರೂಪದ ಕ್ಷಣ
* ೧೦೦ ಜೊತೆ ಕೋಣಗಳಿಂದ ಓಟದ ಸ್ಪರ್ಧೆ, ೨೫೦ ವಿವಿಧ ಸ್ಟಾಲ್ ಗಳ ಸ್ಥಾಪನೆ
ತುಳುನಾಡಿನ ವೀರ ಜಾನಪದ ಕ್ರೀಡೆ ಎಂದೇ ಹೆಸರಾದ ಕಂಬಳ ಈಗ ಮಲೆನಾಡಿಗೂ ಕಾಲಿಡುತ್ತಿದ್ದು,ಇದೇ ಮೊದಲ ಬಾರಿಗೆ ಏಪ್ರಿಲ್ ೧೯ ಮತ್ತು ೨೦ ರಂದು ಎರಡು ದಿನಗಳ ಕಾಲ ಶಿವಮೊಗ್ಗದಲ್ಲಿಯೇ ಬೃಹತ್ ಮಟ್ಟದ ಕಂಬಳ ನಡೆಯಲಿದೆ. ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಸಹಭಾಗಿತ್ವದಲ್ಲಿ ನಡೆಯುವ ಈ ಕಂಬಳ ಉತ್ಸವಕ್ಕೆ ಮಲೆನಾಡ ತುಂಗ ಭದ್ರಾ ಜೋಡುಕರೆ ಕಂಬಳ ಸಮಿತಿ ಸಕಲ ರೀತಿಯಲ್ಲಿ ಸಿದ್ದತೆ ನಡೆಸಿದೆ.
ಸಮಿತಿ ಗೌರವಾಧ್ಯಕ್ಷರಾಗಿ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿಯೇ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಪಸ್ಥಿತಿಯಲ್ಲಿಯೇ ಇಂದು ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಪತ್ರಿಕಾ ಗೋಷ್ಠಿ ನಡೆಸುವ ಮೂಲಕ ಶಿವಮೊಗ್ಗದ ಕಂಬಳ ಉತ್ಸವವನ್ನು ಅಧಿಕೃತವಾಗಿ ಪ್ರಕಟಿಸಿದರು.
ಆರಂಭದಲ್ಲಿ ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಅವರು ಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗೆಯ ಸಾಂಸ್ಕೃತಿಕ ಪರಂಪರೆಯ ಮುಕ್ಕುಟಕ್ಕೆ ತುಳುನಾಡ ವೀರ ಜಾನಪದ ಕ್ರೀಡೆ ಕಂಬಳ ದ ಗರಿ ಸೇರ್ಪಡೆಯಾಗುತ್ತಿರುವುದು ಸಂತಸ ತಂದಿದೆ. ಆಕ್ಷಣಕ್ಕೆ ಸಮಿತಿ ಉತ್ಸುಕವಾಗಿದೆ ಎಂದು ವಿವರಿಸಿದರು.
ಶಿವಮೊಗ್ಗೆಯಲ್ಲಿ ಅದ್ದೂರಿ ಕಂಬಳ ನಡೆಸಬೇಕೆನ್ನುವ ಸಮಿತಿಯ ಮಹದಾಸೆಯು ಈಶ್ವರಪ್ಪ ಅವರ ನೇತೃತ್ವ ಮತ್ತು ಇಲ್ಲಿನ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ. ರಾಘವೇಂದ್ರ ಅವರು ಬಸೇರಿದಂತೆ ಅನೇಕಮ ಮಂದಿ ಹಿರಿಯರ ಮೂಲಕ ನೇರವೇರುತ್ತಿದೆ. ಅದಕ್ಕಾಗಿಯೇ ಮಲೆನಾಡ ತುಂಗ ಭದ್ರಾ ಜೋಡುಕರೆ ಕಂಬಳ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಅದರಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಸಚಿವರಾದ ಮಧು ಬಂಗಾರಪ್ಪ ಸೇರಿದಂತೆ ಅನೇಕರು ಇದ್ದಾರೆ. ಅವರ ಎಲ್ಲಾ ಸಹಕಾರದ ಮೂಲಕವೇ ಕಂಬಳದ ಸಿದ್ದತೆ ನಡೆದಿದೆ. ಫೆ. ೧೦ ರಂದು ಇಲ್ಲಿನ ಮಾಚೇನಹಳ್ಳಿಯ ತುಂಗ-ಭದ್ರಾ ಜಂಕ್ಷನ್ ನಲ್ಲಿ ಭೂಮಿ ಪೂಜೆ ನೆರವೇರಲಿದೆ ಎಂದರು.
ಅಂದಿನ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಕಂಬಳ ಸಮಿತಿಯ ಅನೇಕ ಗಣ್ಯರೊಂದಿಗೆ ಇಲ್ಲಿನ ಅನೇಕ ಮಂದಿ ಗಣ್ಯರು ಹಾಜರಿರಲಿದ್ದಾರೆ. ಅಂದಿನ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕಂಬಳದ ಲೋಗೋ, ವೆಬ್ ಸೈಟ್ ಮತ್ತು ಸಾಮಾಜಿಕ ಜಾಲತಾಣವನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು. ಅಂದಿನಿAದಲೇ ಕಂಬಳದ ಪೂರ್ವ ತಯಾರಿ ಶುರುವಾಗಲಿದೆ. ಕಂಬಳಕ್ಕೆ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಭೂಮಿ ನೀಡಿದ್ದಾರೆ. ಸುಮಾರು ೧೬ ಎಕರೆ ಜಾಗದಲ್ಲಿ ಕಂಬಳ ನಡೆಯಲಿದೆ. ಒಂದು ಕಾಲ ಕಂಬಳಕ್ಕೆ ಬೇಕಾಗುವ ಟ್ರ್ಯಾಕ್ ನಿರ್ಮಾಣ ಕಾರ್ಯ ನಡೆಯಲಿದೆ ಎಂದರು.
ಕಂಬಳ ಸಮಿತಿಯ ಗೌರವಾಧ್ಯಕ್ಷರಾದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ಶಿವಮೊಗ್ಗ- ಚಿಕ್ಕಮಂಗಳೂರು ಜಿಲ್ಲೆಗಳ ಮಟ್ಟಿಗೆ ಇದು ಪ್ರಪ್ರಥಮವಾಗಿ ನಡೆಯುತ್ತಿರುವ ಕಂಬಳ. ಇದನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಎಲ್ಲಾ ರೀತಿಯಲ್ಲೂ ಸಿದ್ದತೆ ನಡೆದಿದೆ. ಎಲ್ಲರ ಪೂರ್ಣ ಸಹಕಾರವನ್ನು ಕೋರಲಾಗಿದೆ. ತುಳು ನಾಡಿನ ಈ ಜಾನಪದ ಕ್ರೀಡೆಯನ್ನು ಮಲೆನಾಡಿನ ಜನರಿಗೂ ಪರಿಚಯಿಸಬೇಕೆನ್ನುವ ಉದ್ದೇಶದೊಂದಿಗೆ ಇಲ್ಲಿ ಕಂಬಳ ಆಯೋಜಿಸಲಾಗಿದೆ ಎಂದರು.
ತುಳುನಾಡಿನಲ್ಲಿ ಒಟ್ಟು ೨೫ ಕಂಬಳಗಳು ನಡೆಯಲಿವೆ. ಈಗಾಗಲೇ ನವೆಂಬರ್ ತಿಂಗಳಿನಿಂದಲ್ಲೆ ಕಂಬಳ ಶುರುವಾಗಿವೆ. ಕನಿಷ್ಠ ಎಂಟ್ಹತ್ತು ಕಂಬಳಗಳು ಈಗಾಗಲೇ ನಡೆದು ಹೋಗಿವೆ. ಇನ್ನಷ್ಟ ನಡೆಯಲಿಕ್ಕಿವೆ. ಪ್ರಸಕ್ತ ಸಾಲಿನ ಕೊನೆಯ ಕಂಬಳವಾಗಿ ಏ.೧೯ ಮತ್ತು ೨೦ ಕ್ಕೆ ಶಿವಮೊಗ್ಗದ ಕಂಬಳ ನಡೆಯಲಿದೆ. ನಾನು ಇದುವರೆಗೂ ಕಂಬಳವನ್ನು ದೂರದಿಂದ ನೋಡಿದ್ದೆ. ಸಚಿವನಾಗಿದ್ದಾಗ ಒಮ್ಮೆ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಬಂದಿತ್ತು. ಆದರೆ ಅಂದು ಅಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅದು ಶಿವಮೊಗ್ಗದಲ್ಲಿ ನಡೆಯುವ ಸಮಿತಿಗೆ ನಾನೇ ಗೌರವಾಧ್ಯಕ್ಷನಾಗಿ ನಡೆಸುವ ಜವಾಬ್ದಾರಿ ಹೊತ್ತು ಕೊಂಡಿರುವುದು ಸಂತಸ ತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಲೆನಾಡ ತುಂಗಭದ್ರಾ ಜೋಡುಕರೆ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಕೆ.ಇ. ಕಾಂತೇಶ್, ಮುಖಂಡರಾದ ಇ. ವಿಶ್ವಾಸ್, ಸಂದೀಪ್ ಶೆಟ್ಟಿ, ಕಿರಣ್ ಕುಮಾರ್ ಮಂಚಿಲ್ಲಾ, ಶಶಿಧರ್ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಜಾದವ್, ಚಿದಾನಂದ, ಶ್ರೀಕಾಂತ್, ಶಿವಾಜಿ, ರಾಜಯ್ಯ, ರಾಜಣ್ಣ, ಕುಬೇರಪ್ಪ ಮತ್ತಿತರರು ಹಾಜರಿದ್ದರು.
ನಾನು ಇದುವರೆಗೂ ಕಂಬಳವನ್ನು ದೂರದಿಂದ ನೋಡಿದ್ದೆ. ಸಚಿವನಾಗಿದ್ದಾಗ ಒಮ್ಮೆ ಅತಿಥಿಯಾಗಿ ಪಾಲ್ಗೊಳ್ಳುವ ಅವಕಾಶ ಬಂದಿತ್ತು. ಆದರೆ ಅಂದು ಅಲ್ಲಿ ಪಾಲ್ಗೊಳ್ಳುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಮಲೆನಾಡ ತುಂಗ ಭದ್ರಾ ಜೋಡುಕರೆ ಸಮಿತಿಯು ಬಂದು ಕಂಬಳ ನಡೆಸೋಣ ಎಂದಾಗ ತುಂಬಾ ಸಂತೋಷದಿಂದಲೇ ಇದರಲ್ಲಿ ನಾನು ಒಬ್ಬನಾಗಿದ್ದೇನೆ. ಶಿವಮೊಗ್ಗ- ಚಿಕ್ಕಮಂಗಳೂರು ಜಿಲ್ಲೆಗಳ ಮಟ್ಟಿಗೆ ಇದು ಪ್ರಪ್ರಥಮವಾಗಿ ನಡೆಯುತ್ತಿರುವ ಕಂಬಳ. ಇದನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ತಯಾರಿ ಡನೆದಿದೆ. ಈ ಅಪರೂಪದ ಕ್ಷಣಕ್ಕೆ ಎಲ್ಲರ ಸಹಕಾರ ಮುಖ್ಯ.
- ಕೆ.ಎಸ್. ಈಶ್ವರಪ್ಪ, ಕಂಬಳ ಸಮಿತಿ ಗೌರಾವಧ್ಯಕ್ಷರು
-----------------------------------------
ಮಲೆನಾಡ ತುಂಗ ಭದ್ರಾ ಜೋಡುಕರೆ ಕಂಬಳ ಉತ್ಸವಕ್ಕೆ ದಕ್ಷಿಣ ಕನ್ನಡದಿಂದಲೇ ೧೦೦ ಜೊತೆ ಕೋಣಗಳನ್ನು ತರಲಾಗುತ್ತಿದೆ. ಅವುಗಳ ಜೊತೆ ಸಾಕಷ್ಟು ಮಂದಿ ಅಲ್ಲಿಂದಲೇ ಬರಲಿದ್ದಾರೆ. ಹಾಗೆಯೇ ಅನೇಕ ಸೆಲಿಬ್ರಿಟಿಗಳನ್ನು ಕೂಡ ಉತ್ಸವಕ್ಕೆ ಆಹ್ವಾನಿಸಲಾಗುತ್ತಿದೆ. ಕಂಬಳಕ್ಕೆ ಭೂಮಿ ನೆರವೇರಿದ ಬಳಿಕ ಒಂದು ತಿಂಗಳು ಟ್ರ್ಯಾಕ್ ನಿರ್ಮಾಣಕ್ಕೆ ಸಮಯ ಬೇಕಿದೆ. ಆ ನಡುವಿನ ಕಾಲಾವಧಿಯಲ್ಲಿ ಕಂಬಳದ ಉಳಿದ ಸಿದ್ದತೆಗಳು ನಡೆಯಲಿವೆ.
-ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ, ಸಮಿತಿ ಅಧ್ಯಕ್ಷರು.
.....................................................
ಫೆ. ೧೦ ರಂದು ಮಧ್ಯಾಹ್ನ ಮೂರು ಗಂಟೆಗೆ ಮಾಚೇನಹಳ್ಳಿಯ ತುಂಗ-ಭದ್ರಾ ಜಂಕ್ಷನ್ ಬಳಿ ನಮ್ಮದೇ ೧೬ ಎಕರೆ ಜಾಗದಲ್ಲಿ ಕಂಬಳಕ್ಕೆ ಭೂಮಿ ಪೂಜೆ ನಡೆಯಲಿದೆ. ಎಪ್ರಿಲ್ ೧೯ ಮತ್ತು ೨೦ಕ್ಕೆ ಎರಡು ದಿನಗಳ ಕಾಲ ಕಂಬಳ ನಡೆಯಲಿದೆ. ಕಂಬಳಕ್ಕೆ ಬರುವ ಕೋಣಗಳು, ಗಣ್ಯರ ಆಹ್ವಾನ ಇತ್ಯಾದಿ ಸಂಗತಿಗಳನ್ನು ಸಮಿತಿಯ ಅಧ್ಯಕ್ಷರು ನೋಡಿಕೊಳ್ಳಲಿದ್ದಾರೆ. ಉಳಿದಂತೆ ಇಲ್ಲಿನ ಸಿದ್ದತೆಗಳನ್ನು ನಾವು ನೋಡಿಕೊಳ್ಳಲಿದ್ದೇವೆ. ಇದು ಅದ್ದೂರಿ ಕಂಬಳ. ಇದಕ್ಕೆ ೮ ರಿಂದ ೧೦ ಲಕ್ಷ ಜನ ಸೇರುವ ನಿರೀಕ್ಷೆಯಿದೆ.
- ಕೆ. ಇ. ಕಾಂತೇಶ್, ಸಮಿತಿಯು ಕಾರ್ಯಾಧ್ಯಕ್ಷ
Post a Comment