ವಿದ್ಯುತ್ ವ್ಯತ್ಯಯ-ಸಹಕರಿಸಲು ಮನವಿ

 

ಶಿವಮೊಗ್ಗದಲ್ಲಿ ನಾಳೆ ಮತ್ತು ನಾಡಿದ್ದು ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜಿನಿಕರು ಸಹಕರಿಸಲು ಕೋರಲಾಗಿದೆ. 


ಶಿವಮೊಗ್ಗ ಎಂ.ಆರ್.ಎಸ್. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಇರುವುದರಿಂದ ಫೆ.06 ರಂದು ಬೆಳಗ್ಗೆ 9.00 ರಿಂದ ಸಂಜೆ 5.00ರವರೆಗೆ ಈ ಮಾರ್ಗಗಳಿಂದ ವಿದ್ಯುತ್ ಸರಬರಾಜಾಗುವ ಗ್ರಾಮಗಳಾದ ಹೊಳೆಬೆನವಳ್ಳಿ , ದೊಡ್ಡತಾಂಡ, ಹೊಸಮನೆತಾಂಡ, ಪಿಳ್ಳಂಗಿರಿ, ಜಾವಳ್ಳಿ, ತಿರುವಳ್ಳಿ, ಅಬ್ಬರಘಟ್ಟ, ತರಗನಹಳ್ಳಿ ಕ್ರಾಸ್, ಹಾರೋಬೆನವಳ್ಳಿ, ಹಾರೋಬೆನವಳ್ಳಿ ತಾಂಡ, ಗೌಡನಾಯ್ಕನಹಳ್ಳಿ, ಬಿ.ಬೀರನಹಳ್ಳಿ, ಹೊಯ್ಸನಹಳ್ಳಿ, ಯಲವಟ್ಟಿ, ಹಸೂಡಿ, ಹಸೂಡಿಫಾರಂ, ವೀರಭದ್ರಕಾಲೋನಿ, ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ, ಬಂಗಾರಪ್ಪ ಕಾಲೋನಿ, ಜಿ.ಜಿ.ಕ್ಯಾಂಪ್, ಚಿಕ್ಕಮರಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 


ಫೆ. 07 ರಂದು ವಿದ್ಯುತ್ ವ್ಯತ್ಯಯ


ಶಿವಮೊಗ್ಗ ನಗರದ ಗಾಂಧಿ ಬಜಾರ್‌ನ ರಾಮಣ್ಣಶ್ರೇಷ್ಠಿ ಪಾರ್ಕ್ ಬಳಿ ಹೊಸ ವಿದ್ಯುತ್ ಕಂಬಗಳ ಅಳವಡಿಕೆ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಫೆ.07 ರಂದು ಬೆಳಗ್ಗೆ 09.00 ರಿಂದ ಸಂಜೆ 6.00ರವರೆಗೆ ಗಾಂಧಿಬಜಾರ್, ಎಲೆರೇವಣ್ಣ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ವಿನಾಯಕ ರಸ್ತೆ, ಅನವೇರಪ್ಪ ಕೇರಿ, ಯಾಲಕಪ್ಪ ಕೇರಿ, ಬೇಡರ ಕೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. 

Post a Comment

Previous Post Next Post