ವಿವಾಹಿತ ಮಹಿಳೆಯ ಪರಿಸ್ಥಿತಿಯನ್ನ ದುರುಪಯೋಗ ಪಡಿಸಿಕೊಂಡ ಕಾಮುಕನೋರ್ವ ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ ಬಿಡಿಸಲು ಬಂದ ಮೈದುನನ ಮೇಲೆ ಹರಿತವದ ಆಯುಧದಿಂದ ದಾಳಿ ನಡೆಸಿರುವ ಘಟನೆ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ.
ವಿವಾಹಿತ ಮಹಿಳೆಯ ಪತಿಗೆ ಆಗಾಗ್ಗೆ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದ ಪರಿಣಾಮ ಅವರ ಸಹೋದರ ಅವರ ಮನೆಗೆ ಬಂದು ಅಣ್ಣ ಅತ್ತಿಗೆಯನ್ನ ಮಾತನಾಡಿಸಿಕೊಂಡು ಹೋಗುತ್ತಿದ್ದ. ರಾಜೀವ್ ಗಾಂಧಿ ಬಡಾವಣೆಯ ಪುಡಿ ರೌಡಿಯಂತೆ ವರ್ತಿಸುವ ಚಿಂಗಾರಿ ಎಂಬಾತ ಮಹಿಳೆಯ ಮೈದುನನ್ನ ಕಂಡು ಇದು ನಮ್ಮ ಏರಿಯಾ ಇಲ್ಲಿ ಮತ್ತೊಮ್ಮೆ ಕಂಡರೆ ಕೈಕಾಲು ಮುರಿಯುವುದಾಗಿ ಬೆದರಿಕೆ ಹಾಕಿದ್ದನು.
ಎರಡು ದಿನಗಳ ಹಿಂದೆ ರಾತ್ರಿ ಮಹಿಳೆ ಊಟದ ಬಟ್ಟಲು ಹೊರಗೆ ತೊಳೆಯಲು ಹಾಕಲು ಬಂದಾಗ ಕುಡಿದ ನಿಶೆಯಲ್ಲಿಯದ್ದ ಚಿಂಗಾರಿ ಶಿಳ್ಳೆ ಹೊಡೆದೊದ್ದಾನೆ. ಮನೆಯ ಒಳಗೆ ಹೋಗಲು ಯತ್ನಿಸಿದ ಮಹಿಳೆಯ ಕೈಯನ್ನ ಹಿಡಿದು ಎಳೆದು ಮಹಿಳೆಯ ಟೀಶರ್ಟ್ ಹಿಡಿದು ಎಳೆದು ಮಾನಭಂಗಕ್ಕೆ ಎತ್ನಿಸಿದ್ದಾನೆ.
ಅಷ್ಟು ಹೊತ್ತಿಗೆ ಮಹಿಳೆ ಕಿರುಚಿಕೊಂಡ ಪರಿಣಾಮ ಮಹಿಳೆಯ ಮೈದುನ ಬಿಡಿಸಿಕೊಳ್ಳಲು ಯತ್ನಿಸಿದಾಗ ಮೈದುನ ಮೇಲೆ ಹಲ್ಲೆ ನಡೆಸಿದ್ದಾನೆ. ಕುಡಿದರೆ ನಿನಗೆ ತಾಯಿ ತಂಗಿ ಎಂದು ಪ್ರಶ್ನಿಸಿದ ಮೈದುನನಿಗೆ ನಮ್ಮ ಏರಿಯಾಕ್ಕೆ ಬರಬೇಡ ಎಂದರೂ ಬಂದಿದ್ದೀಯ ಎಂದು ಚಾಕುವನ್ನ ತಂದು ಇರಿಯಲು ಯತ್ನಿಸಿದ್ದಾನೆ.
ಪ್ರಕರಣ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Post a Comment